ಅಂಗನವಾಡಿ ಕಟ್ಟಡಗಳ ರಿಪೇರಿಯ ಹಣ ಯೋಜನಾಧಿಕಾರಿಗಳಿಂದಲೇ ದುರುಪಯೋಗ ಅಂಗನವಾಡಿ ಕಾರ್ಯಕರ್ತರ ಆರೋಪ…

Spread the love

ಅಂಗನವಾಡಿ ಕಟ್ಟಡಗಳ ರಿಪೇರಿಯ ಹಣ ಯೋಜನಾಧಿಕಾರಿಗಳಿಂದಲೇ ದುರುಪಯೋಗ ಅಂಗನವಾಡಿ ಕಾರ್ಯಕರ್ತರ ಆರೋಪ…

ಕೋಲಾರ. ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ವತಿಯಿಂದ ಸ್ವಂತ ಅಂಗನವಾಡಿ ಕಟ್ಟಡಗಳ ರಿಪೇರಿಗೆ ಕೊಟ್ಟಿರುವ ಹಣವನ್ನು ಮೂರು ತಾಲೂಕಿನ ಯೋಜನಾಧಿಕಾರಿಗಳು ದುರ್ಬಳಿಕೆ ಮಾಡಿಕೊಂಡಿದ್ದಾರೆಂದು ರಾಜ್ಯ ಅಂಗನವಾಡಿ ಮಹಾ ಮಂಡಳಿಯ ಜಿಲ್ಲಾ ಅಧ್ಯಕ್ಷರಾದ ಸರಸ್ವತಮ್ಮ ಆರೋಪಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಗಾರಪೇಟೆ ˌ ಮುಳಬಾಗಲು ಹಾಗೂ ಬೇತ ಮಂಗಲದ ಯೋಜನಾಧಿಕಾರಿಗಳು ಸಾಕಷ್ಟು ಅಕ್ರಮಗಳನ್ನು ನಡೆಸುತ್ತಿದ್ದು ಜಿಲ್ಲೆಯಲ್ಲಿ 2015 ರಿಂದ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಇಡುಗಂಟು ಮತ್ತು ಎನ್.ಪಿ.ಎಸ್ ಹಣವನ್ನೂ ಸಹ ಇದುವರೆಗೂ ನೀಡಲ್ಲ. ಅಲ್ಲದೇ ಬಂಗಾರಪೇಟೆ ಬೋವಿನಗರ ನಿವಾಸಿ ಅಂಗನವಾಡಿ ಕಾರ್ಯಕರ್ತೆ ಪದ್ಮಾರವರು ಸಾವನ್ನಪ್ಪಿ ಒಂದೂವರೆ ವರ್ಷ ಕಳೆದರೂ ಅವರ ಮರಣ ಪರಿಹಾರ ನೀಡಿಲ್ಲ. ಅಲ್ಲದೇ ಯೋಜನಾಧಿಕಾರಿಗಳವರು ಕಛೇರಿಗಳಲ್ಲೂ ಸರಿಯಾಗಿ ಸ್ಪಂಧಿಸುತ್ತಿಲ್ಲವೆಂದು ಆರೋಪಿಸಿದರಲ್ಲದೆ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಈ ಕೂಡಲೇ ಇತ್ಯರ್ಥ ಮಾಡದಿದ್ದಲ್ಲಿ ಮುಂದಿನ ಹೋರಾಟವನ್ನು ರೂಪಿಸಲಾಗುವುದೆಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಚಿನ್ನಮ್ಮ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಮತ್ತಿತರರು ಹಾಜರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *