ಪದ್ಮಶ್ರೀ ಪುರಸ್ಕೃತ ಡಾ!! ದೊಡ್ಡರಂಗೇಗೌಡರು ಅರ್ಪಿಸುವ, ಮಾಡ್ದೋರ್ ಪಾಪ ಆಡ್ದೋರ್ ಬಾಯಲ್ಲಿ ….

Spread the love

ಪದ್ಮಶ್ರೀ ಪುರಸ್ಕೃತ ಡಾ!! ದೊಡ್ಡರಂಗೇಗೌಡರು ಅರ್ಪಿಸುವ, ಮಾಡ್ದೋರ್ ಪಾಪ ಆಡ್ದೋರ್ ಬಾಯಲ್ಲಿ ….

ಪದ್ಮಶ್ರೀ ಪುರಸ್ಕೃತ ಡಾ!! ದೊಡ್ಡರಂಗೇಗೌಡರು ಅರ್ಪಿಸುವ, ಡಾ!! ವಿಷ್ಣುವರ್ಧನ್ ರವರ ಸವಿನೆನಪಿನೊಂದಿಗೆ ಶ್ರೀ ಯಜಮಾನ ಕಂಬೈನ್ಸ್ ಅಡಿಯಲ್ಲಿ ಡಾ!! ಕರಾಟೆ A.P.ಶ್ರಿ ನಾಥ್ ನಿರ್ಮಾಪಕರಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಮಾಡ್ದೋರ್ ಪಾಪ ಆಡ್ದೋರ್ ಬಾಯಲ್ಲಿ  ಚಿತ್ರವನ್ನು ಯುವ ನಿರ್ದೇಶಕ ಕಾರ್ತಿಕ್ ರಾಂ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಸಹ ಬರೆದಿದ್ದಾರೆ. ಈ ಚಿತ್ರದ ನಾಯಕನಾಗಿ ಪ್ರಜ್ವಲ್, ನಾಯಕಿಯಾಗಿ ಪ್ರಿಯಾಂಕ ಮತ್ತು ಇತರ ಪ್ರಮುಖ ಪಾತ್ರಗಳಲ್ಲಿ ಮಜಾಭಾರತ ಖ್ಯಾತಿಯ ಚಿಲ್ಲರ್ ಮಂಜು, ಬಸವರಾಜು, ಡಬ್ ಸ್ಮ್ಯಾಷ್ ಖ್ಯಾತಿಯ ಬಾಲನಟಿ ಭೈರವಿ, ಹಿರಿಯ ನಟ ವೈಭವ್ ನಾಗರಾಜ್, ಖಳನಟ ಉಮೇಶ್(ಜೋಗಿ ಸಿನಿಮಾ ಖ್ಯಾತಿಯ ಪುಂಗ),  ಸಂಪತ್, ಹಿರಿಯ ನಟಿಯರಾದ ಅನ್ನಪೂರ್ಣ ಹಾಗೂ ರೇಣು ಶಿಖಾರಿ, ಜೊತೆಜೊತೆಯಲಿ ಧಾರವಾಹಿ ಖ್ಯಾತಿಯ ಲಕ್ಷ್ಮೀ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಲನಚಿತ್ರದ ಚಿತ್ರೀಕರಣ ಚನ್ನಪಟ್ಟಣ ಸುತ್ತಮುತ್ತ ಅದ್ಧೂರಿಯಾಗಿ ನಡೆಯುತ್ತಿದೆ. ಛಾಯಾಗ್ರಾಹಕರಾಗಿ ಹೆಚ್.ಎಂ.ರವಿಕುಮಾರ್ ತಮ್ಮ ಕೈಚಳಕ ತೋರುತ್ತಿದ್ದಾರೆ.

ವರದಿ:- ಮೌನೇಶ್ ರಾಥೋಡ್ ಬೆಂಗಳೂರು

Leave a Reply

Your email address will not be published. Required fields are marked *