ಈಶಾನ್ಯ ಸಾರಿಗೆ ಸಂಸ್ಥೆಯ ವತಿಯಿಂದ ಸಂಚಾರ ನಿಯಂತ್ರಕರಾದ ಉಮೇಶಪ್ಪ ವಿವೇಕಿ ಅವರಿಗೆ ನಿವೃತ್ತಿ ಬೀಳ್ಕೊಡುಗೆ ಸಮಾರಂಭ..

Spread the love

ಈಶಾನ್ಯ ಸಾರಿಗೆ ಸಂಸ್ಥೆಯ ವತಿಯಿಂದ ಸಂಚಾರ ನಿಯಂತ್ರಕರಾದ ಉಮೇಶಪ್ಪ ವಿವೇಕಿ ಅವರಿಗೆ ನಿವೃತ್ತಿ ಬೀಳ್ಕೊಡುಗೆ ಸಮಾರಂಭ..

ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದ ಉಮೇಶಪ್ಪ ವಿವೇಕಿ ಅವರಿಗೆ ಯಲಬುರ್ಗಾ ಘಟಕದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಅದ್ದೂರಿ ಸನ್ಮಾನ ಕೈಗೊಂಡರು   ನೆಡದ ದಾರಿ  ಉಮೇಶಪ್ಪ ವಿವೇಕಿ ಅವರು ಡಿ. 1985 ರಲ್ಲಿ ಪ್ರಥಮವಾಗಿ ಗುಲ್ಬರ್ಗ ವಿಭಾಗಕ್ಕೆ ನಿರ್ವಾಹಕರಾಗಿ ಕರ್ತವ್ಯಕ್ಕೆ ಸೇರಿದರು ಮತ್ತೆ ಅಲ್ಲಿಂದ 1991 ರಲ್ಲಿ ಹುಬ್ಬಳ್ಳಿ ವಿಭಾಗ ಹಿರೇಕೆರೂರು ಘಟಕಕ್ಕೆ ವರ್ಗಾವಣೆಯಾದರೂ ನಂತರ ಅಲ್ಲಿಂದ 1992ರಲ್ಲಿ ಗದಗ್ ವರ್ಗಾವಣೆಯಾಗಿ 1996 ರಿಂದ  ಕೊಪ್ಪಳ ಜಿಲ್ಲೆ ಯಲಬುರ್ಗಾ ಘಟಕದಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಾ ಬಂದರು.  ಇವರು 22 ವರ್ಷ ನಿರ್ವಾಹಕರಾಗಿದ್ದರು ನಂತರ 2007 ರಲ್ಲಿ ಯಲಬುರ್ಗಾ ಬಸ್ ನಿಲ್ದಾಣ ಸಂಚಾರ ನಿಯಂತ್ರಕರಾಗಿ ಬಡ್ತಿ ಹೊಂದಿದರು. ಇವರು 36 ವರ್ಷ ಸಾರಿಗೆ ಸಂಸ್ಥೆಯಲ್ಲಿ ಒಬ್ಬ ನಿಷ್ಠಾವಂತ ನಿರ್ವಾಹಕ ಮತ್ತು ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ M A ಮುಲ್ಲಾ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ. I. M ಬಿರಾದಾರ್ ವಿಭಾಗೀಯ ನಿಯಂತ್ರಣಾಧಿಕಾರಿ. ಮಲ್ಲಿಕಾರ್ಜುನ ಕೆಲಗೇರಿ ವಿಭಾಗೀಯ ತಾಂತ್ರಿಕ ಶಿಲ್ಪಿ ನಿಯಂತ್ರಣಾಧಿಕಾರಿಗಳು. ಶ್ರೀ ಸುಬಾನಿ ಸಿಬ್ಬಂದಿ ಮೇಲ್ವಿಚಾರಕರು. ಚಿದಾನಂದ್ ಲೆಕ್ಕ ಮೇಲ್ವಿಚಾರಕರು. ರಮೇಶ್ ಹಣಗಿ. ಆರ್ ಬಿ ಕಂದಗಲ್. ಎಮ್ ಡಿ ಆರಬಳ್ಳಿನ ಎಲ್ಲಾ ಚಾಲಕ ನಿರ್ವಾಹಕರು ಹಾಗೂ ಸಿಬ್ಬಂದಿ ವರ್ಗದವರು ಬೀಳ್ಕೊಡುಗೆ  ಸನ್ಮಾನ ಕಾರ್ಯಕ್ರಮ ಯಲಬುರ್ಗಾ ಘಟಕದಲ್ಲಿ ಹಮ್ಮಿಕೊಂಡಿದ್ದರು.

ವರದಿ – ಹುಸೇನ್ ಮೋತೆಖಾನ್

2 thoughts on “ಈಶಾನ್ಯ ಸಾರಿಗೆ ಸಂಸ್ಥೆಯ ವತಿಯಿಂದ ಸಂಚಾರ ನಿಯಂತ್ರಕರಾದ ಉಮೇಶಪ್ಪ ವಿವೇಕಿ ಅವರಿಗೆ ನಿವೃತ್ತಿ ಬೀಳ್ಕೊಡುಗೆ ಸಮಾರಂಭ..

Leave a Reply

Your email address will not be published. Required fields are marked *