ಮುಧೋಳ ಗ್ರಾಮದಲ್ಲಿ ಸತತವಾಗಿ 27 ಬಾರಿ ಪೋಷಣ ಅಭಿಯಾನ ಪೌಷ್ಟಿಕ  ಆಹಾರದ ಅರಿವು ಮೂಡಿಸುವ ತಾಯಂದಿರ ಸಭೆ….

Spread the love

ಮುಧೋಳ ಗ್ರಾಮದಲ್ಲಿ ಸತತವಾಗಿ 27 ಬಾರಿ ಪೋಷಣ ಅಭಿಯಾನ ಪೌಷ್ಟಿಕ  ಆಹಾರದ ಅರಿವು ಮೂಡಿಸುವ ತಾಯಂದಿರ ಸಭೆ….

ದೇಶದಾದ್ಯಂತ ಇದೇ ಸೆಪ್ಟೆಂಬರ್ 1ರಿಂದ 30 ರವರೆಗೆ ಆಚರಿಸಲಾಗುತ್ತಿರುವ ಪೋಷಣ ಅಭಿಯಾನ ತಾಯಂದಿರ ಸಭೆ ಕರೆದು ಪೌಷ್ಟಿಕ ಆಹಾರದ ಅರಿವು ಮೂಡಿಸುವ ಕಾರ್ಯಕ್ರಮ ನೆಡಸಿದರು. ತಾಲೂಕ ಒಕ್ಕೂಟದ ಅಧ್ಯಕ್ಷರಾದ ವೀರಮ್ಮ ಮಂಡಲಗೇರಿ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ನೆಡಸಿದರು.  ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಶ್ರೀ ತ್ರಿಲಿಂಗೇಶ್ವರ  ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ಕುರಿತು  ಶ್ರೀಮತಿ ಹಿರಿಯ ಅಂಗನವಾಡಿ ಶಿಕ್ಷಕಿಯರಾದ ಬಸಮ್ಮ ಉಣಚಗೇರಿ ಅವರು  ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲಾ ಅಂಗನವಾಡಿಯಲ್ಲಿ ಸತತವಾಗಿ 27 ಬಾರಿ ಪೋಷಣ ಅಭಿಯಾನ ಪೌಷ್ಟಿಕ  ಆಹಾರದ ಅರಿವು ಮೂಡಿಸಿದರು ಮತ್ತು ಬಸವ ಜ್ಯೋತಿ ಶಾಲೆಯ ಅಧ್ಯಕ್ಷರಾದ ಶಿವಶರಣಪ್ಪ ಬಳಿಗಾರ್ ಅವರು ಮಾತನಾಡಿ 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟುವ ಉದ್ದೇಶದಿಂದ  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪೌಷ್ಟಿಕ ಆಹಾರ ಪೋಷಣ ಅಭಿಯಾನ ಗರ್ಭಿಣಿಯರು ಹಾಗೂ ಬಾಣಂತಿ ಸ್ತ್ರೀಯರು ಇದರಲ್ಲಿ ಭಾಗವಹಿಸಿದ ಕಾರ್ಯಕ್ರಮವನ್ನು ಪ್ರಯೋಜನ ಪಡೆಯಬೇಕೆಂದು ಹೇಳಿದರು. ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಶಂಕ್ರಣ್ಣ ಅಂಗಡಿಯವರು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಗರ್ಭಿಣಿಯಾಗಿದ್ದ ರಕ್ತದ ಪ್ರಮಾಣ ಕನಿಷ್ಠ 10 ಪಾಯಿಂಟ್ ಇರಬೇಕು ಈಗಿನ ಗರ್ಭಿಣಿಯರು 6ರಿಂದ 7 ಪಾಯಿಂಟ್ ರಕ್ತ ಕಂಡುಬರುತ್ತಿದೆ ಆದ್ದರಿಂದ ಎಲ್ಲಾ ಗರ್ಭಿಣಿಯರು ಸರಿಯಾದ ರೀತಿಯಲ್ಲಿ ಪೌಷ್ಟಿಕಾಂಶ ಇರುವ ಆಹಾರ ಸೇವನೆ ಮಾಡದೆ ಇರುವುದು ಒಂದು ಕಾರಣವಾಗಿದೆ ತಮ್ಮ ತಮ್ಮ ಮನೆಯಲ್ಲಿ ಎಲ್ಲಾ ರೀತಿಯ ಆಹಾರ ಧಾನ್ಯಗಳನ್ನು ಬಳಸಿಕೊಂಡು ಊಟ ಮಾಡುವುದರಿಂದ ಹಾಗೂ ಅಂಗನವಾಡಿಯಲ್ಲಿ ಕೊಡುವ ಆಹಾರ ಪದಾರ್ಥ ಮೊಟ್ಟೆಯನ್ನು ಸರಿಯಾಗಿ ಉಪಯೋಗ ಮಾಡಿಕೊಂಡರೆ ರಕ್ತಹೀನತೆಯನ್ನು ತಡೆಗಟ್ಟಬಹುದು ಹೇಳಿದರು.  ಎಲ್ಲಾ ಪೌಷ್ಟಿಕ ಆಹಾರ ಪದಾರ್ಥಗಳನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾರತಿ ಚಲವಾದಿ. ಉಪಾಧ್ಯಕ್ಷರಾದ ಚಂದ್ರ ಬಾಯಿ ಕುದುರಿ. ಗ್ರಾಂ ಪಂ ಪಿ ಡಿ ಒ ಫಕೀರಪ್ಪ ಕಟ್ಟಿಮನಿ. ಶ್ರೀ ಧನಲಕ್ಷ್ಮಿ ಒಕ್ಕೂಟದ ಅಧ್ಯಕ್ಷರಾದ ಲಕ್ಷ್ಮೀದೇವಿ ಚೆಲುವಾದಿ. ಶ್ರೀ ಧನಲಕ್ಷ್ಮಿ ಕಾರ್ಯಕರ್ತೆಯರಾದ ಶಾರದಾ ಪಾಟೀಲ್. ಹುಸೇನಬಿ ಮೋತೆಖಾನ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು  ಆಯಾ ಕೆಲಸದವರು ಗ್ರಾಮದ ಗರ್ಭಿಣಿಯರು ಮಹಿಳಾ ಸಂಘದ ಮಹಿಳೆಯರು ಭಾಗವಹಿಸಿದ್ದರು.

ವರದಿ ಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *