ಗೂಡ್ಸ್ ರೈಲಿಗೆ ಸಿಲುಕಿ ಓರ್ವ ಕುರಿಗಾಯಿ ಮತ್ತು ೧೮ ಕುರಿಗಳು ಸ್ಥಳದಲ್ಲಿಯೇ ಸಾವು….

Spread the love

ಗೂಡ್ಸ್ ರೈಲಿಗೆ ಸಿಲುಕಿ ಓರ್ವ ಕುರಿಗಾಯಿ ಮತ್ತು ೧೮ ಕುರಿಗಳು ಸ್ಥಳದಲ್ಲಿಯೇ ಸಾವು….

ಕೊಟ್ಟೂರಿನಿಂದ ಹರಪನಹಳ್ಳಿ ಮಾರ್ಗದ ಕಡೆಗೆ ಗೂಡ್ಸ್ ರೈಲು ಸಂಚರಿಸುವ ರೈಲು ಹಳಿಗಳ ಮದ್ಯೆ ಸಿಲುಕಿ ೧೮ ಕುರಿಗಳು ಮತ್ತು ಓರ್ವ ಕುರಿಗಾಯಿ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಮತ್ತಿಹಳ್ಳಿ ರೈಲ್ವೆ ಗೇಟ್ ಬಳಿ ಭಾನುವಾರ ದಾರುಣ ಘಟನೆ ಸಂಬವಿಸಿದೆ. ತಾಲೂಕಿನ ಹರಾಳು ಗ್ರಾಮದಿಂದ ೧೮ಕ್ಕೂ ಹೆಚ್ಚು ಕುರಿಗಳನ್ನು ಮತ್ತಿಹಳ್ಳಿ ಕ್ರಾಸ್ ಬಳಿಯ ರೈಲು ಹಳಿಗಳನ್ನು ದಾಟಿ ಕುರಿಗಳನ್ನು  ಮೇಯಿಸಲೆಂದು ಕುರಿಗಾಯಿ ಚೌಟಗಿ ಕೊಟ್ರೇಶ್ ತೆರಳಿದಾಗ ಈ ದುರ್ಘಟನೆ ಭಾನುವಾರ ಮದ್ಯಾಹ್ನ ೧ ರ ಸುಮಾರಿಗೆ ನಡೆದಿದೆ. ೧೮ ಕುರಿಗಳು ಮತ್ತು  ಕುರಿಗಾಯಿ ಚೌಟಿಗಿ ಕೊಟ್ರೇಶ್ (೨೪) ಗೂಡ್ಸ್ ರೈಲು ಗಾಡಿಗೆ ಸಿಲುಕಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಗೂಡ್ಸ್ ಗಾಡಿಯ ಓಡಾಟದ ವೇಗದ ಪರಿಣಾಮ ಕುರಿಗಳು ಮತ್ತು ಕುರಿಗಾಯಿ ಕೊಟ್ರೇಶ್ ಅಂಗಾAಗಗಳು ರೈಲ್ವೆ ಹಳಿಯುದ್ದಕ್ಕು ಛಿದ್ರ ಛಿದ್ರವಾಗಿ ಬಿದ್ದಿರುವುದು ಕಂಡುಬAದಿದೆ. ಘಟನಾ ಸ್ಥಳಕ್ಕೆ ಕೊಟ್ಟೂರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನಾಗಪ್ಪ ಭೇಟಿ ನೀಡಿ ಪರಿಶೀಲಿಸಿ ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *