ಪಿಡಿಓ ನಿರ್ಲಕ್ಷ್ಯ ದಿಂದ ಮರಗಿದ ಸಿಸಿಗಳು….

Spread the love

ಪಿಡಿಓ ನಿರ್ಲಕ್ಷ್ಯ ದಿಂದ ಮರಗಿದ ಸಿಸಿಗಳು….

ಬೇಜವಾಬ್ದಾರಿ ಪಿಡಿಓ ಮೇಲೆ ಕ್ರಮಕ್ಕೆ ಎಸ್ಎಫ್ಐ ಹಾಗೂ ಡಿವೈಎಫ್ಐ ಆಗ್ರಹ  ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೆಡಬೇಕಿದ್ದ ಸಸಿಗಳು ಗೆಜ್ಜಲಗಟ್ಟಾ ಗ್ರಾಪಂ ಪಿಡಿಓ  ನಿರ್ಲಕ್ಷ್ಯ ದಿಂದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನೂರಾರು ಸಸಿಗಳು ಒಣಗಿವೆ. ಇದು ಪಂಚಾಯತಿ ಪಿಡಿಓ ಅಮರಗುಂಡಮ್ಮ ಅವರ ನಿರ್ಲಕ್ಷ್ಯವೇ ಕಾರಣ ಎಂದು ಎಸ್ಎಫ್ಐ ಹಾಗೂ ಡಿವೈಎಫ್ಐ ಅರೋಪವಾಗಿದೆ ಪರಿಸರ ಬೆಳೆಸುವ ಉದ್ಸೇಶದಿಂದ ಲಕ್ಷಾನುಗಟ್ಟಲೇ ಹಣ ಖರ್ಚು ಮಾಡಿ ನರ್ಸರಿ ಮಾಡಿ ಬೆಳಸಿ ನರೇಗಾದಡಿ ನೆಡಲು ಪಂಚಾಯತಿ ಗೆಂದು ಕಳಿಸಿದ ಸಸಿಗಳನ್ನು ರೀತಿ ಒಣಗಿಸಿರುವುದು ಪಿಡಿಓ ಅವರ ಕರ್ತವ್ಯ ಲೋಪವಾಗಿದೆಸುಮಾರು ಒಂದುವರೇ ತಿಂಗಳುಗಳಿಂದ  ಪಂಚಾಯತಿ ಕಾರ್ಯಾಲಯದ ಕೊಠಡಿಯಲ್ಲಿ ಸಸಿಗಳನ್ನು ಇಡಲಾಗಿದೆ. ಸಸಿಗಳನ್ನು ಅವೈಜ್ಞಾನಿಕವಾಗಿ ಕೊಠಡಿಯಲ್ಲಿ ಶೇಖರಿಸಲಾಗಿದೆ. ಸಿಸಿ ನೆಡುವುದಕ್ಕಾಗಿ ಸುಮಾರು ಒಂದುವರೆ ತಿಂಗಳ ಹಿಂದೆಯೇ ರಸ್ತೆ ಬದಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗುಂಡಿ ತೆಗೆಸಿದ್ದರೂ ಮಳೆಗಾಲ ಹೋಗುವ ಸಮಯ ಬಂದರೂ ಸಿಸಿ ನೆಟ್ಟಿಲ್ಲ. ಪಿಡಿಓ ಅವರ ಪರಸರ ವಿರೋಧಿ ನೀತಿಯನ್ನು ಎಸ್ಎಫ್ಐ ಡಿವೈಎಫ್ಐ ಬಲವಾಗಿ ಖಂಡಿಸುತ್ತದೆ. ಪಿಡಿಓ ಮೇಲೆ ಸಂಬಂಧಿಸಿದ ಅಧಿಕಾರಿಗಳು ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತವೆ. ಎಸ್ಎಫ್ಐತಾಲೂಕಾಧ್ಯಕ್ಷ ತಿಪ್ಪಣ್ಣ ಬೋವಿ ನಿಲೋಗಲ್, ನಿಲೋಗಲ್ ಘಟಕದ ಕಾರ್ಯದರ್ಶಿ ನಾಗರಾಜ್, ಮಹೇಶ್ ಗರ್ಚಿನಮನಿ  ಡಿವೈಎಫ್ಐ ಶಿವರಾಜ ಕಪಗಲ್, ಬಸವರಾಜ್, ರಾಜಾಸಾಬ್, ನಿಂಗಪ್ಪ, ನಿಂಗರಾಜ್ ವರದಿ – ಸಂಪಾದಕೀಯ

Leave a Reply

Your email address will not be published. Required fields are marked *