ಬಾಬಾ ಸಾಹೇಬರ ಆಶೋತ್ತರಗಳನ್ನು ಈಡೇರಿಸಲು ಶ್ರಮಿಸೋಣ – ಶಿವಕುಮಾರ ಮ್ಯಾಗಳಮನಿ.

Spread the love

ಬಾಬಾ ಸಾಹೇಬರ ಆಶೋತ್ತರಗಳನ್ನು ಈಡೇರಿಸಲು ಶ್ರಮಿಸೋಣಶಿವಕುಮಾರ ಮ್ಯಾಗಳಮನಿ.

ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದಲ್ಲಿ  ಭಾರತ ವಿದ್ಯಾರ್ಥಿ  ಫೆಡರೇಷನ್‌ ( SFI ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌( DYFI ) ಕವಿತಾಳ ಹಾಗೂ ಅಂಬೇಡ್ಕರ್ ಯುವಕ ಸಂಘಟನೆ, ಸಮಸ್ತ ಅಂಬೇಡ್ಕರ್ ಅಭಿಮಾನಿಗಳಿಂದ  ಡಾ. ಬಿ.ಆರ್. ಅಂಬೇಡ್ಕರ್ ರವರ 130 ನೆಯ ಜಯಂತಿಯನ್ನು ಆಚರಿಸಲಾಯಿತು.  ಅಂಬೇಡ್ಕರ್ ನಗರದಿಂದ ಅಂಬೇಡ್ಕರ್ ಭಾವಚಿತ್ರದ  ಮೆರವಣಿಗೆಯನ್ನು ಆರಂಭಿಸಲಾಯಿತು. ಭಾವಚಿತ್ರಕ್ಕೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಅಮೃತ್ ರಾಥೋಡ್ ಮಲಾರ್ಪಣೆ ಮಾಡಿ ಚಾಲನೆ ನೀಡಿದರು. ಮೆರವಣಿಗೆಯು ಅಂಬೇಡ್ಕರ್ ನಗರ, ಜಾಮೀಯಾ ಮಸೀದಿ, ಅನ್ವರಿ ಕ್ರಾಸ್ ( ಕನಕದಾಸ ವೃತ ) ಹಳೆಯ ಬಸ್ ನಿಲ್ದಾಣ, ಸಂತೆ ಬಜಾರ್ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಅಂಬೇಡ್ಕರ್ ವೃತ್ತವನ್ನು ತಲುಪಿತು. ನಂತರ ವೇದಿಕೆಯ ಕಾರ್ಯಕ್ರಮ ವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿಶ್ವದ ಸರ್ವ ಶ್ರೇಷ್ಠ ಕೆಲವೆ ಕೆಲವು ನಾಯಕರಲ್ಲಿ ಒಬ್ಬರು ಅವರು ತಾವು ಅಪಾರ ಕಷ್ಟ ನಷ್ಟ ನೋವು ಮತ್ತು ನಲಿವು ಹಾಗೂ ಅಡಮಾನಗಳನ್ನು ಅನುಭವಿಸಿ ಅವುಗಳನ್ನು ಮೆಟ್ಟಿ ನಿಂತು ಭಾರತ ಮತ್ತು ವಿಶ್ವ ಎಂದೂ ಮರೆಯದಂತದ್ದ ಸಾಧನೆಯನ್ನು ಮಾಡಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಇವರು ರಚಿಸಿದ ಸಂವಿಧಾನದ ಸರ್ವರಿಗೂ ಸಮಾನ ರೂಪದ ಹಕ್ಕು ಮತ್ತು ಅವಕಾಶವನ್ನು ನೀಡಿದೆ ಅದರ ಅಡಿಯಲ್ಲೆ ನಾವು ಇವತ್ತು ನೆಮ್ಮದಿಯಿಂದ ಜೀವಿಸುತ್ತಿದ್ದೇವೆ ಬಾಬಾ  ಸಾಹೇಬರು ಎಲ್ಲಾ ಕ್ಷೇತ್ರಗಳಲ್ಲಿ ಅಪಾರ ವಾದ ಕೊಡುಗೆ ಯನ್ನು ನೀಡಿದ್ದಾರೆ ಇವರ ತೋರಿಸಿ ಹಾದಿಯಲ್ಲಿ ಅವರ ಆಶೋತ್ತರಗಳನ್ನು ಈಡೇರಿಸಲು ನಾವೆಲ್ಲರೂ ಶ್ರಮಿಸಿ ಬಾಬಾ ಸಾಹೇಬರ ವಿಚಾರವನ್ನು ಬಿತ್ತುವುದರ ಜೊತೆಗೆ ಅವರ ಆಶೋತ್ತರಗಳನ್ನು ಈಡೇರಿಸಲು ಶ್ರಮಿಸೋಣ ಎಂದರು.  ದಲಿತ ಮುಖಂಡರಾದ ಈರಣ್ಣ ಕೆಳಗೇರಿ, ಪತ್ರಕರ್ತರಾದ ರಾಮಣ್ಣ ಕವಿತಾಳ, ಮುಸ್ಲಿಂ ಸಮುದಾಯದ ಮುಖಂಡರಾದ ಬಿ.ಎ ಕರೀಮ್ ಸಾಬ್, SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ, ಸಣ್ಣ ರಾಘವೇಂದ್ರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮ ವನ್ನು ವಿಜಯ್ ಕುಮಾರ್ ಕಡತಲ್ ನಿರೂಪಿಸಿದರು. ಕಾರ್ಯಕ್ರಮ ದಲ್ಲಿ ಯುವ ಮುಖಂಡರಾದ ಕಿರಿಲಿಂಗಪ್ಪ ಮ್ಯಾಗಳಮನಿ, ಯಲ್ಲಪ್ಪ, ಎಂ‌. SFI ಕವಿತಾಳ ಘಟಕದ ಅಧ್ಯಕ್ಷರಾದ ಮೌನೇಶ ಬುಳ್ಳಾಪುರ,  DYFI ಅಧ್ಯಕ್ಷರಾದ ಮಹಮ್ಮದ್ ರಫಿ, SFI. ಕಾರ್ಯದರ್ಶಿ ವೆಂಕಟೇಶ, ಮುಖಂಡರಾದ ನಾಗಮೋಹನ್ ಸಿಂಗ್, ಅಂಬು ಬುಳ್ಳಾಪುರ, ಚಂದಪ್ಪ, ಮೌನೇಶ ಕೊಡ್ಲಿ, ರಾಮಣ್ಣ ಭಜನೆ, ಯಾಕೂಬ್, ರಮೇಶ ಚಲುವಾದಿ, ಮಹಾದೇವ ಬಿ. ದುರುಗೇಶ್, ಯಲ್ಲಪ್ಪ ಎಂ. ಪ್ರಮೋದ್, ಬಸವರಾಜ, ಶ್ರೀಧರ್ ಪಟ್ಟಣ ಪಂಚಾಯತಿ ಸದಸ್ಯರಾದ ಮೌನೇಶ್ ಹಿರೇ ಕುರುಬರ್ ಸೇರಿ ನೂರಾರು ಜನ ಇದ್ದರು..   ಆನಂದ ಸಿಂಗ್ ರಜಪೂತ ಕವಿತಾಳ

Leave a Reply

Your email address will not be published. Required fields are marked *