ತಾವರಗೇರಾ ಪಟ್ಟಣದ ನಾಡ ಕಚೇರಿಯ ಅಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ.  ಕರ್ನಾಟಕ ರಾಜ್ಯೋತ್ಸವ ಅಚರಣೆಗೆ/ಮೆರವಣಿಗೆಗೆ ಅನುಮತಿ ಕೋರಿ….

Spread the love

ತಾವರಗೇರಾ ಪಟ್ಟಣದ ನಾಡ ಕಚೇರಿಯ ಅಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ.  ಕರ್ನಾಟಕ ರಾಜ್ಯೋತ್ಸವ ಅಚರಣೆಗೆ/ಮೆರವಣಿಗೆಗೆ ಅನುಮತಿ ಕೋರಿ….

೨೮ ಅಕ್ಟೋಬರ್ ೨೦೨೧ ವಿಷಯ : ಕರ್ನಾಟಕ ರಾಜ್ಯೋತ್ಸವ ಆಚರಣೆ / ಮೆರವಣಿಗೆಗೆ ಅನುಮತಿ ನೀಡುವ ಕುರಿತು . ಮಾನ್ಯರೆ , ಹರಿದು ಹಂಚಿ ಹೋಗಿದ್ದ ನಾಡು ಭಾಷೆಯ ಆಧಾರದ ಮೇಲೆ ಏಕೀಕರಣಗೊಂಡ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್ ೧ ರಂದು ಆಚರಿಸುವ ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆ / ಆಚರಣೆಗೆ ಸರಕಾರ ಕರೊನಾ ನೆಪದಲ್ಲಿ ಅನುಮತಿ ನಿರಾಕರಿಸುತ್ತಿರುವ ಕನ್ನಡ ವಿರೋಧಿ ನೀತಿಯನ್ನು ಕರ್ನಾಟಕ ನವನಿರ್ಮಾಣ ಸೇನೆ ತೀವ್ರವಾಗಿ ಖಂಡಿಸುತ್ತದೆ . ರಾಜಕೀಯ ಪಕ್ಷಗಳ ಸಮಾವೇಶ ರ್ಯಾಲಿಗಳಿಗಿಲ್ಲದ ಕರೋನಾ ನಿಯಮಗಳು ರಾಜ್ಯಾದ್ಯಂತ ರಾಜ್ಯೋತ್ಸವದ ಆಚರಣೆಗಳಿಗೆ ಅನ್ವಯಿಸಲು ಹೊರಟಿರುವುದು ನಿಜಕ್ಕೂ ನಾಡದ್ರೋಹ ತನ , ಜನಾರ್ಶೀವಾದ ರ್ಯಾಲಿ , ಹಾನಗಲ್ , ಸಿಂದಗಿ ಉಪ ಚುನಾವಣೆ ಸೇರಿದಂತೆ ಅನೇಕ ಸರಕಾರಿ ಕಾರ್ಯಕ್ರಮಗಳು ಲಂಗು ಲಗಾಮಿಲ್ಲದೆ ನಡೆಯುತ್ತಿರಬೇಕಾದರೆ ರಾಜ್ಯೋತ್ಸವ ದಂಥಹ ಕನ್ನಡಿಗರ ಹಬ್ಬಕ್ಕೆ ಅಡ್ಡಿ ಯಾಕೆ ? ಜಿಲ್ಲೆ ತಾಲೂಕು ಕೇಂದ್ರಗಳಲ್ಲಿ ನಡೆಯುತ್ತಿರುವ ರಾಜ್ಯೋತ್ಸವದ ಪೂರ್ವ ಭಾವಿ ಸಭೆಗಳಲ್ಲಿ ಜಿಲ್ಲಾಧಿಕಾರಿಗಳು / ತಹಶಿಲ್ದಾರರು ಸರಕಾರದಿಂದ ರಾಜ್ಯೋತ್ಸವದ ಮೆರವಣಿಗೆಗೆ ಅನುಮತಿ ಬಂದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಬೆಳಗಾವಿಯಂಥಹ ಗಡಿ ಜಿಲ್ಲೆಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮವನ್ನೇ ನಿಷೇಧಿಸುಂತಹ ಸಂಚು ಸರಕಾರ ರೂಪಿಸುತ್ತಿರುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ , ನಾಡುನುಡಿ ಜಲಗಡಿ ಭಾಷೆಯ ರಕ್ಷಣೆ ಮಾಡ ಬೇಕಾದ ಸರಕಾರವೇ ಇಂಥಹ ಹೀನ ಕೆಲಸಕ್ಕೆ ಇಳಿಯುತ್ತಿರಯವುದು ಬೇಸರದ ಸಂಗತಿ ರಾಜ್ಯೋತ್ಸವ ಆಚರಣೆ , ಮೆರವಣಿಗೆಗೆ ಸರಕಾರ ನಿಬಂಧನೆಗಳನ್ನು ಹೇರಿದ್ದೇ ಆದರೆ ಸರಕಾರ ಕಿತ್ತೋಗಿಯವರೆಗೂ ರಾಜ್ಯಾದ್ಯಂತ ಕರ್ನಾಟಕ ನವನಿರ್ಮಾಣ ಸೇನೆ ಸೇರಿದಂತೆ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಸಿದ್ಧವಾಗಿವೆ ಎನ್ನುವುದು ಸರಕಾರ ಮರೆಯಬಾರದು . ಸರಕಾರ ಈ ಕೂಡಲೇ ಬೇಷರತ್ತಾಗಿ ರಾಜ್ಯೋತ್ಸವಕ್ಕೆ ರಾಜ್ಯಾದ್ಯಂತ ಅನುಮತಿ ನೀಡಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯಿಸುತ್ತದೆ.ಒಂದು ವೇಳೆ ಸರಕಾರ ಉದ್ಧಟತನ ತೋರಿದ್ದೇ ಆದರೆ ಮುಂದೆ ಆಗುವ ಅನಾಹುತಕ್ಕೆ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ. ಎಂದು ಮನವಿ ಪತ್ರದಲ್ಲಿ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಕೊಟ್ಟಿರುವುದು ವಿಶೇಷವಾಗಿದೆ. ಕೂಡಲೇ ರಾಜ್ಯೋತ್ಸವಕ್ಕೆ ರಾಜ್ಯಾದ್ಯಂತ ಮಂಜೂರಾತಿ ನೀಡಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಸರ್ಕಾರವನ್ನು ಒತ್ತಾಯಿಸಿದೆ. ಶ್ರೀ ಮ್ಯಾನ ಮುಖ್ಯಮಂತ್ರಿಗಳಿಗೆ ಮಾನ್ಯ ಉಪ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲ್ಲಾಲಿತು. ಈ ಸಂದರ್ಭದಲ್ಲಿ ಕರ್ನಾಟಕ ನವನಿರ್ಮಾಣ ಸೇನೆಯ ಹೋಬಳಿ ಘಟಕದ ಅಧ್ಯಕ್ಷರು ಸಿದ್ದನಗೌಡ ಪುಂಡಗೌಡ್ರು ನಗರ ಘಟಕದ ಅಧ್ಯಕ್ಷರು, ನಬೀಸಾಬ್ ನವಲಿ, ಸಲೀಂ ನಾಯಕ್, ಜಗ್ಗು ಬಿಳೆದಗುಡ್ಡ, ಹನುಮೇಶ ಪುಂಡಗೌಡ್ರು, ವೆಂಕಟೇಶ್ ಯಾದವ್, ಲಾಲಸಾಬ್, ನಬಿ, ಹಾಗೂ ಇತರರು ಉಪಸ್ಥಿತರಿದ್ದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *