ಕೋವಿಡ್ 19 ಕೊರೋನ ಎರಡನೇ ಅಲೆಗೆ ಹೆಚ್ಚು ಜನರು ಸಾಯಲು ಕಾರಣ ಬಿಜೆಪಿ ಸರ್ಕಾರದ ನಿರ್ಲಕ್ಷ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Spread the love

ಕೋವಿಡ್ 19 ಕೊರೋನ ಎರಡನೇ ಅಲೆಗೆ ಹೆಚ್ಚು ಜನರು ಸಾಯಲು ಕಾರಣ ಬಿಜೆಪಿ ಸರ್ಕಾರದ ನಿರ್ಲಕ್ಷ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದ ರಾಘವೇಂದ್ರ ಹಿಟ್ನಾಳ ವತಿಯಿಂದ 15000 ಆಹಾರದ ಕಿಟ್ ಗಳ ವಿತರಣೆ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕರಾದ ಜಮೀರ್ ಅಹಮದ್ ಆಗಮಿಸಿ ಚಾಲನೆ ನೀಡಿ ಮಾತನಾಡಿದರು  ನಂತರ ಕುಕನೂರು ಮತ್ತು ಯಲಬುರ್ಗಾ ಪಟ್ಟಣದ ಬಯಲು ರಂಗಮಂದಿರದ ಮುಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಿಂದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಯವರ ಕುಟುಂಬದಿಂದ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ 11000 ಬಡ ಜನರಿಗೆ ಕೊರೋನ ಸಂಕಷ್ಟಕ್ಕೆ ಸಿಲುಕಿರುವ ಎರಡು ತಾಲ್ಲೂಕಿನ ಗ್ರಾಮೀಣ ಪ್ರದೇಶಕ್ಕೆ ಕಿಟ್ ಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.  ನಮ್ಮ ಕರ್ನಾಟಕ ರಾಜ್ಯದಲ್ಲಿ ಕೊರೋನ ಬಂದು ಒಂದು ವರ್ಷ ಮೂರು ತಿಂಗಳು ಗತಿಸಿವೆ ಒಂದನೇ ಅಲೆ ಜನರ ಸಾವು ಕಾಣಲಿಲ್ಲ ನಂತರ ಎರಡನೇ ಅಲೆ ಯಲ್ಲಿ ಹೆಚ್ಚು ಜನರ ಸಾವನ್ನು ನೋಡಿದ್ದೇವೆ ಇದಕ್ಕೆಲ್ಲಾ ಕಾರಣ ಬಿಜೆಪಿ ಸರ್ಕಾರ ಎರಡನೇ ಅಲೆಯ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ತಡೆ ಹಿಡಿದುಕೊಂಡಿದ್ದರೆ ಇಷ್ಟೊಂದು ಜನ ಸಾಯುತ್ತಿರಲಿಲ್ಲ. ಮುಂದಿನ ಅಕ್ಟೋಬರನಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಇದೆ ಇದು ಬಹಳ ವೇಗವಾಗಿ ಹರಡುವ ರೋಗ ದಯವಿಟ್ಟು ಎಲ್ಲರೂ ಜಾಗ್ರತರಾಗಿರಿ  ಯಲಬುರ್ಗಾ ಬಯಲು ರಂಗಮಂದಿರದ ಮುಂದೆ ಲಾಕ್ ಡೌನ್ ಮುಗಿದ ಬಳಿಕ 11 ಸಾವಿರ ಆಹಾರದ ಕಿಟ್ ಗಳನ್ನು ಹಂಚಿಕೆ ಮಾಡುವಲ್ಲಿ ಮೊದಲ ಬಹಿರಂಗ ಸಮಾರಂಭ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಮ್ಮಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು ವೇದಿಕೆಯ ಮೇಲೆ ಯಾರು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಸಿದ್ದರಾಮಯ್ಯನವರು ಎದ್ದು ಭಾಷಣ ಮಾಡುವಾಗ ಎಲ್ಲರೊ ದೂರ ನಿಲ್ಲಿ ಅಂತ ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶಿವರಾಜ್ ತಂಗಡಗಿ ಕುಷ್ಟಗಿ ಶಾಸಕರಾದ ಅಮರೇಗೌಡ ಬಯ್ಯಾಪುರ ಸುರೇಶ್ ಬೈರತಿ ರಾಘವೇಂದ್ರ ಹಿಟ್ನಾಳ ಯಂಕಣ್ಣ ಯಾರಸಿ ಕೆರ ಬಸಪ್ಪ ನಿಡುಗುಂದಿ ರಾಮಣ್ಣ ಸಾಲಬಾವಿ ಬಿ ಎಮ್ ಶಿರೂರು ಆನಂದ ಉಳಗಡ್ಡಿ ಇನ್ನುಳಿದ ಯಲಬುರ್ಗಾ ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ಪಕ್ಷದ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು. ಕೋಟ )ಆದರೆ ಲಾಕ್ಡೌನ್ ಮಾಡಿದರೆ ಯಾವುದೇ ಉದ್ಯೋಗದ ಕೆಲಸ ಸಿಗುವುದಿಲ್ಲ ಎಂದೇ ಪ್ರತಿ ಬಿಪಿಎಲ್ ಕುಟುಂಬದವರಿಗೆ 10. ಸಾವಿರ ಮತ್ತು 10 ಕೆಜಿ ಅಕ್ಕಿ ಕೊಡಲು ಕೇಳಿದೆ ಅಷ್ಟು ದುಡ್ಡು ಅಕ್ಕಿ ಕೊಡುವುದಿಲ್ಲ ಎಂದು ಹೇಳಿ ಎರಡು ಮೂರು ಸಾವಿರ ಕೊಡುತ್ತೇವೆ ಎಂದು ಹೇಳಿದರು ಅದನ್ನಾದರೂ ಸರಿಯಾಗಿ ಕೊಟ್ಟಿಲ್ಲ ಎಂದು ಮಾತನಾಡಿದರು.

  ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *