ರಾಷ್ಟ್ರೀಯ ಶಿಕ್ಷಣ ನೀತಿ ಅವಶ್ಯ-ಡಾ.ಪಾಟೀಲ,,,,,.

Spread the love

ರಾಷ್ಟ್ರೀಯ ಶಿಕ್ಷಣ ನೀತಿ ಅವಶ್ಯಡಾ.ಪಾಟೀಲ,,,,,.

ಹುಮನಾಬಾದ: ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆ ಇದೆ.  ಶಿಕ್ಷಣ ಕಾಲ ಕಾಲಕ್ಕೆ ತಕ್ಕಂತೆ ಬದಲಾವಣೆಗೊಂಡು ಬರುತ್ತಿದೆ. ಇಂದಿನ ಆಧುನಿಕ ಯುಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುವುದು  ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಅತ್ಯಂತ ಅವಶ್ಯವಾಗಿದೆ ಎಂದು ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲರು ಹೇಳಿದರು. ಪಟ್ಟಣದ ವಿವೇಕಾನಂದ ಚಾರಿಟೆಬಲ್ ಟ್ರಸ್ಟ ಅಡಿಯ ರಾಮಚಂದ್ರ ವೀರಪ್ಪ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ದಿನಕ್ಕೆ ಕೆಲವೊಂದು ಗೊಂದಲಗಳಿವೆ ಅವುಗಳನ್ನು ಪರಿಹರಿಸಿ  ಹೊಸ ಶಿಕ್ಷಣ ಕಾಯ್ದೆ ಜಾರಿಗೆ ತಂದರೆ ಒಳಿತು ಎಂದು ತಿಳಿಸಿದರು.  ಪ್ರಾಂಶುಪಾಲರಾದ ಡಾ.ಗಿರೀಶ ಕಠ್ಠಳ್ಳಿ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿ ವಿದ್ಯಾರ್ಥಿಗಳು ಸುಧೈವಿಗಳು ಹೊಸ ಶಿಕ್ಷಣ ನೀತಿಗೆ ಒಳಗಾದರೆ ನಮಗೆ ಬೇಕಾಗುವ ಮೂಲಭೂತ ಸೌಲಭ್ಯ ಶಿಕ್ಷಣ ಖಂಡಿತಾ ದೊರೆಯುತ್ತದೆ ಎಂದರು. ಸುನೀಲಕುಮಾರ ಬಿರಾದಾರ ಪ್ರಾಸ್ತಾ ವಿಕವಾಗಿ ಮಾತನಾಡಿದರು. ರಾಘವೇಂದ್ರ ಬಿರಾದಾರ ಸ್ವಾಗತಿಸಿದರು.ಕಾಶೀಬಾಯಿ ನಿರೂಪಿಸಿದರು. ಮಹಾದೇವ ರೆಡ್ಡಿ ವಾಡೆ ವಂದಿಸುದರು.ಕಾಲೇಜಿನ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿ ನಿಯರು ಉಪಸ್ಥಿತರಿದ್ದರು.

ವರದಿಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *