ಆದಿಕವಿ ಮಹರ್ಷಿ ವಾಲ್ಮೀಕಿಯವರ ಆದರ್ಶ ಜೀವನ ಸರ್ವರಿಗೂ ಪ್ರೇರಣದಾಯಕ : ಸಂಗಮೇಶ ಎನ್ ಜವಾದಿ.

Spread the love

ಆದಿಕವಿ ಮಹರ್ಷಿ ವಾಲ್ಮೀಕಿಯವರ ಆದರ್ಶ ಜೀವನ ಸರ್ವರಿಗೂ ಪ್ರೇರಣದಾಯಕ : ಸಂಗಮೇಶ ಎನ್ ಜವಾದಿ.

ಚಿಟಗುಪ್ಪಾ :  ಶಾಂತಿ, ಸತ್ಯ, ಅಹಿಂಸೆಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಯುಗಪುರುಷ ಮಹರ್ಷಿ ವಾಲ್ಮೀಕಿಯವರು.ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ಮಾನವತ್ವ ಪ್ರೇಮ, ನಿಸ್ವಾರ್ಥ ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆಯೊಂದಿಗೆ, ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಿದಾರೆ. ಅನನ್ಯವಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದ  ಕೀರ್ತಿ ಮಹರ್ಷಿ ವಾಲ್ಮೀಕಿಯವರಿಗೆ ಸಲ್ಲುತ್ತದೆ. ಹೀಗಾಗಿ ಇವರನ್ನು ಕವಿಗಳ ಮಾಹಾಕವಿ ಎಂದು ಸಾಹಿತಿ, ಪರಿಸರ ಸಂರಕ್ಷಕರಾದ ಸಂಗಮೇಶ ಎನ್ ಜವಾದಿಯವರು ಹೇಳಿದರು. ನಗರದ ಸರಕಾರಿ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ಶ್ರೀ ವಾಲ್ಮೀಕಿಯವರ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಅವರು  ಮಾತನಾಡಿ ಪ್ರಾಚೀನ ಭಾರತೀಯ ಕವಿ, ರಾಮಾಯಣದ ಲೇಖಕ, ಮೊದಲ ಮಹಾಕಾವ್ಯದ ಮೊದಲ ಕರ್ತೃ ಹಾಗೂ ತತ್ವಜ್ಞಾನಿ ಮಹರ್ಷಿ ವಾಲ್ಮೀಕಿಯವರ ಜನ್ಮದಿನದ ನೆನಪಿಗಾಗಿ ಇಂದು ವಾಲ್ಮೀಕಿ ಜಯಂತಿ ಆಚರಣೆಯ ಸಂದರ್ಭದಲ್ಲಿ ಅವರಿಗೆ ಗೌರವಪೂರ್ವಕ ಹೃದಯಾಭಿನಂದನೆಯ ಭಕ್ತಿಯ ನಮನಗಳು ಸಲ್ಲಿಸುತ್ತಿದ್ದೇನೆ,ಇವರ ಆದರ್ಶ ಜೀವನ ಸರ್ವರಿಗೂ ಪ್ರೇರಣೆದಾಯಕವಾಗಲಿ ಎಂದು ನುಡಿದರು. ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯ ಮಾಹಾರುದ್ರಪ್ಪಾ ಅಣದೂರೆ ಮಾತನಾಡಿ ವಾಲ್ಮೀಕಿಯವರು ಈ ದೇಶ ಕಂಡ ಅಪ್ರತಿಮ ಸಾಹಿತಿ,ಇವರ ಸೇವೆಯನ್ನು ಸ್ಮರಿಸೋಣ, ಇವರ ನಿಷ್ಕಳಂಕ ವ್ಯಕ್ತಿತ್ವ, ಪ್ರಾಮಾಣಿಕತೆ, ಸರಳ ಜೀವನವನ್ನು ಆದರ್ಶವಾಗಿಸಿಕೊಳ್ಳೋಣ ಎಂದು ತಿಳಿಸಿದರು. ತಾಲೂಕು ಸರಕಾರಿ ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಅನೀಲಕುಮಾರ ಶೀರಮುಂಡಿ ಮಾತನಾಡಿ ಮಹರ್ಷಿ ವಾಲ್ಮೀಕಿ ಯವರು ನಡೆದ ದಾರಿ ನಮಗೆಲ್ಲಾ ಮಾದರಿಯಾಗಲಿ, ಜಾಗತಿಕ ಪ್ರಪಂಚಕ್ಕೆ ಇವರ ಸಾಹಿತ್ಯ ಸೇವೆ ಅಮರವಾಗಲಿ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ, ಶಾಲೆಯ ಮುಖ್ಯೋಪಾಧ್ಯಾಯರಾದ ರಾಜಪ್ಪಾ ಜಮಾದರವರು ಮಾತನಾಡಿ ತಮ್ಮ ಇಡೀ ಜೀವನವನ್ನೇ ಜನಸಾಮಾನ್ಯರ ಅಭ್ಯುದಯಕ್ಕಾಗಿ ಮುಡಿಪಾಗಿಟ್ಟು ಸತ್ಯ , ಅಹಿಂಸೆ ಮತ್ತು ಶಾಂತಿಗಾಗಿ ಶ್ರಮಿಸಿದ ಧೀಮಂತ ವ್ಯಕ್ತಿತ್ವ ಸಂತ,ಸರಳ ಸಜ್ಜನಿಕೆಯ ಮೌಲ್ಯಾಧಾರಿತ ಸಾಹಿತಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಠಲರಾವ ಪಟ್ಟಣಕರ,ಸತ್ಯನಾರಾಯಣ ಮಾಳಾ, ಸಂತೋಷ,ನಾಗೇಶ್ ಚಕಡಿ,ತಿಪ್ಪಣ್ಣಾ ಶರ್ಮಾ, ಚನ್ನಪ್ಪಾ ಅಂಬಲಗಿ, ರವಿ ಲಿಂಗಣ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ – ಸಂಗಮೇಶ ಎನ್ ಜವಾದಿ

Leave a Reply

Your email address will not be published. Required fields are marked *