ಶಿವಪುರ ಗೊಲ್ಲರಹಟ್ಟಿ:ಗಾಂದೀ ಗ್ರಾಮದಲ್ಲೆಡೆ ಕೆಸರು ಗದ್ದೆಗಳು, ಪ್ರಮುಖ ರಸ್ತೆಯೇ ಶೌಚಾಲಯ!? –….

Spread the love

ಶಿವಪುರ ಗೊಲ್ಲರಹಟ್ಟಿ:ಗಾಂದೀ ಗ್ರಾಮದಲ್ಲೆಡೆ ಕೆಸರು ಗದ್ದೆಗಳು, ಪ್ರಮುಖ ರಸ್ತೆಯೇ ಶೌಚಾಲಯ!? –….

ಪ್ರಾಧಾನ ಮಂತ್ರಿಯವರು ಸ್ವಚ್ಚ ಭಾರತ ಆಂತೆಲ್ಲಾ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಬೊಬ್ಬೆಹೊಡೆದುಕೊಳ್ಳುತ್ತಿದ್ದಾರೆ, ಕೆಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರ‍‍ಾಮ ಸ್ವಚ್ಚತೆಗೆ ಸಾಕಷ್ಟು ಯೋಜನೆಗಳನ್ನು ಜಾರಿತಂದು ಹಣ ನೀಡಲಾಗುತ್ತಿವೆ.ಆದ್ರೆ ಅವೆಲ್ಲಾ ಕೇವಲ ಲೆಕ್ಕ ಪತ್ರ ಹಾಗೂ ಪ್ರಚಾರಕ್ಕೆ ಸೀಮಿತ,ಎಂಬುದಕ್ಕೆ ಶಿವಪುರ ಗ್ರಾಮ ಪಂಚಾಯ್ತಿಯ ಬಹುತೇಕ ಗ್ರಾಮಗಳ ಅವ್ಯವಸ್ಥೆಗಳೇ ಸಾಕ್ಷಿಯಾಗಿವೆ. ಅಚ್ಚರಿಯಂದ್ರೆ ಈ  ಗ್ರಾಮ ಪಂಚಾಯ್ತಿ ಸತತ ಎರೆಡು ಬಾರಿ ರಾಜ್ಯಮಟ್ಟದ “ಮಹಾತ್ಮಗಾಂದಿ ಮಾದರಿ ಗ್ರಾಮ ಪಂ”ಎಂಬ ಪ್ರಶಸ್ಥಿಗೆ ಪಾತ್ರವಾಗಿದೆ,ಗ್ರಾಪಂ ಕೇಂದ್ರ ಸ್ಥಾನದಿಂದ ಕೂಗಳತೆ ದೂರದಲ್ಲಿರುವ ಶಿವಪುರ ಗೊಲ್ಲರಹಟ್ಟಿ ಗ್ರಾಮದ ಗಲ್ಲಿಗಳು ನೈರ್ಮಲ್ಯತೆ ಕಾಣದೇ ಕೊಳೆತು ನಾರುತ್ತಿವೆ. ಬಚ್ಚಲ ಮೋರಿಯ ತ್ಯಾಜ್ಯ ನೀರು ರಸ್ತೆಗಳಲ್ಲಿ ಹರಿದಾಡಿ ಕೆಸರು ಗದ್ದೆಗಳಾವೆ.ಶೌಚಾಲಯ ಕೊರತೆಯಿಂದಾಗಿ ರಸ್ಥೆಗಳ ಇಕ್ಕೆಲದ ಜಾಗವೇ ಬಯಲು ಶೌಚಾಲಯವಾಗಿದೆ. ರಸ್ಥೆಗಳ ಇಕ್ಕೆಲಗಳಲ್ಲಿ ಮಹಿಳೆಯರು ಮಕ್ಕಳು ಶೌಚಮಾಡುವುದು ಸಾಮಾನ್ಯವಾಗಿದೆ,ಬಚ್ಚಲಮೋರಿಯ ನೀರು ರಸ್ಥೆಗಳಲ್ಲಿ ಹರಿದಾಡುತ್ತಿದ್ದು ಪಾದಾಚಾರಿಗಳು ಕೆಸರುಗದ್ದೆಯಂತಾದ ರಸ್ಥೆಗಳಲ್ಲಿ ಸಂಚರಿಸುವುದು ಸಾಮಾನ್ಯವಾಗಿದೆ, ಗ್ರಾಮದ ಬಹತೇಕ ರಸ್ಥೆಗಳು ಒತ್ತುವರಿಯಾಗಿದ್ದು ಬೈಕ್ ಗಳಲ್ಲಿ ತೆರಳುವವರು ಕಿರಿದಾದ ರಸ್ಥೆಗಳಲ್ಲಿ ಸಂಚರಿಸಲು,ನಿತ್ಯ ಸರ್ಕಸ್ ಮಾಡುವುದು ಅನಿವಾರ್ಯವಾಗಿದೆ ಅಯಾ ತಪ್ಪಿದರೆ ರಸ್ಥೆಯಲ್ಲಿಯ ಕೆಸರು ಗುಂಡಿಯಲ್ಲಿ ಮಿಂದೇಳುವುದು ಖಂಡಿತ. ಕನಿಷ್ಠ  ನೈರ್ಮಲ್ಯತೆ ಕಾಣದ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳು ದೊರೆಯದ ಕಾರಣ,ಗ್ರಾಮದ ಮಹಿಳೆಯರಿಂದ ರಸ್ಥೆಯ ಇಕ್ಕೆಲಗೢ್ಲಿಯೇ ನಿತ್ಯ ಬಹಿರ್ದೆಸೆ ಜರುಗುತ್ತಿದೆ. ಇದಕ್ಕೆಲ್ಲ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಯ  ಹೊಣೆಗೇಡಿತ ಕಾರಣ ಎಂದು ಸ್ಥಳೀಯರು ದೂರಿದ್ದಾರೆ,ಗ್ರಾಮದಲ್ಲಿ ನೈರ್ಮಲ್ಯತೆ ಕಾಣದಾಗಿದೆ ಮತ್ತು ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದ್ದು ಇದಕ್ಕೆ ಸಂಬಂದಿಸಿದ ಇಲಾಖೆಗಳ ಉನ್ನತಾಧಿಕಾರಿಗಳ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಕಾರಣವಾಗಿದೆ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಆರೋಪಿಸಿದೆ.ಶೀಘ್ರವೇ ತಾಪಂ ಕಾರ್ಯನಿರ್ವಹಣಾಧಿಕಾರಿ ಸ್ಥಳ ಗ್ರಾಮಕ್ಕೆ ಬೆಟ್ಟಿ ನೀಡಿ ಅಗತ್ಯ ಕ್ರಮಗಳನ್ನು ಜರುಗಿಸಬೇಕಿದೆ,ಈ ನಿಟ್ಟಿನಲ್ಲಿ ದಕ್ಷತೆಗೆ ಹೆಸರಾಗಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನಂದಿನಿಯವರು.ಹಾಗೂ ಜಿಲ್ಲಾಧಿಕಾರಿಗಳಾದ ಪವನ ಕುಮಾರ ಮಾಲಿಪಟೇಲ್ ರವರು ಶೀಘ್ರವೇ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕಿದೆ,ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಈ ಮೂಲಕ ಒತ್ತಾಯಿಸಿದ್ದಾರೆ.ನಿರ್ಲಕ್ಷ್ಯಸಿದ್ದಲ್ಲಿ ಅಧಿಕಾರಿಗಳ ಅಮಾನವೀಯ ನಡೆಯ ವಿರುದ್ಧ ಕಾನೂನು ಸಮರ ಸಾರಲಾಗುವುದು,ಮಹಿಳಾ ಆಯೋಗ ಹಾಗೂ ಮಹಿಳಾ ಆಯೋಗ ಮತ್ತು ನ್ಯಾಯಾಂಗ ಇಲಾಖೆಗೆ ದೂರು ನೀಡಲಾಗುವುದೆಂದು ಅವರು ಎಚ್ಚರಿಸಿದ್ದಾರೆ. ಬಹಿರ್ದೆಸೆಗೆ ಕತ್ತಲಾಗಬೇಕು- ಶಿವಪುರ ಗೊಲ್ಲರಹಟ್ಟಿಯ ಗ್ರಾಮದಲ್ಲಿ ಶೌಚಕ್ಕೆ ತೆರಳಲು ಮಹಿಳೆಯರು ಕತ್ತಲಾಗುವುದನ್ನ ಕಾಯಲೇ ಬೇಕಿದೆ,ಇಲ್ಲಿ ಶೌಚಕ್ಕೆ ಹೋಗಲು ಸಮಯ ನಿಗದಿಯಾಗಿರುತ್ತೆ ಅಂದ್ರೆ ಕತ್ತಲಾಗಬೇಕಿದೆ ಅಂದಾಗ ಮಾತ್ರ ಶೌಚಕ್ಕೆ ತೆರಳಬೇಕಿದೆ.ಇದು ಅಮಾನವೀಯ ಹಾಗೂ ಅನಾಗರೀಕತೆಗೆ ಜೀವಂತ ಸಾಕ್ಷಿಯಾಗಿದೆ,ಹೆಂಗಸರು ರಾತ್ರಿಯಿಂದ ಬೆಳಕು ಮೂಡುವವರಿಗೆ ಮಾತ್ರ  ಶೌಚಕ್ಕೆ ತೆರಳಲು ಸಾಧ್ಯ,ಯೋಗ್ಯ ಶೌಚಾಲಯ ವ್ಯವಸ್ಥೆ ಗೊಲ್ಲರಹಟ್ಟಿ ಗ್ರಾಮದಲ್ಲಿಲ್ಲ. ರಸ್ಥೆಯ ಇಕ್ಕೆಲಗಳಲ್ಲಿ ಶೌಚಕ್ಕೆ ಕುಳಿತಿರುತ್ತಾರೆ,ರಸ್ಥೆಯಲ್ಲಿ ವಾಹನ ಸಂಚಾರ ಸಹಜ ಆಗ ಶೌಚಕ್ಕೆ ಕುಂತಿರುವವರು ಎದ್ದೇಳಬೇಕಾಗುತ್ತದೆ ಇಂತಹ ಹೀನಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಶಾಲಾ ಕಾಂಪೌಂಡನ್ನೇ ಮರೆಯಾಗಿ ಆಸರೆಯಾಗಿರಿಸಿಕೊಂಡು ಮಹಿಳೆಯರು ಬಹಿರ್ದೆಸೆ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ, ಯೋಗ್ಯ ಶೌಚಾಲಯ ಸೌಲಭ್ಯದ ಕೊರತೆ ಗ್ರಾಮದ ಮಹಿಳೆಯರನ್ನ ಕಾಡುತ್ತಿದೆ. ವೈಯಕ್ತಿಕ ಶೌಚಾಲಯ ನಿರ್ಮಾಣ ಣ ಯೋಜನೆ ಸಂಪೂರ್ಣ ಯಶಸ್ಸಾಗಿಲ್ಲ,ಗ್ರಾಮದ ಬಹುತೇಕ ಗ್ರಾಮಸ್ಥರು ಸಾಮೂಹಿಕ ಶೌಚಾಲಯವನ್ನೇ ಅವಲಂಬಿಸಿದ್ದಾರೆ.ಮೂಲಭೂತ ಸೌಕರ್ಯಗಳ ಕೊರತೆ ಯಿಂದಾಗಿ,ಗ್ರಾಮಸ್ಥರು ನಿತ್ಯ ನರಕ ಯಾತನೆಗಳನ್ನು ಅನುಭವಿಸುತ್ತಿದ್ದು, ಇದನ್ನರಿತೂ ಕೂಡ ಸಂಬಂದಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಹೊಣಗೇಡಿಗಳು- ಗ್ರಾಮ ಪಂಚಾಯ್ತಿ ಅಧಿಕಾರಿ ಸರ್ಕಾರಿ ಸಂಬಳ ಪಡೆದು ತಮ್ಮಕರ್ಥವ್ಯ ವನ್ನು ಪ್ರಾಮಾಣಿಕವಾಗಿ ಮಾಡುತ್ತಿಲ್ಲ,ಕೇವಲ ಜನಪ್ರತಿನಿಧಿಗಳ ಸೇವಕರಂತೆ ವರ್ತಿಸುತ್ತಿದ್ದಾರೆ.ಜನರ ಸೇವೆಯ ನೆಪದಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು, ತಮ್ಮ ಕನಿಷ್ಠ ಜವಾಬ್ದಾರಿ ನಿಭಾಯಿಸುತ್ತಿಲ್ಲ ಬದಲಾಗಿ ಶೀಲು ಸೇನು ಜನಿಷನ್ ಗೆ ಮೀಸಲಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.  ಸಾಂಕ್ರಾಮಿಕ ರೋಗಗಳದ್ದೇ ಕಾರು ಬಾರು- ಇದು ಅವರ ಹೊಣೆಗೇಡಿತ ಹಾಗೂ ಅಮಾನವೀಯತೆಗೆ ಸಾಕ್ಷಿ ಎಂದು ಹಿರಿಯರು ಹಾಗೂ ಕೆಲ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ಥೆಗಳೇ ಕೊಳಚೆ ತುಂಬಿದ ಕೆಸರುಗದ್ದೆಗಳಾಗಿ ಪರಿವರ್ತನೆಯಾಗಿವೆ ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಗ್ರಾಮದಲ್ಲಿ ತಾಂಡವಾಡುತ್ತಿವೆ. ಗ್ರಾಮದ ಜನತೆ ರೋಗ ಬಾಧೆಗಳಿಂದ ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದ್ದು, ಗಲ್ಲಿ ಗಲ್ಲಿಗಳು ಗಬ್ಬೆದ್ದು ನಾರುತ್ತಿವೆ ಹಾಗೂ ಸೊಳ್ಳೆ ಕಿಟಗಳ ಬಾಧೆ ಹೆಚ್ಚಾಗಿದೆ ಎಂದು ಗ್ರಾಮದ ಹಿರಿಯರು ದೂರಿದ್ದಾರೆ.ಶೀಘ್ರವೇ ಗ್ರಾಮದ ದುರಾವಸ್ಥೆ ಸರಿಪಡಿಸದೇ ನಿರ್ಲಕ್ಷ್ಯ ತೋರಿದ್ದಲ್ಲಿ,ವಿವಿದ ಸಂಘಟನೆಗಳ ಸಹಯೋಗದಲ್ಲಿ ತಾಪಂ ಮುತ್ತಿಗೆ ಹಾಕಲಾಗುವುದೆಂದು ಗ್ರಾಮದ ಹಿರಿಯರು ಹಾಗೂ ಕೆಲ ಮಹಿಳಾ ಸಂಘಗಳ ಪದಾಧಿಕಾರಿಗಳು ಈ ಮೂಲಕ ಎಚ್ಚರಿಸಿದ್ದಾರೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *