ವಿಜಯನಗರ ಜಿಲ್ಲೆ *ಹೊಸಪೇಟೆಯಲ್ಲಿ ಹಾಡುಹಗಲೇ ದುಷಕೃತ್ಯ ಭಯಭೀತರಾದ ಜನತೆ..

Spread the love

ವಿಜಯನಗರ ಜಿಲ್ಲೆ *ಹೊಸಪೇಟೆಯಲ್ಲಿ ಹಾಡುಹಗಲೇ ದುಷಕೃತ್ಯ ಭಯಭೀತರಾದ ಜನತೆ..

ಬಟ್ಟೆ ಖರೀದಿ ಸೋಗಿನಲ್ಲಿ ಬಂದು ಕೊಲೆ,ದರೋಡಿ ಮಾಡಿದ ತಂಡ*- ಹೊಸಪೇಟೆ: ಬಟ್ಟೆ ಖರೀದಿ ಸೋಗಿನಲ್ಲಿ ಬಂದಿದ್ದ 6 ಜನರಿರುವ ಖಧೀಮರು ತಂಡ ಹಾಡುಹಗಲೇ ಮಹಿಳೆಯರಿಬ್ಬರ ಮೇಲೆ ಹಲ್ಲೆ ನಡೆಸಿ ನಗ-ನಾಣ್ಯ ದೋಚಿ, ಮಹಿಳೆಯರ ಮೇಲೆ ಹಲ್ಯೆಮಡಿ ಒಬ್ಬ ಮಹಿಳೆಯು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆಯು ನಗರದ ರಾಣೀಪೇಟೆಯಲ್ಲಿ ನಡೆದಿದೆ.   ಶುಕ್ರವಾರ ಸಂಜೆ ಸುಮಾರು ಆರು ಗಂಟೆಗೆ ಈ ದುರ್ಘಟನೆ ನಡೆದಿದ್ದು, 68 ವರ್ಷದ ಭುವನೇಶ್ವರಿ ಹಲ್ಲೆಯಿಂದ ಸಾವನ್ನಪ್ಪಿದ್ದು, ಶಿವಕ್ಕ ಗಾಯಗೊಂಡಿದ್ದಾರೆ. ಮನೆಯಲ್ಲೇ ಬಟ್ಟೆ ವ್ಯಾಪಾರ ಮಾಡುತ್ತಿದ್ದು ಸಹೋದರಿಯನ್ನು ಟಾರ್ಗೆಟ್ ಮಾಡಿದ್ದ ಖಧೀಮರು, ಗುರುವಾರದಂದೇ ಗ್ರಾಹಕರ ಸೋಗಿನಲ್ಲಿ ಬಂದಿದ್ದ ತಂಡ ಪೂರ್ವಭಾವಿ ತಯಾರಿ ಮಾಡಿಕೊಂಡಿರುವ ಸಾಧ್ಯತೆಗಳಿದ್ದು ನಮ್ಮ ಮನೆಯಲ್ಲಿ ಮದುವೆ ಇದೇ ನಾಳೆ ಬಂದು ಬಟ್ಟೆ ಖರೀದಿಸುವುದಾಗಿ ಹೇಳಿ ಸಹೋದರಿಯರಲ್ಲಿ ನಂಬಿಕೆ ಬರುವಂತೆ ಮಾಡಿದ್ದಾರೆ. ಅಂತಯೇ ಬಟ್ಟೆ ವ್ಯಾಪಾರ ಸೋಗಿನಲ್ಲಿ ಬಂದ ಖಧೀಮರು ಹಾಡುಹಗಲೇ ಮಹಿಳೆಯರನ್ನು  ಹೆದರಿಸಿ ಬೆದರಿಸಿ ಭಯ ಬರುವಂತೆ ಮಾಡಿದೆ ಪ್ರಾಯಶಃ ಪ್ರತಿರೋಧ ತೋರಿದ ಹಿನ್ನೆಲೆಯಲ್ಲಿಯೋ ಕಟ್ಟಿಹಾಕಿ ದೋಚಲು ಮುಂದಾಗಿರಬಹುದು ಎನ್ನಲಾಗಿದೆ. ಏಕಾಏಕಿ ಮನೆಯ ಹೋಗಿ ಬಾಗಿಲು ಹಾಕಿ, ಮಹಿಳೆಯರ ಮೇಲೆ ಹಲ್ಲೆ ನಡೆಸಿ ಗಾಡ್ರೇಜ್ ಬೀರುಮುರಿದಿದ್ದಾರೆ.  ಇದೊಂದು ಪೂರ್ವ ನಿಯೋಜಿತ ವ್ಯವಸ್ಥಿತವಾದ ಸಂಚೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅತ್ಯಂತ ಜನನಿಭಿಡ ಹಾಗೂ ಸಚಿವರ ಕಚೇರಿಯ ಕೂಗಳತೆ ದೂರದಲ್ಲಿರುವ ಖಾಸಗಿ ಬಸ್‍ನಿಲ್ದಾಣಕ್ಕೆ ಹೊಂದಿಕೊಂಡಿರುವ  ಮುಖ್ಯರಸ್ತೆಯಲ್ಲಿಯೇ ಇರುವ ಮನೆಯಲ್ಲಿಯೇ ಇಂತಹ ಘಟನೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ಪಕ್ಕದಲ್ಲಿಯೆ ಅವರು ಬಂಧುಗಳು ವಾಣಿಜ್ಯ ಮಳಿಗೆಗಳು ಇದ್ದರೂ ಇಂತಹ ಘಟನೆ ನಡೆದಿರುವುದು ಭಯಕ್ಕೆ ಕಾರಣವಾಗಿದೆ. ಈ ಕುರಿತು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಡಿವೈಎಸ್‍ಪಿ ವಿಶ್ವನಾಥರಾವ್ ಕುಲಕರ್ಣಿ ಸೇರಿದಂತೆ  ಅಧಿಕಾರಿಗಳು  ಭೇಟಿ ನೀಡಿ ಪರಿಶೀಲಿಸಿದರು.  ಪ್ರಮುಖ ರಸ್ತೆಯಾಗಿರುವುದರಿಂದ ಅಗತ್ಯ ಮಾಹಿತಿ ದೊರೆಯುವ ಸಾಧ್ಯತೆಗಳಿದ್ದು ಮಾಹಿತಿ ಸಂಗ್ರಹ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣದ ಮಾಹಿತಿ ಕಲೆಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅಕ್ಕಪಕ್ಕದ ಮನೆಯವರು ಬಂದು ಹೋದವರ ಚಲನವಲನಗಳನ್ನು ಗಮನಿಸುತ್ತಿದ್ದಾರೆ ತನಿಖೆಯಿಂದ ನಿಜಾಂಶ ತಿಳಿಯಬೇಕಾಗಿದೆ.“ನಗರದಲ್ಲಿ ಭಯದ ವಾತಾವರಣ” ಹಾಡುಹಗಲೆ ಇಂತಹ ಘಟನೆ ನಡೆದಿರುವುದು ಮತ್ತು ಅತ್ಯಂತ ಜನನಿಭಿಡ ಪ್ರದೇಶದಲ್ಲಿಯೇ ಇಂತಹ ದಾಳಿ, ಕೊಲೆ ದರೋಡಿ ನಡೆದಿರುವುದು ಸಾರ್ವಜನಿಕರಲ್ಲಿ ಭಯ ಮೂಡುವಂತೆ ಮಾಡಿದೆ. ನಗರದ ಹೊರವಲಯದಲ್ಲಿರುವ ಮನೆಯವರಿಗೆ ಸಹಜವಾಗಿ ಭಯವಾಗುವಂತಾಗಿದೆ. ತಕ್ಷಣವೇ ಆರೋಪಿಗಳನ್ನು ಪತ್ತೆಹಚ್ಚುವ ಮೂಲಕ ಪೊಲೀಸರು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *