ಕಳಪೆ ಬೀಜ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಅಕ್ರಮವಾಗಿ ಸಂಗ್ರಹಿಸಿದ ಗೋದಾಮು ಮೇಲೆ ಕೃಷಿ ಅಧಿಕಾರಿಗಳಿಂದ ದಾಳಿ.

Spread the love

ಕಳಪೆ ಬೀಜ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಅಕ್ರಮವಾಗಿ ಸಂಗ್ರಹಿಸಿದ ಗೋದಾಮು ಮೇಲೆ ಕೃಷಿ ಅಧಿಕಾರಿಗಳಿಂದ ದಾಳಿ.

ಕೊಪ್ಪಳ  ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ರೈತರಿಗೆ ಮೋಸದಿಂದ ಕಳಪೆ ಭತ್ತದ ಬೀಜ ಮಾರಾಟ ಮಾಡ್ತಾಯಿರುವ ವ್ಯಕ್ತಿ ಮಲ್ಲನಗೌಡ ತಂದೆ ಮಲ್ಕಾಜಪ್ಪ ಹೊಸಮನಿ ಇವನು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಗೋದಾಮು ಮೇಲೆ ಕೃಷಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಎ.ಪಿ.ಎಮ್.ಸಿ ಯಾರ್ಡಿನ ನಂ:2 ಗೋದಾಮಿನಲ್ಲಿ ಮಲ್ಲನಗೌಡ ಮಲ್ಕಾಜಪ್ಪ ಎಂಬುವ ವ್ಯಕ್ತಿ ಕಳಪೆ ಭತ್ತದ ಬೀಜಗಳನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 450 ಚೀಲಗಳಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲು ಶ್ಯಾಂಪಲ್ ಪಡೆದುಕೊಂಡ ಅಧಿಕಾರಿಗಳು, ದೂರು ದಾಖಲಿಸಿಕೊಂಡಿದ್ದಾರೆ.ಈ ವೇಳೆ ಕಳೆಪೆ ಬೀಜ ಮಾರುತ್ತಿರುವ ಮಲ್ಲನಗೌಡ ಈತನು, ನಾನು ಕಳಪೆ ಬೀಜ ಮಾರುತ್ತಿಲ್ಲಾ, ನಾನು ಕೋಟ್ಯಾಧೀಶ ನನ್ನದು ಸಾಕಷ್ಟು ಭೂಮಿ ಇದೆ, ನಾನು ನನ್ನ ಹೊಲ ಮಾಡಿ,ಬೆಳೆದ ಭತ್ತ ಇವು ಎಂದು ಹೇಳುವುದಲ್ಲದೇ, ಅನೇಕ ರಾಜಕೀಯ ನಾಯರಿಂದ ಇನ್ ಲ್ಫೆನ್ಸ್ ಮಾಡುಸಿವುದಕ್ಕಾಗಿ, ಫೋನ್ ಮಾಡಿಸಿ ಅಧಿಕಾರಿಗಳಿಗೆ ಒತ್ತಡ ಹೇರಿಸಲು ಪ್ರಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.   ಸ್ಥಳದಲ್ಲಿ ಕೆಲ ಪತ್ರಕರ್ತರು ಇದ್ದ ಕಾರಣ ಕೃಷಿ ಅಧಿಕಾರಿಗಳು ಶ್ಯಾಂಪಲ್ ಸಂಗ್ರಹಿಸಿಕೊಂಡು, ದೂರು ದಾಖಲಿಸಿಕೊಳ್ಳುವುದಾಗಿ ಸಬೂಬು ಹೇಳಿ, ಅಲ್ಲಿಂದ ತೆರಳಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಅಕ್ರಮವಾಗಿ, ಕಳೆಪೆ ಭತ್ತದ ಬೀಜ ಮಾರುತ್ತಿದ್ದ ಮಲ್ಲನಗೌಡ ಮಲ್ಕಾಜಪ್ಪ ಈತನು ಸಾಕಷ್ಟು ರೈತರಿಗೆ ಮೋಸ ಮಾಡಿದ್ದು, ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *