ಪುತ್ರನಿಗೆ ಸಿದ್ದರಾಮಯ್ಯ ಹೆಸರು ನಾಮಕರಣ‌ ಮಾಡಿದ ಅಭಿಮಾನಿ…..

Spread the love

ಪುತ್ರನಿಗೆ ಸಿದ್ದರಾಮಯ್ಯ ಹೆಸರು ನಾಮಕರಣ‌ ಮಾಡಿದ ಅಭಿಮಾನಿ….

ಕೊಪ್ಪಳ: ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ಅವರ ಅಭಿಮಾನಿ ಓರ್ವ ಸಿದ್ದರಾಮಯ್ಯ  ಅವರ ಮೇಲಿನ ಅಭಿಮಾನಕ್ಕೆ  ತಮ್ಮ ಮಗುವಿಗೆ  ಸಿದ್ದರಾಮಯ್ಯ  ಎಂದು  ನಾಮಕರಣ  ಮಾಡಿದ್ದಾರೆ. ಜಿಲ್ಲೆಯ ನೂತನ ಕುಕನೂರು ತಾಲೂಕಿನ ದ್ಯಾಂಪುರದ ನಿವಾಸಿ ರೈತ ಮಂಜುನಾಥ ಅವರು ತಮ್ಮ ಮಗುವಿಗೆ ಸಿದ್ದರಾಮಯ್ಯ ಎಂದು ಶಾಸ್ತ್ರೋಕ್ತ ವಾಗಿ ಬುಧವಾರ ಬಂಧು-ಬಾಂಧವರ ಸಮ್ಮುಖದಲ್ಲಿ ನಾಮಕರಣ ಮಾಡಿ ದ್ದಾರೆ. ಮಂಜುನಾಥ ಹಾಗೂ ನೇತ್ರಾವತಿ ದಂಪತಿಗೆ ಜನಿಸಿರುವ ಮೊದಲ ಗಂಡು ಮಗುವಿಗೆ ಸಿದ್ದರಾಮಯ್ಯ ಎಂದು ಹೆಸರು ಇಟ್ಟಿದ್ದಾರೆ. ಈ ಮೂಲಕ ಅವರು ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ ಸೇರಿದಂತೆ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿ ಮಾಡಿದ್ದರು. ಇಂತಹ ಅನೇಕ ಯೋಜನೆಗಳನ್ನು ಮೆಚ್ಚಿಕೊಂಡ ಮಂಜುನಾಥ ಅಂದಿನಿಂದ ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ. ಹೀಗಾಗಿ ತಮ್ಮ ನಾಯಕನ ಬಗೆಗಿನ ಅಭಿಮಾನವನ್ನು ಯಾವ ರೀತಿ ವ್ಯಕ್ತಪಡಿಸಬೇಕು ಎಂದು ಕೊಂಡಾಗ ತಮಗೆ ಜನಿಸಿದ ಮೊದಲ ಗಂಡು ಮಗುವಿಗೆ ಸಿದ್ದರಾಮಯ್ಯ ಎಂದು ಹೆಸರಿಡಲು ನಿರ್ಧರಿಸಿದ್ದರಂತೆ. ಅದರಂತೆ ಬುಧವಾರ ತಮ್ಮ ಮನೆಯಲ್ಲಿ ನಾಮಕರಣ ಕಾರ್ಯಕ್ರಮ ಬಂಧು-ಬಾಂಧವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಏರ್ಪಡಿಸಿ ಮಗುವನ್ನು ತೊಟ್ಟಿಲಿಗೆ ಹಾಕಿದ್ದಾರೆ. ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಜನಪರ ಕಾಳಜಿ, ಯೋಜನೆಗಳನ್ನು ಮೆಚ್ಚಿ ಅವರ ಕಟ್ಟಾ ಅಭಿಮಾನಿಯಾಗಿರುವೆ. ಹೀಗಾಗಿ ಅವರ ಹೆಸರನ್ನು ನನ್ನ ಮಗನಿಗೆ ನಾಮಕರಣ ಮಾಡಿದ್ದೇನೆ ಎಂದು ಮಗುವಿನ ತಂದೆ ಮಂಜುನಾಥ ತಿಳಿಸಿದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *