ಮಹಿಳೆಯರ ಸಾಧನೆಗೆ ಅಡ್ಡಿ ಬೇಡ ಇನ್ನರ ವಿಲ್ ಕ್ಲಬ್ ಅಧ್ಯಕ್ಷರಾದ ಜ್ಯೋತಿ ಪಲ್ಯದ ಅವರು ಹೇಳಿದರು….

Spread the love

ಮಹಿಳೆಯರ ಸಾಧನೆಗೆ ಅಡ್ಡಿ ಬೇಡ ಇನ್ನರ ವಿಲ್ ಕ್ಲಬ್ ಅಧ್ಯಕ್ಷರಾದ ಜ್ಯೋತಿ ಪಲ್ಯದ ಅವರು ಹೇಳಿದರು….

ಯಲಬುರ್ಗಾ ಪಟ್ಟಣದ ಜ್ಞಾನಸಾಗರ ಶಾಲೆಯಲ್ಲಿ ಇನ್ನರ ವಿಲ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.  ಕಾರ್ಗಿಲ್ ವಿಜಯ ದಿವಸ ನಿಮಿತ್ಯ ನಿವೃತ್ತ ಸೈನಿಕರಿಗೆ ಮತ್ತು ತಾಲೂಕಿನ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ದೇಶದ ಗಡಿಯನ್ನು ರಕ್ಷಿಸುವವರು ಸೈನಿಕರ ಆದರೆ ದೇಶದೊಳಗಿನ ಅನ್ಯಾಯ ಅಕ್ರಮಗಳ ವಿರುದ್ಧ ಧ್ವನಿ ಎತ್ತುವವರು ಪತ್ರಕರ್ತರಾಗಿದ್ದರು. ಸೈನಿಕರು ಮತ್ತು ಪತ್ರಕರ್ತರ ಶ್ರಮ ಬಹಳ ಅಮೋಘವಾಗಿದ್ದು ಈ ಕಾರ್ಯಕ್ರಮದಲ್ಲಿ ಇನ್ನರ್ ವಿಲ್ ಕ್ಲಬ್ ಸಾಧಕರನ್ನು ಗುರುತಿಸುತ್ತಾ ಗೌರವಿಸುವ ಕಾರ್ಯಕ್ರಮ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕುಷ್ಟಗಿ ಇನ್ನರ್ ವಿಲ್ ಕ್ಲಬ್ ಮಾಜಿ ಅಧ್ಯಕ್ಷರಾದ ಡಾ, ಪಾರ್ವತಿ ಅವರು ಮಾತನಾಡಿ ಮಹಿಳೆಯರು ಸದಾ ಉಳಿತಾಯ ಯೋಜನೆಯ ಮೂಲಕ ಕುಟುಂಬದ ಆರ್ಥಿಕ ಪರಸ್ಥಿತಿ ಪ್ರಯತ್ನಕ್ಕೆ ದೇಶದ ಬೇರೆ ಕಡೆಗಳಲ್ಲಿ ಇನ್ನರ ವಿಲ್ ಕ್ಲಬ್ ಗಳು ತಾವು ಗಳಿಸಿದ ಶೇಕಡಾ 50ರಷ್ಟು ನಿಧಿಯನ್ನು ಅಂತರಾಷ್ಟ್ರೀಯ ಮಟ್ಟದ ಕಾರ್ಯಗಳಿಗೆ ಬಳಸಲು ಕಳಿಸಲಾಗಿದೆ ಎಂದು ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಡಾ, ಶಿಲ್ಪಾ ಅವರು ಮಾತನಾಡಿ ಇಂತಹ ಸಂದರ್ಭದಲ್ಲಿ ಗಿಡಗಳನ್ನು ಬೆಳೆಸುವುದು ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಬಡವರಿಗೆ ಆಹಾರದ ಕಿಟ್ಟು ಕೊಡುವ ಮೂಲಕ ರೋಟರಿ ಕ್ಲಬ್ ವಿಶೇಷವಾಗಿ ಕೆಲಸಗಳನ್ನು ಮಾಡುತ್ತಿದೆ. ಪಟ್ಟಣ ಪಂಚಾಯತಿ ಸದಸ್ಯರಾದ ಡಾಕ್ಟರ್ ನಂದಿತಾ ದಾನರೆಡ್ಡಿ ರಾಷ್ಟ್ರವಾಗಿ ಮಾತನಾಡಿ ಕಳೆದ 5 ವರ್ಷಗಳಿಂದ ನಡೆದ ಬೆಳವಣಿಗೆಗಳ ಕುರಿತು ವಿವರಿಸಿದರು. ಇಂತಹ ಕೊರೋನ ಸಂದರ್ಭದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಮಾಸ್ಕ ವಿತರಿಸುವುದು ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಕರುಣೆಯ ಗೋಡೆ ಎನ್ನುವ ಯೋಜನೆಯ ಮೂಲಕ ಸಾರ್ವಜನಿಕರಿಗೆ ಆಸರೆಯಾಗಿದೆ ಎಂದು ಮಾಹಿತಿ ತಿಳಿಸಿದರು.  ಈ ವೇದಿಕೆಯ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಸವಿತಾ ಬಸಪ್ಪ ಗೌಡ. ನೀಲಾಂಬಿಕ ಸಿಎಚ್ ಪಾಟೀಲ್. ಕೀರ್ತಿ ಜಕ್ಕಲಿ. ಲತಾ ಕಲ್ಯಾಣಿ. ಚೆನ್ನಮ್ಮ ಪಾಟೀಲ್.  ಶೋಭಾ ಬೆಲೇರಿ.  ಶಾರದಾ ಕೊಣ್ಣೋರು. ಲಕ್ಷ್ಮೀ ಹಿರೇಮಠ. ಸವಿತಾ ಓಜನಹಳ್ಳಿ. ನಿರೂಪಣೆ ಮಾಡಿದರು ಇನ್ನುಳಿದ ಉಪಸ್ಥಿತರಿದ್ದರು.

ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *