ರೈತ ವಿರೋಧಿ ಕಾಯ್ದೆ ರದ್ದಿಗೆ ರೈತ ಸಂಘ ಒತ್ತಾಯ ಮಸ್ಕಿ ತಹಸಿಲ್ದಾರ್ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು

Spread the love

ರೈತ ವಿರೋಧಿ ಕಾಯ್ದೆ ರದ್ದಿಗೆ ರೈತ ಸಂಘ ಒತ್ತಾಯ ಮಸ್ಕಿ ತಹಸಿಲ್ದಾರ್ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು

ಮಸ್ಕಿ :- ರೈತ ವಿರೋಧಿ ಕಾಯ್ದೆ ರದ್ದತಿಗೆ ಆಗ್ರಹ ವಿವಾದಾತ್ಮಕ ರೈತ ವಿರೋಧಿ ಕೃಷಿಕಾಯ್ದೆಗಳನ್ನು ರದ್ದುಗೊಳಿಸಿ , ಎಂ.ಎಸ್‌.ಪಿ ಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಾಮೂಹಿಕ ನಾಯಕತ್ವದಡಿಯಲ್ಲಿ ಕಾರ್ಯಕರ್ತರು ಮಸ್ಕಿ ತಹಸಿಲ್ದಾರ್ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಚಳುವಳಿ ಏಳು ತಿಂಗಳು ಪೂರೈಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ರೈತರ ಸಮಸ್ಯೆ ಗಣನೆಗೆ ತಗೆದುಕೊಳ್ಳದಿರುವುದು ಬೇಸರದ ಸಂಗತಿ ಎಂದರು. ಕಳೆದ 74 ವರ್ಷಗಳಿಂದ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಇತರೆ ಕ್ಷೇತ್ರಗಳು ಕುಸಿದವು ಆದರೆ , ಕೃಷಿಕ್ಷೇತ್ರದಲ್ಲಿ ದಾಖಲೆಯ ಉತ್ಪಾದನೆ ಸಾಧಿಸಿದ್ದೇವೆ ಎಂದು ತಿಳಿಸಿದರು.  ಕೇಂದ್ರ ಸರ್ಕಾರ ಕರಾಳ ಮೂರು ರೈತ ವಿರೋಧಿ ಕಾಯ್ದೆಗಳನ್ನು ನಮ್ಮ ಮೇಲೆ ಹೇರಿದೆ ಈ ಕಾನೂನು ಕೃಷಿಯನ್ನು ಮತ್ತು ಕೃಷಿಯ ಮುಂದಿನ ಪೀಳಿಗೆಯನ್ನು ನಾಶಪಡಿಸುತ್ತಿದ್ದು ಕೃಷಿ ಕ್ಷೇತ್ರವನ್ನು ರೈತರ ಕೈಯಿಂದ ಕಸಿದುಕೊಂಡು ಕಾರ್ಪೋರೆಟ್‌ ಕಂಪೆನಿಗಳಿಗೆ ಹಸ್ತಾಂತರಿಸುವ ಕಾನೂನು ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಕೃಷಿಕ್ಷೇತ್ರದಲ್ಲಿ ನಷ್ಟ ಅನುಭವಿಸಿ ಕಳೆದ 30 ವರ್ಷಗಳಲ್ಲಿ 4 ಲಕ್ಷಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ| ಸ್ವಾಮಿನಾಥನ್‌ ಸಮಿತಿ ವರದಿಯಂತೆ ಕೃಷಿ ಬೆಂಬಲ ಬೆಲೆಯನ್ನು ನಿಗದಿಪಡಿಸಿ ರೈತರಿಗೆ ಕಾನೂನು ಚೌಕಟ್ಟಿನಲ್ಲಿ ಖಾತರಿ ಪಡಿಸಬೇಕೆಂದು ಆಗ್ರಹಿಸಿದರು. ಕೇಂದ್ರ ಸರ್ಕಾರ ರಸಗೊಬ್ಬರ , ಕೀಟನಾಶಕ , ಬಿತ್ತನೆ ಬೀಜ , ಕೃಷಿ ಯಂತ್ರೋಪಕರಣ ಹಾಗೂ ಪೆಟ್ರೋಲ್‌ , ಡೀಸೆಲ್‌ ಬೆಲೆ ಏರಿಕೆ ಮಾಡಿದ್ದು , ರೈತ ಸಮುದಾಯಕ್ಕೆ ತೀವ್ರವಾದ ಆರ್ಥಿಕ ನಷ್ಟವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆಯನ್ನು ತಗ್ಗಿಸಬೇಕೆಂದು ಒತ್ತಾಯಿಸಿದರು.  ರೈತರು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗೆ ಬಾರದೆ ಕೃಷಿಕ್ಷೇತ್ರವನ್ನು ಉದ್ಯಮಿಗಳ ಕೈವಶ ಮಾಡಲು ಮುಂದಾಗಿದ್ದು, ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ತಕ್ಷಣ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದಡಿಯಲ್ಲಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಹಾಗೂ ಉಪ ತಹಸೀಲ್ದಾರ್ ಮತ್ತು ವಿಜಯ ಬಡಿಗೇರ್ ತಾಲೂಕ ಅಧ್ಯಕ್ಷರು , ಹನುಮಂತಪ್ಪ ಗೌರವಾಧ್ಯಕ್ಷ , ಜಾಕೋಬ್ ತಾಲೂಕ ಉಪಾಧ್ಯಕ್ಷರು , ಶೇಟ್ಟಪ್ಪ ಮಾಡಲದಿನ್ನಿ ತಾಲೂಕ ಉಪಾಧ್ಯಕ್ಷರು , ಶಂಕ್ರಪ್ಪ ಅಡ್ಡೇದರ್ ಪ್ರಧಾನ ಕಾರ್ಯದರ್ಶಿ , ಆಂಜನೇಯ ಮೋಚಿ ಸಂಘಟನಾ ಕಾರ್ಯದರ್ಶಿ , ಹನುಮಂತಪ್ಪ ಉಪ್ಪಾರ್ ಖಜಾಂಚಿ , ಯಮನಪ್ಪ ಬೋವಿ ಸಲಹೆಗಾರರು ಹಾಗೂ ಇತರರು ಉಪಸ್ಥಿತರಿದ್ದರು..

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

ಕರ್ನಾಟಕದ ಪ್ರತಿ ಜಿಲ್ಲೆ ಹಾಗೂ ತಾಲೂಕು, ಪ್ರತಿ ಹಳ್ಳಿ/ಹಳ್ಳಿಗಳಿಂದ ಸುದ್ದಿ ಹಾಗೂ ಜಾಹಿರಾತುಗಳಿಗೆ ಸಂಪರ್ಕಿಸಿರಿ.

ಆರ್.ಬಿ.ಅಲಿಆದಿಲ್ ಸಂಪಾದಕರು                  ಅಮಾಜಪ್ಪ ಹೆಚ್.ಜಿ. ಉಪ-ಸಂಪಾದಕರು

ಮೋ.ನಂ / 9535969428                            ಮೋ.ನಂ / 8861279127

Leave a Reply

Your email address will not be published. Required fields are marked *