ರೈತ ಸಂಪರ್ಕ ಕೆಂದ್ರದಲ್ಲಿ ಬೀಜ ಗೊಬ್ಬರ ನೀಡಲು ಅಧಿಕಾರಿಗಳ ಬೇಜವಾಬ್ದಾರಿ ಹೆಳಿಕೆಯಿಂದ ರೊಚ್ಚಿಗೆದ್ದ ಜುಮಲಾಪೂರ ಭಾಗದ ರೈತರು..

Spread the love

ರೈತ ಸಂಪರ್ಕ ಕೆಂದ್ರದಲ್ಲಿ ಬೀಜ ಗೊಬ್ಬರ ನೀಡಲು ಅಧಿಕಾರಿಗಳ ಬೇಜವಾಬ್ದಾರಿ ಹೆಳಿಕೆಯಿಂದ ರೊಚ್ಚಿಗೆದ್ದ ಜುಮಲಾಪೂರ ಭಾಗದ ರೈತರು..

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ  ರೈತರಿಗೆ ಸಮರ್ಪಕವಾಗಿ ಬೀಜ ಮತ್ತು ರಸಗೊಬ್ಬರ ನೀಡದೆ ರೈತರಿಗೆ  ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ  ರೈತ ಸಂಪರ್ಕ ಕೇಂದ್ರದ ಅಧಿಕಾರಿ ಎಸ್ ವಿ ಹುಣಸಿಹಾಳ ವಿರುದ್ಧ  ರೈತರು ಧಿಕ್ಕಾರ ಕೂಗಿದರು ಸರ್ಕಾರದಿಂದ ಪ್ರತಿ ವರ್ಷ NHFMS ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿಯಲ್ಲಿ. ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಸಮುದಾಯದ ವರೆಗೆ ಸಮರ್ಪಕವಾಗಿ ನೀಡಲು ಎಣ್ಣೆ ಕಾಳು ಬೀಜ ಬಿತ್ತನೆ ಬೀಜ ಸರ್ಕಾರ ನಿಡುತ್ತಿದ್ದು ಸಮರ್ಪಕವಾಗಿ ರೈತರಿಗೆ ಬೀಜ ನಿಡದೆ ಇರುವದು ರೈತರ ಆಕ್ರೋಶಕ್ಕೆ ಕಾರಣವಾಗಿದೆ  ಪರಿಶಿಷ್ಟ ಜಾತಿ ಪಂಗಡಕ್ಕೆ ಬಂದಿರುವ  ತಾಡಪಾಲ್  ಹಾಗೂ ಬೀಜ ಗಳಿಗೆಅರ್ಜಿ ನಿಡುತ್ತಾ ಬಂದಿದ್ದೆವೆ    ಆದರೂ ಹೆಚ್ಚಿನ ಬೆಲೆ ಗೆ  ಜನರಲ್ ಗೆ  ನಿಡುತ್ತಿರುವದು ರೈತರ ಆಕ್ರೋಶಕ್ಕೆ ಕಾರಣವಾಗಿದೆ    ಈ ಸಂದರ್ಭದಲ್ಲಿ  ಸುತ್ತ ಮುತ್ತಲಿನ ಗ್ರಾಮಗಳ ರೈತರು ಹಾಗೂ ಜುಮಲಾಪೂರ ಭಾಗದ ರೈತರಾದ  ಶಂಕರಪ್ಪ ನಾಯಕ ನಿಂಗಪ್ಪ ನಾಯಕ  ಡಿ ಎಸ್ ಎಸ್  ಗ್ರಾಮ ಘಟಕದ ಅಧ್ಯಕ್ಷ ಶಂಕರಪ್ಪ ಚಲುವಾದಿ ಬುಡನೆಸಾಬ  ಗ್ರಾಮ ಪಂ ಸದಸ್ಯ ಶರಣಪ್ಪ ಸಾಸ್ವಿಹಾಳ ಹಾಗೂ ರೈತರ ಇದ್ದರು  ಏನೆ ಆಗಲಿ ರೈತರು ಈ ದೇಶದ ಬೆನ್ನೆಲುಬು ರೈತ ನಕ್ಕರೆ ಜಗವೆಲ್ಲ ಸಕ್ಕರೆ   ಹಾಗಾಗಿ ಹಳ್ಳಿಯಿಂದ ಬರುವ ರೈತರಿಗೆ  ಅಧಿಕಾರಿಗಳು ಸಹನೆಯಿಂದ ಸಹಕಾರ ನೀಡಿ ರೈತರಿಗೆ ನೇರವಾಗಬೇಕಿದೆ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *