ವಿದ್ಯುತ್ ಬಿಲ್ ದರ ಏರಿಕೆ ವಾಪಸ್ಸು ಪಡೆಯಲಿ, ಶುಲ್ಕ ವಸೂಲಿ ನೆಪದಲ್ಲಿ ನಡೆಯುತ್ತಿರುವ ಕಿರುಕುಳ ನಿಲ್ಲಿಸಬೇಕು – ಶಿವಕುಮಾರ ಮ್ಯಾಗಳಮನಿ.

Spread the love

ವಿದ್ಯುತ್ ಬಿಲ್ ದರ ಏರಿಕೆ ವಾಪಸ್ಸು ಪಡೆಯಲಿ, ಶುಲ್ಕ ವಸೂಲಿ ನೆಪದಲ್ಲಿ ನಡೆಯುತ್ತಿರುವ ಕಿರುಕುಳ ನಿಲ್ಲಿಸಬೇಕುಶಿವಕುಮಾರ ಮ್ಯಾಗಳಮನಿ.

ಕವಿತಾಳ :  ವಿದ್ಯುತ್ ದರ ಏರಿಕೆ ಹಿಂಪಡೆಯಲು, ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲು, ವಿದ್ಯುತ್ ಬಿಲ್ ಕಟ್ಟವಂತೆ ಗ್ರಾಹಕರಿಗೆ ಕಿರುಕುಳ ಕೊಡುತ್ತಿರುವುದು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌  ( DYFI ) ಕವಿತಾಳ ನಗರ ಘಟಕದ ವತಿಯಿಂದ ಪಟ್ಟಣದ ‌ರಾಯಚೂರು ರಸ್ತೆಯಲ್ಲಿ ಇರುವ ಜೆಸ್ಕಾ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದರು. ಹೋರಾಟವನ್ನು ಉದ್ದೇಶಿಸಿ SFI ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಕರ್ನಾಟಕ ಸರಕಾರ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು, ಲಾಕ್ ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಆಗ್ರಹಿಸಿ  ಪ್ರತಿಭಟನೆ ನಡೆಸಲು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ರಾಜ್ಯಾದ್ಯಂತ  ಪ್ರತಿಭಟನೆ ನಡೆಸುತ್ತದೆ. ಈ ರಾಜ್ಯ ಸರಕಾರ ವಿದ್ಯುತ್ ದರವನ್ನು ಸತತವಾಗಿ ಏರಿಸುತ್ತಿದೆ. ವಿದ್ಯುತ್ ಬಳಕೆಯ ಯಾವುದೇ  ಐಷಾರಾಮಿ ವಸ್ತುಗಳನ್ನು ಹೊಂದಿರದ ಸಾಮಾನ್ಯ ಕುಟುಂಬಗಳು ಇಂದು ತಿಂಗಳಿಗೆ ಸಾವಿರ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಭರಿಸಬೇಕಾದ ಸ್ಥಿತಿ ಉಂಟಾಗಿದೆ. ಅದರಲ್ಲೂ ಕೊರೋನ ಹಾವಳಿಯಿಂದ ಜನತೆ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿರುವ ಒಂದು ವರ್ಷದ ಅವಧಿಯಲ್ಲಿ ಒಂದಕ್ಕಿಂತಲೂ ಹೆಚ್ಚು ಬಾರಿ ವಿದ್ಯುತ್ ದರ ಏರಿಸಿರುವುದು ಸರಕಾರದ ಜನ ವಿರೋಧಿ ಧೋರಣೆಗೆ ಸ್ಪಷ್ಟ ಉದಾಹರಣೆ. ಕೊರೋನಾ ಎರಡನೇ ಅಲೆಯ ನಿರ್ವಹಣೆಯ ಭಾಗವಾಗಿ ರಾಜ್ಯ ಸರಕಾರ ಯಾವುದೇ ಪ್ರಾಯೋಗಿಕ‌ ಸಿದ್ದತೆ ಇಲ್ಲದೆ ಸತತ ಎರಡು ತಿಂಗಳಿಗೂ ಹೆಚ್ಚು ಕಾಲ ಲಾಕ್ ಡೌನ್ ವಿಧಿಸಿ ಜನರನ್ನು   ಮ‌ನೆಯೊಳಗಡೆ ಇರುವಂತೆ ಬಲವಂತವಾಗಿ ನಿರ್ಬಂಧಿಸಿದೆ. ಇದರಿಂದಾಗಿ ಜನತೆಯ ದುಡಿಮೆಯ ಅವಕಾಶಗಳು ಪೂರ್ಣವಾಗಿ ಕಸಿಯಲ್ಪಟ್ಟಿದ್ದು, ಜೀವನ ನಿರ್ವಹಣೆಗಾಗಿ ಪರದಾಡುವಂತಾಗಿದೆ. ಲಾಕ್ ಡೌನ್ ಸರಕಾರವೆ ವಿಧಿಸಿದ ನಿರ್ಬಂಧವಾಗಿರುವ ಕಾರಣ ಜನತೆಯ ಜೀವನ ನಿರ್ವಹಣೆಯ ಕನಿಷ್ಟ ಬೇಡಿಕೆಗಳ ಪೂರೈಕೆ ಸರಕಾರದ ಕರ್ತವ್ಯ ಆದರೆ ಯಾವುದೆ ಪ್ರಾಯೋಗಿಕ ಪರಿಹಾರ ಪ್ಯಾಕೇಜ್ ಒದಗಿಸದ ಸರಕಾರ ಜನ ಸಾಮಾನ್ಯರ ಬದುಕ‌ನ್ನು ಅತಂತ್ರಗೊಳಿಸಿದೆ. ಇದೇ ಸಂದರ್ಭ ಸರಕಾರದ ಅಧೀನದಲ್ಲಿರುವ ವಿದ್ಯುತ್, ಕುಡಿಯುವ ನೀರುಗಳ ಬಿಲ್ ಗಳ‌ನ್ನು ಸರಕಾರ ಸ್ವಯಂ ಪ್ರೇರಣೆಯಿಂದ ಮನ್ನಾ ಮಾಡಬೇಕಿತ್ತು. ಆದರೆ ಲಾಕ್ ಡೌನ್ ಅವಧಿಯಲ್ಲಿಯೂ ದುಬಾರಿ ವಿದ್ಯುತ್ ಬಿಲ್ ಪ್ರತಿ ಮನೆಗೂ ನೀಡಲಾಗುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ ಬಿಲ್ ಪಾವತಿಗೆ ಬಲವಂತ ಇಲ್ಲ ಎಂದು ಹೇಳುತ್ತಲೇ ಲಾಕ್ ಡೌನ್ ತೆರವಿನ ನಂತರ ಬಾಕಿ ಬಿಲ್ ಗಳನ್ನು ಒಟ್ಟಿಗೆ ಪಾವತಿಸುವ ಅನಿವಾರ್ಯ ಸ್ಥಿತಿಯನ್ನು ಸರಕಾರ ನಿರ್ಮಿಸುತ್ತಿದೆ. ಇದು ಜನಸಾಮಾನ್ಯರಿಗೆ ಮುಂದಿನ ದಿನಗಳಲ್ಲಿ ಭರಿಸಲಾಗದ ಬಹುದೊಡ್ಡ ಹೊರೆಯಾಗಲಿದೆ. ಆದುದರಿಂದ ಲಾಕ್ ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಗಳನ್ನು ಸರಕಾರ ಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಹೇಳಿದರು‌‌. ನಂತರ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಮಾತನಾಡಿ ಏರಿಸಲಾಗಿರುವ ವಿದ್ಯುತ್ ದರವನ್ನು ಹಿಂದಕ್ಕೆ ಪಡೆಯಬೇಕು, ಲಾಕ್ ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಗಳನ್ನು ರಾಜ್ಯ ಸರಕಾರ ಮನ್ನಾ ಮಾಡಬೇಕು, ಆ ಮೂಲಕ ಜನರ ಮೇಲಿನ ಭರಿಸಲಾಗದ ಹೊರೆಯನ್ನು ಒಂದಿಷ್ಟು ತಗ್ಗಿಸಬೇಕು ಹಾಗೂ ಒತ್ತಾಯ ಪೂರ್ವಕವಾಗಿ ಶುಲ್ಕ ಕಟ್ಟಿಸಿಕೊಳ್ಳುವು, ಶುಲ್ಕ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡುವುದನ್ನು ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿದರು.  ಮನವಿ ಪತ್ರವನ್ನು ಎಇಇ ಬನ್ನಪ್ಪ ಇವರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ  DYFI ನಗರ ಘಟಕದ ಅಧ್ಯಕ್ಷ. ಮೊಹಮ್ಮದ್ ರಫಿ ಘಟಕದ ಅಧ್ಯಕ್ಷ ಮೌನೇಶ ಬುಳ್ಳಾಪುರ, ಕಾರ್ಯದರ್ಶಿ ವೆಂಕಟೇಶ ಮುಖಂಡರಾರ ನಾಗಮೋಹನ್ ಸಿಂಗ್, ಮಲ್ಲಿಕಾರ್ಜುನ,ಬಿ. ಮಹಾದೇವ, ಕುಪ್ಪಣ್ಣ, ಶ್ರೀಧರ್, ಅಂಬ್ರೇಶ್, ಕವಿತಾಳ ವಿಭಾಗದ ಜೆಇ ಶಿವಕುಮಾರ, ಬಾಗಲವಾಡ ಜೆಇ ಪ್ರಭಾಕರ್ ಪಾಟೀಲ್, ಮಂಜುನಾಥ, ವೆಂಕಟೇಶ ಸೇರಿದಂತೆ ಇತರ ಸಿಬ್ಬಂದಿಗಳಿದ್ದರು..

ವರದಿ – ಆನಂದ ಸಿಂಗ್ ಕವಿತಾಳ

Leave a Reply

Your email address will not be published. Required fields are marked *