ತುಮಕೂರು ಜಿಲ್ಲೆಯ  ಚಿಕ್ಕನಾಯಕನಹಳ್ಳಿ, ಮಳೆ ನೀರಿನಲ್ಲಿ ಮುಳುಗುತ್ತಿರುವ ಅಲೆಮಾರಿಗಳ ಬದುಕು, 

Spread the love

ತುಮಕೂರು ಜಿಲ್ಲೆಯ  ಚಿಕ್ಕನಾಯಕನಹಳ್ಳಿ, ಮಳೆ ನೀರಿನಲ್ಲಿ ಮುಳುಗುತ್ತಿರುವ ಅಲೆಮಾರಿಗಳ ಬದುಕು, 

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊರವಲಯದ ದುಂಡು ತೋಪಿನಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ಸುಮಾರು ಮೂರು ದಶಕಗಳಿಂದ ವಾಸವಿರುವ ಅಲೆಮಾರಿ ಮತ್ತು ಸುಡುಗಾಡು ಸಿದ್ಧರಿಗೆ ಇಂದಿಗೂ ಮೂಲಭೂತ ನಾಗರಿಕ ಸೌಲಭ್ಯಗಳು ದೊರಕಿರುವುದಿಲ್ಲ. ಸಚಿವರಾದ ಜೆ ಸಿ ಮಾಧುಸ್ವಾಮಿ ಅವರು ಈ ಕ್ಷೇತ್ರದ ನಿವಾಸಿ ಆದರೆ ಆಳುವ ಜನಪ್ರತಿನಿಧಿಗಳು ಸ್ಥಳೀಯ ತಾಲೂಕು ಆಡಳಿತ ಯಾರು ಈ ಅಲೆಮಾರಿ ಜನಾಂಗದವರ ಗೋಳಿನ ಪಾಡನ್ನು ಬಗೆಹರಿಸಿಲ್ಲ ನಿನ್ನೆ ರಾತ್ರಿ ಸುರಿದ ಮಳೆ ಗಾಳಿಯಿಂದ ನೀರು ನುಗ್ಗಿ ಗುಡಿಸಲುಗಳು ಮನೆಯ ಆಹಾರಧಾನ್ಯ ಸಾಮಾನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಇವರ ಗೋಳನ್ನು ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಯಮಾಡಿ ಇವರನ್ನು ಹಾತು ಕೊಳ್ಳಿರಿ. ಇಲ್ಲಿ ಯಾವುದೇ ರೀತಿಯ ಸೌಲಭ್ಯ ಇರುವುದಿಲ್ಲ ಗುಂಡು ತೋಪಿನಲ್ಲಿ ಕುಡಿಯುವ ನೀರಿನ ಸೌಲಭ್ಯ ವಿದ್ಯುತ್ ರಸ್ತೆ ಶಾಲೆ ಯಾವುದೇ ಅನುಕೂಲ ಗಳಿಲ್ಲದೆ ಇಲ್ಲಿನ ನಿವಾಸಿಗಳ ಪಾಡು ಹೇಳತೀರದಾಗಿದೆ. ಇವರ ದಿನನಿತ್ಯದ  ಬದುಕು ಹಂದಿ ಸಾಕಾಣಿಕೆ ಭಿಕ್ಷೆ ಬೇಡುವುದು ಇವರ ಉದ್ಯೋಗ ಇದರಿಂದ ಇವರು ಜೀವನ ಸಾಗಿಸಿಕೊಂಡು ಹೋಗುತ್ತಿದ್ದಾರೆ. ಇವರ ಜೀವನ ಹಾವು ಚೇಳುಗಳ ಅಂತ ಪ್ರಾಣಿಗಳ ಜೊತೆ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಈಗ ಮಳೆ ಗಾಳಿ ರಭಸಕ್ಕೆ ಗುಡಿಸಲುಗಳು ಬಿದ್ದು ಹೋಗಿವೆ. ಇನ್ನಾದರೂ ಕೂಡ ಜನಪ್ರತಿನಿಧಿಗಳು ಅಲೆಮಾರಿ ಜನಾಂಗಕ್ಕೆ ಎಲೆ ಒದಗಿಸಿಕೊಡಬೇಕೆಂದು ಇಲ್ಲಿಯ ನಿವಾಸಿಗಳ ಆಗ್ರಹವಾಗಿದೆ.

ವರದಿ – ಸೋಮನಾಥ ಹೆಚ್.ಎಮ್.

Leave a Reply

Your email address will not be published. Required fields are marked *