ಜಿಲ್ಲಾ ಮಟ್ಟದ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ……..

Spread the love

ಜಿಲ್ಲಾ ಮಟ್ಟದ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ……..

ಚಿಟಗುಪ್ಪ : ವಿಕಾಸ್ ಅಕಾಡೆಮಿ ಹುಮನಾಬಾದ ಜಿಲ್ಲೆ ಹಾಗೂ ತಾಲೂಕು ವಿಕಾಸ್ ಅಕಾಡೆಮಿ ಚಿಟಗುಪ್ಪ ರವರ ಸಂಯುಕ್ತಾಶ್ರಯದಲ್ಲಿ ಇಂದು ಚಿಟಗುಪ್ಪ ನಗರದ ಬನಶಂಕರಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಮಟ್ಟದ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿಸುವ ಮೂಲಕ ಜಿಲ್ಲಾ ವಿಕಾಸ್ ಅಕಾಡೆಮಿ ಅಧ್ಯಕ್ಷರಾದ ಶಿವಾನಂದ ಮಂಠಾಳ್ಕರ್ ರವರು ಚಾಲನೆ ನೀಡಿ ವಿಕಾಸ್ ಅಕಾಡೆಮಿ ಗುರಿ, ಧ್ಯೇಯ ಹಾಗೂ ಯೋಜನೆಗಳ ಕುರಿತು ಮಾತನಾಡಿ ವೃಕ್ಷಾರೋಪಣ ಅಭಿಯಾನ ಯಶಸ್ವಿಯಾಗಿ ಮಾಡುವ ಮೂಲಕ ಪ್ರತಿಯೊಬ್ಬರು ತಮ್ಮ ಮನೆ ಹಾಗೂ ಹೊಲಗಳಲ್ಲಿ ಸಸಿ ನೆಡುವ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ಕರೆಯನ್ನು ನೀಡಿದರು. ಅತಿಥಿಗಳಾಗಿ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ ಪುರೋಹಿತ ರವರು ವಿಕಾಸ್ ಅಕಾಡೆಮಿ ಚಿಟಗುಪ್ಪ ರವರಿಗೆ ಬೇಕಾದ ಸಹಕಾರ ನಾವು ನೀಡಲು ಸಿದ್ಧರಿದೇವೆ, ಹತ್ತು ಸಾವಿರ ಸಸಿಗಳು ಚಿಟಗುಪ್ಪ ತಾಲೂಕಿನ ತುಂಬೆಲ್ಲ ನೆಡುತ್ತಿರುವುದ ಶ್ರೇಷ್ಠ ಕಾರ್ಯ,ಈ ಅದ್ಭುತವಾದ ಕಾರ್ಯವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡುತ್ತಿರುವ ಸಂಗಮೇಶ ಜವಾದಿಯವರ ಸಮಾಜಿಕ ಹಾಗೂ ಪರಿಸರ ಸಂರಕ್ಷಣೆ ಕಳಕಳಿಯ ಮೆಚ್ಚುವಂತಹದು.ಅದಕ್ಕಾಗಿ ನಮ್ಮೆಲ್ಲರ ಬೆಂಬಲ ಅವರಿಗೆ ಸದಾ ಇರುತ್ತದೆ ಎಂದರು. ಶಂಕರ ಕನಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯಿತಿ ಚಿಟಗುಪ್ಪ ರವರು ವಿಕಾಸ್ ಅಕಾಡೆಮಿ ವೃಕ್ಷಾರೋಪಣ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಆದ್ದರಿಂದ ಇದಕ್ಕೆ ಬೇಕಾದ ಸಹಕಾರ ನಾವು ನೀಡುತ್ತೇವೆಂದರು. ಜಿಯಾಯೊದ್ದಿನ್ ತಹಸೀಲ್ದಾರ್ ರು ಹಾಗೂ ದಂಡಾಧಿಕಾರಿಗಳು ಚಿಟಗುಪ್ಪ ರವರು ಮಾತನಾಡಿ ಪ್ರತಿಯೊಬ್ಬರು ಅವರ ಹುಟ್ಟು ಹಬ್ಬದದ್ದು ಸಸಿ ನೆಡುವ ಕಾರ್ಯ ಮಾಡಬೇಕು ಹಾಗೆ ಅರಣ್ಯ ಸಂರಕ್ಷಣೆ ಮಾಡುವ ಕೆಲಸವನ್ನು ಸಹ  ಮಾಡಬೇಕು. ಅಂದಾಗ ಮಾತ್ರ ನಮಗೆ ಸ್ವಚ್ಛವಾದ ಗಾಳಿ ದೊರೆಯುತ್ತದೆ.ಈ ದಿಸೆಯಲ್ಲಿ ವಿಕಾಸ್ ಅಕಾಡೆಮಿ ಚಿಟಗುಪ್ಪ ರವರು ಮಾಡುತ್ತಿರುವ ಸೇವೆ ಅಪಾರವೆಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾಗೂ ಜಿಲ್ಲಾ ವಿಕಾಸ್ ಅಕಾಡೆಮಿಯ ಸಂಚಾಲಕರಾದ ಶಿವಶಂಕರ್ ತರನ್ನಳ್ಳಿ ಯವರು ವಿಕಾಸ್ ಅಕಾಡೆಮಿ ಇಲ್ಲಿಯವರೆಗೆ ನಡೆದ ಬಂದು ದಾರಿ ಹಾಗೂ ಮುಂದೆ ಮಾಡಬೇಕಾದ ಹಲವು ಜನಪರ ಕಾರ್ಯಗಳ ಬಗ್ಗೆ ವಿವರಿಸಿ, ಹುಮನಾಬಾದ ಜಿಲ್ಲಾ ವಿಕಾಸ್ ಅಕಾಡೆಮಿಯ ಸ್ಥಾನಮಾನದ ಕುರಿತು ಹಾಗೂ ಹುಮನಾಬಾದ ಜಿಲ್ಲೆಯಲ್ಲಿ ಬರುವ ತಾಲೂಕಿನ ಕುರಿತು ಮಾಹಿತಿಯನ್ನು ನೀಡಿದರು. ಜಿಲ್ಲಾ ಮಟ್ಟದ ವೃಕ್ಷಾರೋಪಣ ಕಾರ್ಯಕ್ರಮ ಯಶಸ್ವಿಯಾಗಿ ಸಂಘಟನೆ ಮಾಡುವ ಮೂಲಕ ಈ ಭಾಗದಲ್ಲಿ ಬಲಿಷ್ಠ ಸಂಘಟನೆ ಮಾಡಿ, ಜನಪರ ಕಾರ್ಯಗಳನ್ನು ಮಾಡಬೇಕು. ಅದೇ ರೀತಿ ಸರಕಾರದ ಸೇವೆಗಳು ಜನರ ಬಳಿಗೆ ಕೊಂಡೊಯ್ಯುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕೆಂದರು. ವೇದಿಕೆ ಮೇಲೆ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಮಾಲಾಶ್ರೀ ಭೂತಾಳೆ, ರಾಘವೇಂದ್ರ ಹಳ್ಳಿಖೇಡ್, ಸುರೇಶ ಕುಂಬಾರ ಇದ್ದರು. ವಿಕಾಸ್ ಅಕಾಡೆಮಿ ತಾಲೂಕ ಸಂಚಾಲಕರಾದ ಸಂಗಮೇಶ ಎನ್ ಜವಾದಿಯವರು ಸ್ವಾಗತಿಸಿದರು. ವಿಕಾಸ್ ಅಕಾಡೆಮಿ ತಾಲೂಕ ಅಧ್ಯಕ್ಷರಾದ ಸೂರ್ಯಕಾಂತ ಮಠಪತಿಯವರು ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಸಾವಿತ್ರಿ ಪಾಟೀಲ ರವರು ನಿರೂಪಿಸಿದರು. ಶ್ರೀಮತಿ ವಿಮಲಾಬಾಯಿ ಯವರು ವಂದಿಸಿದರು. ಕಾರ್ಯಕ್ರಮದಲ್ಲಿ ಮಾಹಾರುದ್ರ ಅಣದೂರೆ,ದಯಾನಂದ ಚೀತಕೋಟ,ಅರವಿಂದ ಗಾದಾ, ರಾಜಕುಮಾರ ಹರಕಂಚಿ,ಮಲ್ಲಶೆಟ್ಟಿ,ಬೀಮಶೇಟ್ಟಿ, ಸಚೀನ ಮಠಪತಿ, ಮಲ್ಲಯ್ಯ ಸ್ವಾಮಿ, ಮಲ್ಲಶೆಟ್ಟಿ ಗೌರಾ, ತುಕರಾಮ ಅಂಬೆಗಾರ,ರಾಜು ಹಡಪದ ಹಾಗೂ ಬನಶಂಕರಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಅನೇಕ ಗಣ್ಯರು ಹಾಜರಿದ್ದರು.

ವರದಿ – ಸಂಗಮೇಶ ಎನ್ ಜವಾದಿ

Leave a Reply

Your email address will not be published. Required fields are marked *