ಅಮ್ಮನ ಮಡಿಲು ಸೇವಾ ಸಂಸ್ಥೆಯ ಉದ್ದೇಶ…

Spread the love

ಅಮ್ಮನ ಮಡಿಲು ಸೇವಾ ಸಂಸ್ಥೆಯ ಉದ್ದೇಶ

ಇವತ್ತು ಮರಣ ಮೃದಂಗಕ್ಕೆ ಕಾರಣವಾಗಿರುವ ಕೊರೋನಾ ಎಂಬ ರೋಗ ದಟ್ಟವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ವ್ಯಾಪಕವಾಗಿ ಕೇಳಿ ಬಂದಿದ್ದು ಪ್ರಾಣವಾಯು ಅಂದರೆ ಆಮ್ಲಜನಕದ ಕೊರತೆ ಇದಕ್ಕೆ ಪ್ರಮುಖ ಕಾರಣ ಸಸ್ಯ ಸಂಪತ್ತಿನ ಹಸಿರು  ಉಳಿಸಿಕೊಳ್ಳಲು ವಿಫಲವಾದದ್ದು ಈ ನಿಟ್ಟಿನಲ್ಲಿ ಅಮ್ಮನ ಮಡಿಲು ಸೇವಾ ಸಂಸ್ಥೆ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಹಚ್ಚುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ ಹಾಗೂ ಈ ಸಂದರ್ಭದಲ್ಲಿ ಒಂದು ಮಾತು ನೆನಪಿಗೆ ಬರುತ್ತೆ ಧರ್ಮೊ ರಕ್ಷತಿ ರಕ್ಷಿತ: ಎನ್ನುವಂತೆ ವೃಕ್ಷೋ ರಕ್ಷತಿ ರಕ್ಷಿತಃ ಎಂಬ ಹೊಸ ಪಾಠವನ್ನು ನಾವೆಲ್ಲ ಅಭ್ಯಾಸ ಮಾಡಬೇಕಾಗಿದೆ ಅಮ್ಮನ ಮಡಿಲು ಸೇವಾ ಸಂಸ್ಥೆ ವತಿಯಿಂದ ಇವತ್ತು ಅಥಣಿ  ಗ್ರಾಮೀಣ ಭಾಗದ ಸಜ್ಜಿ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ 101 ಗಿಡಗಳನ್ನು ನೆಡಲಾಯಿತು ಈ ಸಂದರ್ಭದಲ್ಲಿ RSS ತಾಲುಕಾ ಕಾರ್ಯವಾಹರಾದ ಶ್ರೀಯುತ ಸಂಜಯ ಜೀ ನಾಯಕ ಹಾಗೂ ಅಮ್ಮನ ಮಡಿಲು ಸೇವಾ ಸಂಸ್ಥೆಯ ಕಾರ್ಯಕರ್ತರು ಹಾಜರಿದ್ದರು. ಈ ಸಂದರ್ಭದಲ್ಲಿ RSS ನ ತಾಲೂಕ  ಕಾರ್ಯವಾಹರಾದ ಸಂಜಯ್ ಜೀ  ನಾಯಿಕ,  ಸಚಿನ್ ಪವಾರ್,  ಸುನೀಲ್ ತಾಂವಶಿ, ಸಾಗರ್ ಬಡಿಗೇರ್, ವಿಶ್ವನಾಥ ಹರೋಲಿ, ಪರಶುರಾಮ್ ಭಂಗಿ, ವಿದ್ಯಾಧರ್ ಮಡಿವಾಳ, ಸದಾಶಿವ ಪೂಜಾರಿ ಹಾಗೂ ಇನ್ನುಳಿದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *