ಪುರಸಭೆ ಮುಖ್ಯಾಧಿಕಾರಿಯಿಂದ ಕೆರೆ ಸಂರಕ್ಷಣಾ ಅಭಿವೃದ್ದಿ ಪಾಧಿಕಾರ ನಿಯಮ ಉಲ್ಲಂಘನೆ.

Spread the love

ಪುರಸಭೆ ಮುಖ್ಯಾಧಿಕಾರಿಯಿಂದ ಕೆರೆ ಸಂರಕ್ಷಣಾ ಅಭಿವೃದ್ದಿ ಪಾಧಿಕಾರ ನಿಯಮ ಉಲ್ಲಂಘನೆ.

ಅಥಣಿ ಸಾರ್ವಜನಿಕ ಕೆರೆ ಮೂಲ ವಿಸ್ತೀರ್ಣದಲ್ಲಿ ಕಡಿಮೆಯಾಗಿದ್ದು ಹಾಗೂ ಕೆರೆ ಸಂರಕ್ಷಣಾ ಅಭಿವೃದ್ದಿ ಪ್ರಾಧಿಕಾರ ಅಧಿನಿಯಮ ಪ್ರಕಾರ ಬಫರ್ ಝೋನ್ ಉಲ್ಲಂಘನೆಯಾಗಿದೆ ಎಂದು ಅಥಣಿ ಜಿಲ್ಲಾ ಹೋರಾಟ ಸಮೀತಿ ಅಧ್ಯಕ್ಷ ಪ್ರಶಾಂತ ತೋಡಕರ ಅವರು ಆರೋಪಿಸಿದರು. ಅವರು ಸ್ಥಳೀಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಘೋಷ್ಠಿಯಲ್ಲಿ ಮಾತನಾಡುತ್ತಾ ಅಥಣಿ ಪುರಸಭೆ ಮುಖ್ಯಾಧಿಕಾರಿಗಳಿಗೆ ನಿಯಮ ಉಲ್ಲಂಘನೆ ಕುರಿತು ಸೂಚನೆ ಮಾಡಲಾಗಿದ್ದು. ಕೆರೆ ಪ್ರಾಧಿಕಾರ ಅಧಿನಿಯಮಗಳ ಪ್ರಕಾರ ಯಾವುದೇ ಸರಕಾರಿ & ಖಾಸಗಿ ಕಟ್ಟಡಗಳನ್ನು ಕೆರೆಯ ಝೋನ್ ಒಳಗೆ ಕಟ್ಟಲು ಅನುಮತಿ ಇರುವುದಿಲ್ಲ, ಹಾಗೂ ಮೂಲ ಕೆರೆಯ ಸುಮಾರು ಇತಿಹಾಸ ದಾಖಲೆಯ ದಾಖಲಾತಿಗಳನ್ನು ಪರಿಶೀಲಿಸಿ ಕೆರೆಗೆ ಸಂಬಂದಿಸಿದ ಸಹರದ್ದು ಪ್ರದೇಶ ಗುರುತಿಸಿ ಗುರುತಿನ ಫಲಕ ನೆಟ್ಟು ಸಾರ್ವಜನಿಕರ ಗಮನಕ್ಕೆ ತಂದು ಅಬಿವೃದ್ದಿ ಅಧಿಕಾರ ಅಧಿನಿಯಮ ಪ್ರಕಾರ ಕೆರೆ ಸಂರಕ್ಷಣೆ ಮಾಡಬೇಕು ಎಂದು ಮುಖ್ಯಾಧಿಕಾರಿ ಗಮನಕ್ಕೆ ತಂದರೂ ಕೂಡ ಸಹರದ್ದು ಗುರುತು ಮಾಡದೆ ಬಫರ್ ಝೋನ್ ಉಲ್ಲಂಘಿಸಿ ಅನಾಮದೇಯ ಖಾಸಗಿ ವ್ಯಕ್ತಿಗಳಿಗೆ ಕಬ್ಜಾ ಮಾಡಲು ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ ಎಂದರು. ಮುಂದುವರೆದು ಮಾತನಾಡುತ್ತಾ ಮುಖ್ಯವಾಗಿ ಕಾನೂನಾತ್ಮಕವಾಗಿ ಕೆರೆಯ ಬಫರ್ ವಲಯ ಮಿತಿಯಲ್ಲಿ ಇರುವಂತಹ ಯಾವುದೇ ಕಟ್ಟಡಗಳಿಗೆ ಕಟ್ಟಲು ಅವಕಾಶ ಇರಯವದಿಲ್ಲ, ಸುಮಾರು ವರ್ಷಗಳ ಹಿಂದಿನಿಂದ ಬಂದ ಅಥಣಿ ಸಾರ್ವಜನಿಕ ಕೆರೆಯ ಮೂಲ ದಾಖಲಾತಿಯನ್ನು ತಿರುಚಿ ಅಧಿಕಾರಿಗಳು ತಮಗೆ ಬಂದರೀತಿಯಲ್ಲಿ ಅನುಕೂಲ ಮಾಡಿಕೂಂಡು ಖಾಸಗಿ ವ್ಯಕ್ತಿಗಳ ಹೆಸರಿಗೆ ದಾಖಲಾತಿ ಸೃಷ್ಟಿ ಮಾಡಿದ್ದಾರೆ ಎಂಬ ಅನುಮಾನ ಇದ್ದು ಇದರ ಬಗ್ಗೆ ಮೇಲಿನ ಅಧಿಕಾರಿಗಳು ಹಳೆ ದಾಖಲಾತಿ ಪರಿಶೀಲಿಸಿ ಪ್ರಾಧಿಕಾರದಿಂದ ನಿಯಮ ಬಫರ್ ವಲಯ ಬರುವಂತಹ ಕಟ್ಟಡಗಳನ್ನು ತೆರವು ಮಾಡಬೇಕು ಹಾಗೂ ಹೊಸ ಕಟ್ಟಗಳಿಗೆ ಅವಕಾಶ ನೀಡಬಾರದು ಎಂದರು. ನಂತರ ಮುಂದುವರೆದು ಮಾತನಾಡುತ್ತಾ ಈಗಾಗಲೇ ಕೆರೆ ರಕ್ಷಣೆ ಬಗ್ಗೆ ಪಿ.ಐ.ಎಲ್ (ಸಾರ್ವಜನಿಕ ಸ್ವಹಿತಾಸಕ್ತಿ) ದಾಖಲೆ ಮಾಡಿ ಕಾನೂನಾತ್ಮಕ ಹೋರಾಟಕ್ಕೆ ಮಾಡುತ್ತಿದ್ದು  ಹಿಂದಿನ ಅಧಿಕಾರಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿ ನೀಲನಕ್ಷ ತಯಾರಿಸದೆ ಕೆರೆ ಅಭಿವೃದ್ಧಿಗಾಗಿ ಎ.ಸಿ ಅವರ ಅನುಮೋದನೆ ಪಡೆಯದೆ ಸರ್ಕಾರಿ ಬೊಕ್ಕಸಕ್ಕೆ ಸರ್ಕಾರಿ ಆಸ್ತಿಯನ್ನು ದುರಬಳಕ್ಕೆ ಮಾಡಿರುವದು ಕಂಡು ಬಂದಿದ್ದು ಇಂತಹ ವ್ಯಕ್ತಿಗಳ ಮೇಲೆ ಉನ್ನತ ಮಟ್ಟದ ತನಿಖೆಯಾಗಬೇಕು, ಈ ವಿಷಯವನ್ನು ಅವರ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಹಾಗು ಖಾಸಗಿ ವ್ಯಕ್ತಿಗಳಿಗೆ ಅವೈಜ್ಞಾನಿಕವಾಗಿ ಟೆಂಡರ್ ಮಾಡಿದ ಸಂಪೂರ್ಣ ಕಾಮಗಾರಿಯನ್ನು ತೆರವುಮಾಡಬೇಕು ಹಾಗೂ ಕೆರೆ ಸ್ಥಳದಲ್ಲಿ ಇರುವ ಅತಿಕ್ರಮಣ ಪ್ರದೇಶದ ಕಟ್ಟಡಗಳನ್ನು ತರವು ಮಾಡಬೇಕು ಬಫರ್ ವಲಯದಲ್ಲಿ ಬರುವಂತ ಯಾವುದೇ ಕಾಮಗಾರಿಗೆ ಅವಕಾಶ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಪೊಟೊ ಶೀರ್ಷಿಕೆ- ಪ್ರಶಾಂತ ತೋಡಕರ (ಅಥಣಿ ಜಿಲ್ಲಾ ಹೋರಾಟ ಸಮೀತಿ ಅಧ್ಯಕ್ಷ)

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *