ಆಮ್ ಆದ್ಮಿ ಪಕ್ಷದ ಗಂಗಾವತಿ ಇವರಿಂದ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಜಯಂತಿ ಆಚರಣೆ….

Spread the love

ಆಮ್ ಆದ್ಮಿ ಪಕ್ಷದ ಗಂಗಾವತಿ ಇವರಿಂದ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಜಯಂತಿ ಆಚರಣೆ….

ಗಂಗಾವತಿ: ದಿನಾಂಕ: ೨೦.೧೦.೨೦೨೧ ರಂದು ನಗರದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ವಾಲ್ಮೀಕಿಯವರ ಜಯಂತಿಯನ್ನು ಆಚರಿಸಲಾಯಿತು. ಗಂಗಾವತಿ ತಾಲೂಕ ಅಧ್ಯಕ್ಷರಾದ ಶರಣಪ್ಪ ಸಜ್ಜಿ ಹೊಲ ವಕೀಲರು ಮಾತನಾಡಿ, ಮಹರ್ಷಿ ವಾಲ್ಮೀಕಿಯ ಶೌರ್ಯ ಮತ್ತು ವಿದ್ವತ್ತು ನಮಗೆಲ್ಲ ಮಾರ್ಗದರ್ಶನವಾಗಬೇಕಾಗಿದ್ದು, ಆ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಿ ಕಾರ್ಯರೂಪಕ್ಕೆ ತರಬೇಕಾಗಿದೆ. ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣದ ಮರ್ಯಾದಾ ಪುರಷೋತ್ತಮ ರಾಮನ ಕಲ್ಯಾಣ ರಾಜ್ಯವಾಗಬೇಕಾಗಿದ್ದ ನಮ್ಮ ದೇಶ ಮತ್ತು ನಾಡು ಭ್ರಷ್ಟಾಚಾರದತ್ತ ಸಾಗುತ್ತಿದೆ. ಜನಸಾಮಾನ್ಯರನ್ನು ಕಡೆಗಣಿಸಲಾಗುತ್ತಿದೆ. ರೈತರನ್ನು ನಿರ್ಲಕ್ಷö್ಯದಿಂದ ನೋಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಪರ್ಯಾಯ ರಾಜಕಾರಣದ ಉದಾಹರಣೆಯಾಗಿ ದೆಹಲಿ ಸರ್ಕಾರ ಜನಸಾಮಾನ್ಯರ ಆಶೋತ್ತರಗಳಿಗೆ ಜೀವ ತುಂಬುತ್ತಾ ಜನಸಾಮಾನ್ಯರ ಧ್ವನಿಯಾಗಿ ಹೊರಹೊಮ್ಮುತ್ತಿದೆ ಎಂದರು. ಈ ಸಂದರ್ಭದಲ್ಲಿ ರಮೇಶ ಕೋಟಿಯವರು ಮಾತನಾಡಿ ಚಂಡದತ್ತ ಎಂಬ ದಾನವ ಮನಃಪರಿವರ್ತನೆ ಆದ ಮೇಲೆ ಮಹರ್ಷಿ ವಾಲ್ಮೀಕಿಯಾಗಿ ಜನಕಲ್ಯಾಣದತ್ತ ಮುಖ ಮಾಡಿರುವ ಕಥೆಯನ್ನು ಬಣ್ಣಿಸಿದರು. ಪ್ರಕಾಶ ಬಿ ವಕೀಲರು ಮಾತನಾಡಿ, ವಾಲ್ಮೀಕಿ ಜಯಂತಿಯ ಶುಭಾಷಯಗಳನ್ನು ಎಲ್ಲರಿಗೂ ಕೋರಿದರು. ಈ ಸಂದರ್ಭದಲ್ಲಿ ಶಿವರಾಜ ಪೂಜಾರಿ, ಶರಣಪ್ಪ ನಾಯಕ, ಆದೆಪ್ಪ ಇಸ್ಲಾಂಪುರ, ರಾಘವೇಂದ್ರ ಸಿದ್ದಿಕೇರಿ, ವೆಂಕಟೇಶ, ಮಂಜುನಾಥ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶರಣಪ್ಪ ಸಜ್ಜಿಹೊಲ ತಾಲೂಕ ಸಂಚಾಲಕರು ಆಮ್ ಆದ್ಮಿ ಪಕ್ಷ, ಗಂಗಾವತಿ. ಮೊ: ೮೧೨೩೭೮೫೭೬೦

ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *