ಲಯನ್ಸ್ ಕ್ಲಬ್ ಆಫ್ ಬೆಂಗಳೂರು ರಾಯಲ್ ಪ್ಯಾಲೇಸ್ ಅಧ್ಯಕ್ಷರಾದ ಶ್ರೀಮತಿ ಲಯನ್ ಕಲ್ಪನಾರವರ ಉಪಸ್ಥಿತಿಯಲ್ಲಿ 2 ಸಾವಿರ ಗಿಡಗಳ ನಾಟಿ…

Spread the love

ಲಯನ್ಸ್ ಕ್ಲಬ್ ಆಫ್ ಬೆಂಗಳೂರು ರಾಯಲ್ ಪ್ಯಾಲೇಸ್ ಅಧ್ಯಕ್ಷರಾದ ಶ್ರೀಮತಿ ಲಯನ್ ಕಲ್ಪನಾರವರ ಉಪಸ್ಥಿತಿಯಲ್ಲಿ 2 ಸಾವಿರ ಗಿಡಗಳ ನಾಟಿ…

ಲಯನ್ಸ್ ಕ್ಲಬ್ ಆಫ್  ಬೆಂಗಳೂರು ರಾಯಲ್ ಪ್ಯಾಲೇಸ್ ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆ ಚನ್ನಪಟ್ಟಣದಲ್ಲಿ ವಿವಿಧ ರೀತಿಯ ಸುಮಾರು 2000 ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ದೇಶ ಮರೆಯಾಗುತ್ತಿರುವ ಪರಿಸರವನ್ನು ಬೆಳೆಸಿ,ಸಂರಕ್ಷಣೆ ಮಾಡುವ ಸಂದೇಶವನ್ನು ಜನರಿಗೆ ತಿಳಿಸುವುದಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ  ಸೂಪರಡೆಂಟ್ ಆಫ್ ಪೊಲೀಸ್ ಶ್ರೀಯುತ ಶೈಲೆಂದ್ರ ವಿಶ್ವನಾಥ್, -ಡಿ. ವೈ. ಎಸ್.ಪಿ.ಎನ್.ಗುರುಪ್ರಸಾದ್ ಮತ್ತು ಡಾ.ಪುಣ್ಯಾವತಿಯವರು ಆಗಮಿಸಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಸುಮಾರು ದಿನಗಳ ಹಿಂದಷ್ಟೇ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ರಾಯಲ್ ಪ್ಯಾಲೇಸ್ ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಲಯನ್ ಕಲ್ಪನಾರವರ ಸೇವೆ ಅಪಾರವಾಗಿದ್ದು, ಅಧಿಕಾರ ಸ್ವೀಕರಿಸಿದ ದಿನದಿಂದ ಬಹಳಷ್ಟು ಕಾರ್ಯಾ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಿಸುವುದು, ಲ್ಯಾಪ್ಟಾಪ್ ವಿತರಣೆ, ಪುಸ್ತಕಗಳ ವಿತರಣೆ ಇನ್ನೂ ಹಲವು ಸೇವೆಗಳನ್ನ ಮಾಡುತ್ತಾ ಬಂದಿದ್ದು,ಈ ದಿನ 2 ಸಾವಿರ ಗಿಡಗಳನ್ನು ನೆಡುವುದರ ಮೂಲಕ ಮೆಚ್ಚುಗೆಯನ್ನು ಪಡೆದಿದ್ದಾರೆ. ಗಿಡಗಳನ್ನು ನೆಟ್ಟ ನಂತರ ಮಾತನಾಡಿದ ಇವರು “ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ” ಎಲ್ಲರೂ ಹಸಿರನ್ನು ಉಳಿಸಿ,ಬೆಳಸಬೇಕಿದೆ. ಈ ದಿನ ಇಲ್ಲಿ ಗಿಡ ನಾಟಿ ಮಾಡಲು ಅವಕಾಶ ಕಲ್ಪಿಸಿದಂತ ಸೂಪರಡೆಂಟ್ ಆಫ್ ಪೊಲೀಸ್ ಶೈಲೆಂದ್ರ ವಿಶ್ವನಾಥ್ ಮತ್ತು ಡಿ. ವೈ. ಎಸ್. ಪಿ. ಗುರುಪ್ರಸಾದ್ ರವರಿಗೆ ತುಂಬು ಹೃದಯದ ಧನ್ಯವಾದಗಳು ಎಂದರು. ಈ ಸುಂದರ ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ ಜಿ. ಎಸ್. ಟಿ. ಕೋ -ಆರ್ಡಿನೇಟರ್ ಲಯನ್ ವಿಜಯ್ ಕುಮಾರ್, ಡಾ. ಶಿವಕುಮಾರ್ ನಾಗರ ನವಿಲೆ, ಜಿ.ಎನ್.ರವಿಕುಮಾರ್, ರೂಪ, ಡಾ.ಮಂಜುನಾಥ್, ಧನಂಜಯ್, ಸೌಭಾಗ್ಯ,ಪರಮ್ ಗುಬ್ಬಿ ಹಾಗೂ ಮಂಜು ಪಾವಗಡ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *