ಬಡ ಕಲಾವಿದರ ನೆರವಿಗೆ ಧಾವಿಸಿದ ಬಾಲನಟಿ ಭೈರವಿ

Spread the love

ಬಡ ಕಲಾವಿದರ ನೆರವಿಗೆ ಧಾವಿಸಿದ ಬಾಲನಟಿ ಭೈರವಿ

ಕಲಾವಿದರ ನೆರವಿಗೆ ಮತ್ತಷ್ಟು ಧಾನಿಗಳು ಮುಂದೆ ಬರಬೇಕು ಹಾಗೂ ಉಳ್ಳವರು ಅಸಹಾಯಕರಿಗೆ ಸಾಧ್ಯವಾದಷ್ಟು ನೆರವು ನೀಡಿದರೆ ಮಾತ್ರವೇ ಕೊರೋನಾ ಸಂಕಷ್ಟದ ದಿನಗಳಲ್ಲಿ ಬಡವರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಭಾಜಪ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಅವರು ತಿಳಿಸಿದರು. ಲಗ್ಗೆರೆಯಲ್ಲಿ ಇಂದು ಬೆಳಿಗ್ಗೆ ಬಾಲನಟಿ ಭೈರವಿಯ ವತಿಯಿಂದ ಗುರುತು ಚೀಟಿ ಇಲ್ಲದ 50ಕ್ಕೂ ಹೆಚ್ಚು ಕಲಾವಿದರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಾಲನಟಿ ಭೈರವಿ ನಾನು ಪ್ರಮುಖ ಪಾತ್ರದಲ್ಲಿ ನಟಿಸಿರುವ “ಶವಸಂಸ್ಕಾರ”, “ಚಾರಣ” ಮತ್ತು ಮಸಣದ ಚಿತ್ರಗಳಲ್ಲಿ ಗಳಿಸಿದ ಹಣವನ್ನು ನನ್ನ ಹುಟ್ಟುಹಬ್ಬದ ಆಚರಣೆಗಾಗಿ ಕೂಡಿಟ್ಟಿದ್ದೆ. ಅದರೆ ಚಿತ್ರರಂಗದ ಗುರುತುಚೀಟಿ ಇಲ್ಲದ ಕಲಾವಿದರ ಬವಣೆಯ ವಿಡಿಯೋಗಳನ್ನು ಯೂಟ್ಯೂಬ್ ಅಲ್ಲಿ ನೋಡಿ ಮನಸ್ಸಿಗೆ ತುಂಬಾ ನೋವಾಯಿತು ಆ ಹಣ ಮತ್ತು ನಮ್ಮ ತಂದೆ ಪತ್ರಿಕಾ ವಿತರಕ “ಹುಲುಕುಂಟೆ ಮಹೇಶ” ಪತ್ರಿಕಾ ಸರಬರಾಜಿನಿಂದ ಗಳಿಸಿದ್ದ ಹಣವನ್ನು ಒಗ್ಗೂಡಿಸಿ ಇಂದು ಐವತ್ತು ಜನರಿಗೆ ನೆರವು ನೀಡಿದೆವು ಎಂದು ತಿಳಿಸಿದಳು. ಪತ್ರಿಕಾ ವಿತರಕ ಹುಲುಕುಂಟೆ ಮಹೇಶ್ ಮಾತನಾಡಿ, ಕಳೆದ ವರ್ಷ ನಾವು 150ಕ್ಕೂ ಹೆಚ್ಚು ಮಂದಿ ಚಿತ್ರಮಂದಿರ ಸಿಬ್ಬಂದಿ ಹಾಗೂ ಕಲಾವಿದರಿಗೆ ನೆರವು ನೀಡಿದ್ದೆವು. ಈ ಬಾರಿ ಎರಡು ಹಂತದಲ್ಲಿ ಸುಮಾರು 100 ಜನ ಬಡಕಲಾವಿದರಿಗೆ ನೆರವು ನೀಡಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಮತ್ತಷ್ಟು ಕಲಾವಿದರಿಗೆ ನರವು ಒದಗಿಸಲು ಪ್ರಯತ್ನ ಮಾಡುತ್ತೇವೆ ಎಂದರು. ಸಮಾರಂಭದಲ್ಲಿ ನಿರ್ದೇಶಕ ಕೃಷ್ಣಮೂರ್ತಿ, ರಮೇಶ್ ಜಯಸಿಂಹ, ಪತ್ರಿಕಾ ವಿತರಕ ಹುಲುಕುಂಟೆ ಮಹೇಶ, ಯುವಮುಖಂಡರಾದ ಬಾಬು ಮುಂತಾದವರು ಇದ್ದರು.

ವರದಿಮೌನೇಶ್ ರಾಥೋಡ್  ಬೆಂಗಳೂರ್

Leave a Reply

Your email address will not be published. Required fields are marked *