ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ ನಿಧಿ ಸಂಗ್ರಹ:

Spread the love

ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ ನಿಧಿ ಸಂಗ್ರಹ:

ಬಾಗೇಪಲ್ಲಿ: ಪಟ್ಟಣದ ಮುಸ್ಲಿಂ ಭಾಂದವರು ಶುಕ್ರವಾರ ಕರ್ನಾಟಕ ಉತ್ತರ ಹಾಗೂ ಕರಾವಳಿ ಭಾಗದಲ್ಲಿ ಮಳೆ ಹೆಚ್ಚಾಗಿ ನದಿಗಳು ಉಕ್ಕಿ ಹರಿದು ಅನೇಕ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ ಆದ್ದರಿಂದ ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರ ಕಷ್ಟದ ಬಾಳು ದೂರಾಗಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿ ಬಾಗೇಪಲ್ಲಿ ಪಟ್ಟಣದ ಮುಸ್ಲಿಂ ಸಮುದಾಯದ ಹಿರಿಯ ಜಾಮೀಯ ಮದೀನಾ,ಫರೂಕ್,ನೂರಾನಿ ಸೇರಿದಂತೆ 16 ಮಸೀದಿಗಳ ವತಿಯಿಂದ ಬಾಗೇಪಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ 53 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ ಈ ಸಂದರ್ಭದಲ್ಲಿ ಬಾಗೇಪಲ್ಲಿ ಪಟ್ಟಣದ ಜಮಾತ್ ಇ- ಉಲಮಾದ ತಾಲ್ಲೂಕು ಸಮಿತಿ ಅಧ್ಯಕ್ಷ ಮೌಲಾನಾ ರಿಜ್ವಾನ್ ಮಾತನಾಡಿ ಕರ್ನಾಟಕ ಉತ್ತರ ಹಾಗೂ ಕರಾವಳಿ ಭಾಗದ ಜನರು ಭೀಕರ ಮಳೆಯಿಂದಾಗಿ ಸಂಕಷ್ಟಕ್ಕೆ ಒಳಾಗಗಿದ್ದಾರೆ ಆದ್ದರಿಂದ ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಸಂಚಾರಿಸಿ ಸುಮಾರು 53 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿದ್ದೇವೆ ಈ ನಿಧಿ ಸಂಗ್ರಹವಾದ ಹಣವನ್ನು ಜಿಲ್ಲಾ ಸಮಿತಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮೌಲಾನಾ ಹಜರತ್‌‌ ಹೈದರವಲಿ,ಮೌಲಾನಾ ರಿಯಾಜುದ್ದೀನ್,ಆದಿಲ್ ಖಾನ್,ಆಯಾಜ್, ಜುಬೇರ್ ಅಹ್ಮದ್ ರಫೀಕ್,ಸಿಕಂದರ್, ಅಕ್ರಂ ಇದ್ದರು.

 ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *