ಅವನಲ್ಲ  ಅವಳು, ಅವಳಿಗೆ  ಬೇಕಾಗಿದೆ ಜಗತ್ತಿನಲ್ಲಿ ಸಮಾನತೆಯಿಂದ ಪ್ರೀತಿಸುವ ಕರುಳು..

Spread the love

ಅವನಲ್ಲ  ಅವಳು, ಅವಳಿಗೆ  ಬೇಕಾಗಿದೆ ಜಗತ್ತಿನಲ್ಲಿ ಸಮಾನತೆಯಿಂದ ಪ್ರೀತಿಸುವ ಕರುಳು..

ಅವನಲ್ಲದೆ ಮತ್ತೊಬ್ಬಳು ಸೇರಿಕೊಂಡಳು ಒಂದೇ‌ ಮೂಳೆ ಖಂಡದ  ದೇಹವನ್ನು ! ಹರ ದೇಹದ ರೂಪಿ, ಮಂಗಳದ ಸ್ವರೂಪಿ, ನರಸೃಷ್ಟಿಯ ದೀಪ್ತಿ , ಅವನಲ್ಲದೆ ಮತ್ತೊಬ್ಬಳು, ಕಾಯವನ್ನು ಸೇರಿದೊಡನೆ, ತೃತೀಯ ಸೃಷ್ಟಿಯ ದೃಷ್ಟಿ ಭಕ್ತಿ., ಅವನಲ್ಲ ಅವಳು, ಅವಳೊಳಗೆ ಅವನು ಸೇರಿದೊಡನೆ ಜಗತ್ತಿಗೆ ತೃತೀಯ ಜನಾಂಗದ ದೃಷ್ಟಿ.ಈ ದೃಷ್ಟಿಯಿಂದಲೇ ಒಂದು ಕಡೆ ಹೆಣ್ಣು ಕೂಡ ಸೇರಿದೆ , ಇನ್ನೊಂದು ಕಡೆ ಗಂಡು ಕೂಡ ಅಸೂಯೆ ಪಡುವ ಮೂರನೇ ದೇಹವೇ ಈ ಮಂಗಳಮುಖಿ.ಇಬ್ಬರನ್ನು ಸೇರಿ ಒಂದೇ ಜೀವ ಆಗುವ ದೇಹಕ್ಕೆ ಎಷ್ಟೆಲ್ಲ ಹೋರಾಟದ ಜೀವನ ,”ನಾನು ಅವನಲ್ಲ ಅವಳು “ಎನ್ನುವ ಚಲನಚಿತ್ರ ಕೂಡ ಬಂದಿದೆ ದಿವಂಗತ ವಿಜಯ್ ಸಂಚಾರಿಯವರು ಮಾಡಿದ ಈ ನಟನೆಯ ಚಿತ್ರ ಕಣ್ಣೀರು ಬರುವಂತೆ ಮಾಡುತ್ತದೆ ಆದರೆ ಸಿನಿಮಾದ ಕಥೆಯನ್ನು ನಾನು ಇಲ್ಲಿ ಹೇಳುವುದಿಲ್ಲ ನೇರವಾಗಿ ಸಿನಿಮಾವನ್ನು ನೀವೇ ನೋಡಿ ,ನಾನು ಸ್ವತಃ ಮಂಗಳಮುಖಿಯರನ್ನು ನೋಡಿದ ಮೇಲೆ ಅವರ ಕಷ್ಟಗಳನ್ನು ತಿಳಿದ‌ ಮೇಲೆ ನನ್ನ ಅನುಭವವನ್ನೇ ತಮ್ಮ ಮುಂದೆ ಹೇಳಲ್ಪಡುವೆ. ಆಧುನಿಕ ಭಾರತದಲ್ಲಿ ಪಿತೃ ಸಮಾಜವು ಇಲ್ಲ ಮಾತೃ ಸಮಾಜವು ಕೂಡ ಇಲ್ಲ ಇಲ್ಲಿ ದುಡಿದವರ ಬದುಕು . ಎಷ್ಟೋ ಮಂಗಳಮುಖಿಯರು ಕೂಡ‌ ಅತ್ಯುತ್ತಮ ಸಾಧನೆಯನ್ನು ಕೆಲವು ಕ್ಷೇತ್ರಗಳಲ್ಲಿ ಮಾಡಿರುವರು ಆದರೆ ಹೆಣ್ಣು ಗಂಡಿಗೆ ಮಾತ್ರ ಗೌರವ ನೀಡುವ ಜಾಗದಲ್ಲಿ ತೃತೀಯ ಜೀವವನ್ನು ಅಗೌರವದಿಂದ ನೋಡುತ್ತಿದೆ , ಸರ್ಕಾರ ಇವರಿಗೆ ಯಾವ ಸೌಲಭ್ಯವೂ ಕೊಡುತ್ತದೆಯೇ ಇಲ್ಲವೋ ಗೊತ್ತಿಲ್ಲ ಆದರೆ ಎಲ್ಲರಂತೆ ಇವರಿಗೂ ಕೂಡ ಸಮಾನವಾಗಿ ಗೌರವ ಹಕ್ಕುಗಳನ್ನು ನೀಡಬೇಕು ‌,ಬದುಕಿನ ಪಯಣದಲ್ಲಿ ಕೊನೆಗೊಳ್ಳುವ ತನಕವೂ ಇವರನ್ನು ಗೌರವದಿಂದ ಕಾಣಬೇಕು , ನಾವೆಲ್ಲರೂ ಇವರನ್ನು ಬೈದು ಬೈದು ಗೌರವ ನೀಡಿದೆ ತಮ್ಮದೇ ಆದ ರೀತಿಯಲ್ಲಿ ಮಂಗಳಮುಖಿಯರು ಒಂದು ಗುಂಪಾಗಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ತಿಸುವರು ಆದರೂ ಅಲ್ಲಿ ಕೂಡ ನೆಮ್ಮದಿ ಇಲ್ಲದ ಜೀವನ . ಎಷ್ಟೋ ಮಂಗಳಮುಖಿಯರು ಕಾಮುಕರ ಕಾಮಕ್ಕೆ ಬಲಿಯಾಗಿದ್ದಾರೆ ಇದು ನಿಜಾವಾಗಿಯೂ ಈಗಲೂ ನಡೆಯುತ್ತಿರುವ ವಿಷಯ.ಒಂದು ಮಟ್ಟದಲ್ಲಿ ವೇಶ್ಯಾವಾಟಿಕೆಗೆ ಕೆಲವು ಮಂಗಳಮುಖಿಯರು ಬಲಿಯಾಗುತ್ತಿದ್ದಾರೆ , ಇವರಿಗೆ ನಾವು ಕೊಡುವ ಅಗೌರವ,ಕಷ್ಟ , ಅವಾಚ್ಯ ಶಬ್ದಗಳಿಂದ ಬೈಯ್ದ ಪದಗಳು ಇವರನ್ನು ಇಹಲೋಕದ ಯಾತ್ರೆಗೆ ಕರೆದುಕೊಂಡು ಹೋಗುತ್ತಿದೆ.ಚಿಕ್ಕವನು ಇದ್ದೆ ಬೆಂಗಳೂರಿಗೆ ರೈಲ್ವೆಯಲ್ಲಿ ಹೋಗುತ್ತಿರುವಾಗ ಒಬ್ಬ ಆಂಟಿ ಬಂದು ಪಕ್ಕದಲ್ಲಿ ಕುಳಿತು ಕೆನ್ನೆಯನ್ನು ಚುಂಬಿಸಿ ಚಪ್ಪಾಳೆ ಹೊಡೆದಳು ,ನಾನು ಇನ್ನೂ ಚಿಕ್ಕ ಹುಡುಗ ಮುದ್ದು ಮುದ್ದಾದ ಕೆನ್ನೆಯ ಚೆಲುವು, ಪಕ್ಕದಲ್ಲಿ ಅಜ್ಜ ಹತ್ತು ರೂಪಾಯಿ ಕೊಟ್ಟರು ಆಗ ಆ ಆಂಟಿ ಒಂದು ರೂಪಾಯಿ ತಿರುಗಿ ಕೊಟ್ಟರು ಆಗ ನನಗೆ ಅಜ್ಜ ಅವರ ಬಗ್ಗೆ ಹೇಳಿದರು , ಅವತ್ತೇ ಗೊತ್ತಾಗಿದ್ದು ಮಂಗಳಮುಖಿಯರು ಅಂದರೆ ಹೀಗೆ ಇರುತ್ತಾರೆ ಅಂತ . ಬೆಂಗಳೂರಿನಲ್ಲಿ ಜೆಪಿ ನಗರದ ಕಡೆ ಮನೆ ಹತ್ತಿರ ಹೋಗುವಾಗ ಒಂದು ಬೀದಿಯಿಂದ ಹೋಗುವುದು ತುಂಬಾ ಕಷ್ಟ ಅಂತ ಪಕ್ಕದಲ್ಲಿ ಇದ್ದ ವ್ಯಕ್ತಿ ಹೇಳಿದ ಆದರೆ ನಾವು ಅದೇ ಬೀದಿಯಲ್ಲಿ ಅಜ್ಜ ನಾನು ನಡೆದುಕೊಂಡು ಹೋದೆ ,ಆ ಆಂಟಿಯಂತೆ ತುಂಬಾ ಜನ ಇದ್ದಾರೆ ಅಜ್ಜ ಅಂದೆ ತುಂಬಾ ಜನ ಬ್ರಷ್ ತಿಕ್ಕುತ್ತಾ ಹೊರಗೆ ಇದ್ರೂ ಅವತ್ತು ಭಾನುವಾರ ಒಬ್ಬರು ಮೀನು ತೊಳೆಯುತ್ತಾ ಇನ್ನೊಬ್ಬರು , ಗುಂಪು ಗುಂಪಾಗಿ ಹರಟೆಯ ಮಾತುಗಳು ಕೂಡಾ ಇತ್ತು , ಎದುರುಗಡೆ ಒಬ್ಬ ಮಂಗಳಮುಖಿ ಬಂದು ನಿಂತರು ಅಜ್ಜ ಏನಾಮ್ಮ ಅಂತ ಕೇಳಿದಾಗ ಪಾಪು ಕೊಡಿ ಅಂದ್ರು ನನಗೆ ತುಂಬಾ ಭಯ ಆಯಿತು ಆಗ ನನಗೆ ಎಂಟು ವರ್ಷ ಚಿಕ್ಕವನು ಅಂದ್ರೆ ಪೂರ್ತಿ ಚಿಕ್ಕವನು ಅಲ್ಲ ಎಲ್ಲರೂ ಬಂದು ಗುಂಪಾಗಿ ಬಿಟ್ಟರು ಎತ್ತಿಕೊಂಡು ಮುತ್ತು ಕೊಟ್ಟರು ಮತ್ತೆ ಕೆಳಗೆ ಬಿಟ್ಟು ಅವರ ಮನೆಗೆ ಹೋದರು ಹೀಗೆ ನೋಡಿ ಅವರಲ್ಲಿ ಕೂಡ ತಾಯಿಯ ಗುಣ ಇರುತ್ತದೆ ಅಂತ ನನಗೆ ಈಗ ಗೊತ್ತಾಗುತ್ತದೆ. ಸಮಾಜದಲ್ಲಿ ಅವರನ್ನು ದೂರ ತಳ್ಳಿ ನಾವೆಲ್ಲರೂ  ಗೌರವದಿಂದ ಬದುಕುವ ನಾವು ಅವರು ಕೂಡ ನಮ್ಮಂತೆ ಮನುಷ್ಯರು ಅಲ್ಲವೇ ಎಂದು ನಾವೇಕೆ ಯೋಚನೆ ಮಾಡಬಾರದು ಅಂತ ,ಅವರು ಕೂಡ ಶಿಕ್ಷಣ ಕಲಿಯಬೇಕು , ಎಲ್ಲಾ ಕ್ಷೇತ್ರಗಳಲ್ಲೂ ಸೇವೆಗೈದು ಸಾಧನೆ ಮಾಡಬೇಕು.ರಾಜಕೀಯದಲ್ಲಿ ಕೂಡ‌ ಹೆಸರು ಗಳಿಸಬೇಕು, ಸಂವಿಧಾನ ಬದ್ಧವಾಗಿ ಎಲ್ಲಾ ಹಕ್ಕುಗಳನ್ನು ನೀಡಬೇಕು, ಮಂಗಳಮುಖಿಯರ ವೇಶ್ಯಾವಾಟಿಕೆಯನ್ನು ನಿಲ್ಲಿಸಿ ಅವರಿಗೂ ಕೂಡ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕು.ದಾವಣಗೆರೆಯಲ್ಲಿ ಮನೆಗೆ ಹೋಗುತ್ತಿರುವಾಗ ಬೈಕ್ ನಲ್ಲಿ ರಾತ್ರಿ ಹತ್ತು ಗಂಟೆ ಆಗಿತ್ತು ನಾನು ನನ್ನ ತಮ್ಮ ಹೈವೇ ರಸ್ತೆಯ ಮೇಲೆ ಬರುತ್ತಿರುವಾಗ ಸಾಲಿಗೆ ಸುಂದರ ಬಟ್ಟೆಯನ್ನು ತೊಟ್ಟು ಮೇಕಪ್ ಮಾಡಿಕೊಂಡು ನಿಂತಿದ್ದರು ,ನನ್ನ ತಮ್ಮನನ್ನು ಕೇಳಿದೆ ಯಾರೋ ಇವರೆಲ್ಲಾ ಅಂತ ಕೇಳಿದೆ ಅವನು ದಾವಣಗೆರೆಯಲ್ಲಿ ಇರುವನು ಅವನು ಎಲ್ಲಾ ವಿವರಗಳನ್ನು ಕೊಟ್ಟ ಅಬ್ಬಾ ಅಂದೆ ಆಗ ಗೊತ್ತಾಯಿತು ಮಂಗಳಮುಖಿಯರು ಹೊಟ್ಟೆಗಾಗಿ ಮಾಡುತ್ತಿರುವರು ಅಂತ ಏನೇ ಆಗಲಿ ನನಗೇನು ಅಂತ ಮನೆಗೆ ಬಂದೆ ಬಂದು ಮಾರನೇ ದಿನ ಹರಪನಹಳ್ಳಿಗೆ ಹೊರಟೆ ಆ ದಿನ ಹೋಳಿ ಹಬ್ಬ ನಾನು ನನ್ನ ಗೆಳೆಯರು ಬಣ್ಣ ಮೊಟ್ಟೆಯನ್ನು ತೆಗೆದುಕೊಂಡು ರಸ್ತೆ ಕಡೆಗೆ ಹೊರಟೆವು ರಸ್ತೆಯಲ್ಲಿ ಯಾರು ಇದ್ದಿಲ್ಲ ಪೋಲಿಸ್ ಇಲಾಖೆಯಿಂದ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಎಲ್ಲರೂ ಹೇಳಿದ್ರು ಆಗ ತಾನೇ ಬಣ್ಣ ತೆಗೆದುಕೊಂಡು ಇಬ್ಬರು ಮಂಗಳಮುಖಿಯರು ಬಂದು ನಮಗೆಲ್ಲಾ ಬಣ್ಣ ಹಾಕಿದ್ರು , ನಾವು ಕೂಡ ಬಣ್ಣ ಹಚ್ಚಿ ಹಬ್ಬವನ್ನು ಆಚರಣೆ ಮಾಡಿ ಸಂತೋಷ ಪಟ್ಟು ಮರಳಿ ನಮ್ಮ ಜಾಗಕ್ಕೆ ಹೋಗಿಬಿಟ್ಟಿವಿ . ಹೀಗೆ ಕೆಲವು ವಿಷಯಗಳು ಇನ್ನು ಇವೆ ಅವರಲ್ಲಿ ಕೂಡ ಪ್ರೀತಿ ಪ್ರೇಮ ಸಹನೆ ಅಕ್ಕರೆ ಸ್ನೇಹ ಸಂಗಮ ಎಲ್ಲಾ ಇದೆ ಅವರನ್ನು ಕೂಡ ನಮ್ಮ ಜೊತೆ ಸೇರಿಸಿಕೊಂಡು ಅವರಿಗೆ ಅವರ ನೋವನ್ನು ಮರೆಸೋಣ ,ಈ ರೀತಿ ಮಕ್ಕಳು ಕಂಡು ಬಂದರೆ ದಯಮಾಡಿ ತಂದೆ ತಾಯಿಗಳು ಹೊರಗೆ ಹಾಕಬೇಡಿ ಅವರಿಗೂ ಕೂಡ ಜೊತೆ ಬದುಕಲು ಅವಕಾಶ ಮಾಡಿ ಕೊಡಿ ಎಂದು ತಮ್ಮಲ್ಲಿ ಕೇಳಿಕೊಳ್ಳುವೆ. ಅವಳಿಗೆ  ಬೇಕಾಗಿದೆ ಜಗತ್ತಿನಲ್ಲಿ ಸಮಾನತೆಯಿಂದ ಪ್ರೀತಿಸುವ ಕರುಳು ವಿಶೇಷ ವರದಿ ಸಂಗ್ರಹಗಾರರು ಭೋವಿ ರಾಮಚಂದ್ರ.

ವರದಿ – ಅಮಾಜಪ್ಪ ಹೆಚ್. ಜುಮಲಾಪೂರ

Leave a Reply

Your email address will not be published. Required fields are marked *