ಕೂಡ್ಲಿಗಿ:ರಾಜ್ಯೋತ್ಸವ ಆಚರಣೆ ಖಡ್ಡಾಯ…

Spread the love

ಕೂಡ್ಲಿಗಿ:ರಾಜ್ಯೋತ್ಸವ ಆಚರಣೆ ಖಡ್ಡಾಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಹಶಿಲ್ದಾರರ ಕಛೇರಿಯಲ್ಲಿಂದು, ತಾಲೂಕ ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರು   ಸಭೆ ಕರೆಯಲಾಗಿತ್ತು ನಂಬರ್ 1 ಕನ್ನಡ ರಾಜ್ಯೋತ್ಸವ ಅಂಗವಾಗಿ.ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ತಾಲೂಕಿನ ಕೆಲ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಸಂದರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರಾದ ತಾಸಿಲ್ದಾರರಾದ ಟಿ.ಜಗದೀಶರವರು,ಕನ್ನಡ ರಾಜ್ಯೋತ್ಸವದ ಬಗ್ಗೆ ಸರ್ಕಾರದ ಆದೇಶದ ಮೇರಿಗೆ ಸರಳವಾಗಿ ಆಚರಿಸುವುದಾಗಿ ತಿಳಿಸಿದರು. ಕನ್ನಡಪರ ಸಂಘಟನೆಗಳ ಮುಖಂಡರು ಸಲಹೆ ಗಳನ್ನು ಆಲಿಸಿದರು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ  ಕಾಟೇರ ಹಾಲೇಶ್ ಮಾತನಾಡಿ, ಕೂಡ್ಲಿಗಿ ಮುಖ್ಯರಸ್ತೆಗಳ ಅಂಗಡಿಗಳಲ್ಲಿ ನಾಡಹಬ್ಬದಂದು ಕನ್ನಡ ರಾಜ್ಯೋತ್ಸವವನ್ನು ಎಲ್ಲಾ ಅಂಗಡಿಯವರು. ಕನ್ನಡ ಬಾವುಟವನ್ನು ಕಟ್ಟುವಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು, ಶಿಕ್ಷಣ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಸೇರಿದಂತೆ. ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ  ಸರ್ಕಾರದ ಆದೇಶದಂತೆ ಸರಳವಾಗಿ ಕಚೇರಿಗಳಲ್ಲಿ,ಕನ್ನಡ ರಾಜ್ಯೋತ್ಸವವನ್ನು ಆಚರಿಸವುದು ಖಡ್ಡಾಯವೆಂದು ತಿಳಿಸಿದರು. ಸರ್ಕಾರದ ಆದೇಶದನ್ವಯ ಸರ್ವರೂ ಕೋವಿಡ್ ನಿಯಮ ಪಾಲಿಸಲು ಸೂಚಿಸಿದರು.ಎಲ್ಲಾ ಅಧಿಕಾರಿಗಳಿಗೂ ಹಾಗೂ ಸಂಘಟನೆಯ ಮುಖಂಡರುಗಳು ಹಾಗೂ ಮಾಧ್ಯಮ ಮಿತ್ರರು ಪತ್ರಿಕೆಯವರು, ಕೋವಿಡ್ 19 ವ್ಯಾಕ್ಸಿನ್ ಲಸಿಕೆ ಅಭಿಯಾನ ಕುರಿತು ಪ್ರಚುರ ಪಡಿಸಲು ತಹಶಿಲ್ದಾರರು ತಿಳಿಸಿದರು. ತಾಲೂಕು ಮಟ್ಟದ ವಿವಿದ ಇಲಾಖಾಧಿಕಾರಿಗಳು, ಕನ್ನಡ ಪರ ಹಾಗೂ ವಿವಿದ ಸಂಘಟನೆಗಳ ಪದಾಧಿಕಾರಿಗಳು ಮತ್ತು ನಾಗರೀಕರು,ಜನಪ್ರತಿನಿಧಿಗಳು ಉಪಸ್ಥಿತರಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *