ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಗ್ರಾ.ಪಂ ಸದಸ್ಯರಾದ ನಾಗರಾಜ ತಳವಾರ.

Spread the love

ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಗ್ರಾ.ಪಂ ಸದಸ್ಯರಾದ ನಾಗರಾಜ ತಳವಾರ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಗ್ರಾಮದ ನಾಗರಾಜ ತಳವಾರ ಇವರು ಹಲವು ಸಮಾಜಮೂಖಿ ಕೆಲಸ/ಕಾರ್ಯಗಳಲ್ಲಿ ಬಾಗಿಯಾಗಿ, ಜನಪ್ರತಿ ನಿದಿಗಳು ನಾಚುವಂತೆ ಮಾಡಿದ ನಾಗರಾಜ ತಳವಾರು. ಇವರು ಅತ್ಯುತ್ತಮ ಸಮಾಜ ಮುಖಿ ಚಿಂತಕ, ಸರಳ ಸ್ನೇಹ ಜೀವಿ, ನಿಸ್ವಾರ್ಥ ಯುವಜನತೆಯ ಆದರ್ಶ ವ್ಯಕ್ತಿ, ಬಡವರ – ನೂಂದವರ ಕಣ್ಣಿರ ಹನಿ ಒರೆಸುವ, ಹಗಲಿರುಳು ಶ್ರಮ ಹಾಕುತ್ತಿರುವ ಶ್ರಮಜೀವಿ, ಹಲವಾರು ಅವರ ಕಷ್ಟ ಸುಖಗಳ ನಡುವೆ, ಈ ಸಮಾಜಕ್ಕಾಗಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂಬ ಛಲದೊಂದಿಗೆ ಮುನ್ನುಗ್ಗುತ್ತಿರುವ ನಾಗರಾಜ ತಳವಾರ ರವರು  ನಮ್ಮೆಲ್ಲರ ಅಚ್ಚುಮೆಚ್ಚಿನ ಪ್ರಗತಿಪರ ಚಿಂತಕರಾದ ಶ್ರೀ ನಾಗರಾಜ ತಳವಾರ  ಎಂದು ಹೇಳಲು ಗೌರವ, ಹೆಮ್ಮೆ ಎನಿಸುತ್ತದೆ. ಇವರ ತಂ// ಯಂಕಪ್ಪ ತಾಯಿ ಲಕ್ಷಮ್ಮ ಇವರ ಎರಡನೇಯ ಮಗನಾಗಿದ್ದು. ಇವರ ವಿದ್ಯಾಬ್ಯಾಸ ಕೇವಲ 10ನೇ ತರಗತಿ ಓದಿ ಮುಗಿಸಿದ್ದಾರೆ. ಇಲ್ಲಿ ವಿಶೇಷವೆಂದರೆ ಓದಿನಕ್ಕಿಂತ ಸಾಮಾಜಿಕ ಕಳಕಳಿಯ ಬಗ್ಗೆ ಇರುವ ಆಸಕ್ತಿ ತುಂಬಾ ದೋಡ್ಡದು. ಇವರು 2020 ಮತ್ತು 2021 ನೇ ಸಾಲಿನಲ್ಲಿ ನೂತನವಾಗಿ ನವಲಿ ಗ್ರಾಮದ ಗ್ರಾಮ ಪಂಚಾಯತಿಯ ಸದಸ್ಯನಾಗಿ ಆಯ್ಕೆಯಾಗಿ ಹಲವಾರು ಸಮಾಜಮೂಖಿ ಕಾರ್ಯಗಳಲ್ಲಿ ಬಾಗಿಯಾಗಿ, ಸದ್ಯ ನವಲಿ ಗ್ರಾಮದ ಬಾಲ ಈರಣ್ಣನ ದೇವಸ್ಥಾನದಲ್ಲಿ ಕಾಂಕ್ರೀಟ್ ಹಾಕಲಾಗಿದೆ ಜೊತೆಗೆ ದುರ್ಗಾದೇವಿಯ ದೇವಸ್ಥಾನದಲ್ಲಿ ಕಾಂಕ್ರೀಟ್ ಜೊತೆಗೆ ಎರಡು ದರ್ಗಾ (ಮಸೀದಿ)ಯ ಅಂಗಳದಲ್ಲಿ ಕಾಂಕ್ರೀಂಟ್ ಹಾಕಿಸಿ ಮತ್ತು ಮಾರುತಿ ಕಟ್ಟಿ ಕಟ್ಟಿಸಿ ಅಭಿವೃದ್ದಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಒಂದು ಲಕ್ಷ ಮೇಲ್ಪಟ್ಟ ಸ್ವಂತಃ ಹಣವನ್ನು ಖರ್ಚು ಮಾಡಿರುವುದು ವಿಶೇಷವಾಗಿದೆ. ಇವರಲ್ಲಿರುವ ಈ ಕನ್ನಡ ನಾಡು, ನುಡಿ ಭಾಷೆ, ನೆಲ, ಜಲ ಹಾಗೂ ಗಡಿ ಭಾಗದ ಜ್ವಲಂತ ಸಮಸ್ಯೆಗಳು ಬಂದಾಗ, ಮುಂದಾಗಿ ಹೋರಾಟ ಮಾಡುವ ಮನೋಭಾವ – ಮನೋಧೈರ್ಯ ಇವರದು. ಹಾಗಾಗಿ ಇಂದಿನ ಜನಾಂಗಕ್ಕೆ ಇವರ ಆದರ್ಶ ನಿಲುವುಗಳು ಮಾದರಿ ಮತ್ತು ಪ್ರೇರಣೆಯಾಗಿವೆ ಎಂದರೆ ತಪ್ಪಾಗಲಾರದು. ಸಾಮಾಜಿಕವಾಗಿ, ಶೈಕ್ಷಣಿಕ, ಧಾರ್ಮಿಕ ಮತ್ತು ಪರಿಸರದ ಸಂರಕ್ಷಣೆ, ದೇಹಾಂಗದಾನ ಜಾಗೃತಿ ಮೂಡಿಸುವ ಕೆಲಸ ಇವರದ್ದು, ಜೊತೆಗೆ ಕೃಷಿ ಕಾಯದ ಬದುಕಿಗೆ ಹೆಚ್ಚು ಒಲವು ತೋರಿಸುತ್ತಾರೆ. ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿಯುತ್ತಿದ್ದಾರೆಂದು ಹೇಳಲು ಖುಷಿ ಎನಿಸುತ್ತದೆ. ಈ ತನ್ಮೂಲಕ ಅನೇಕ ರೈತರಿಗೆ ಮಾದರಿಯಾಗಿದ್ದಾರೆ ರೈತರನ್ನು ಒಗ್ಗೂಡಿಸಿ ಅವರ ಸಮಸ್ಯೆಗಳಿಗೆ ಸ್ವಂದನೆ ಮಾಡುವ ಕಾರ್ಯದಲ್ಲಿ ಮಗ್ನನರಾಗಿದ್ದಾರೆ  ಒಟ್ಟಿನಲ್ಲಿ ಪ್ರತಿಯೊಂದು ಊರು/ಕೇರಿಗಳಲ್ಲಿ ಇಂತಹ ಸಮಾಜಮೂಖಿ ಸದಸ್ಯರು ಇದ್ದರೆ ಸಾಕು, ಸಾಮಾಜದ ಻ಭಿವೃದ್ದಿ ಹಾಗೂ ಯುವಕರ ಏಳಿಗೆಗೆ ಪೂರಕವಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಪ್ರಜೇಯು ಮುಂದಿನ ಚುನವಾಣೆಯಲ್ಲಿ ಧಕ್ಷ ಹಾಗೂ ಪ್ರಮಾಣಿಕ ಜನಪ್ರತಿ ನಿದಿಯನ್ನ ಆಯ್ಕೆ ಮಾಡಬೇಕು, ಊರಿನ ಅಭಿವೃದ್ದಿ, ಹಾಗೂ ಯುವ ಪೀಳಿಗೆಯ ಏಳಿಗೆಗೆ ಆದರ್ಶ ವ್ಯಕ್ತಿಯಾಗಬೇಕು. ಹಾಗಾಗಿ ಪ್ರತಿಯೊಬ್ಬ ಪ್ರಕೆಯು ಉತ್ತಮವಾದ ವ್ಯಕ್ತಿಯನ್ನ ಆಯ್ಕೆ ಮಾಡಿ ಎಂಬುವುದೆ ನಮ್ಮ ಪತ್ರಿಕೆಯ ಾಶಯ, ಜೊತೆಗೆ ಹೀಗೆ ಸಮಾಜಮೂಖಿ ಕಾರ್ಯಗಳಲ್ಲಿ ಇವರು ಬಾಗಿಯಾಗಿ ಸಮಾಜದ ಏಳಿಗೆಗೆ ಶ್ರಮಿಸಲೆಂದು ಆರೈಸುವೆವು.

ವರದಿ – ಸೋಮನಾಥ ಕೆ. ಸಂಗನಾಳ

4 thoughts on “ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಗ್ರಾ.ಪಂ ಸದಸ್ಯರಾದ ನಾಗರಾಜ ತಳವಾರ.

  1. see this person background than news publish. two years back he is common man now rich person . what is source of income u check it first.

Leave a Reply

Your email address will not be published. Required fields are marked *