ಮೆಗಾ ಹಗರಣದ ಸತ್ಯಾಂಶವು ಹೊರಬರಲು ಹಾಲು ಒಕ್ಕೂಟದ ಮಾಜಿಅಧ್ಯಕ್ಷ ಎಂ.ಬಿ.ಹರೀಶ್ ಒತ್ತಾಯಿಸಿದರು.

Spread the love

ಮೆಗಾ ಹಗರಣದ ಸತ್ಯಾಂಶವು ಹೊರಬರಲು ಹಾಲು ಒಕ್ಕೂಟದ ಮಾಜಿಅಧ್ಯಕ್ಷ ಎಂ.ಬಿ.ಹರೀಶ್ ಒತ್ತಾಯಿಸಿದರು.

ಮನ್ ಮುಲ್ ನಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿಗಳ ಮೆಗಾ ಹಗರಣದ ಸತ್ಯಾಂಶವು ಹೊರಬರಲು, ತಪ್ಪಿತಸ್ಥರಿಗೆ ಶಿಕ್ಷೆಯಾಗಲು, ಒಕ್ಕೂಟದ ನೀರು-ಹಾಲು ಹಗರಣವನ್ನು ರಾಜ್ಯ ಸರ್ಕಾರವು ಸಿಬಿಐ ತನಿಖೆಗೆ ತಪ್ಪಿಸಬೇಕು ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮಾಜಿಅಧ್ಯಕ್ಷ ಎಂ.ಬಿ.ಹರೀಶ್ ಒತ್ತಾಯಿಸಿದರು.

ಹರೀಶ್ ಇಂದು ಕೆ.ಆರ್.ಪೇಟೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಿಬಿಐ ತನಿಖೆಗೆ ಆಗ್ರಹಿಸಿದರು..ಕಳೆದ ಸಾಲಿನ ಮನ್ ಮುಲ್ ಆಡಳಿತ ಮಂಡಳಿಯ ವತಿಯಿಂದ 78 ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ. ಈ ಬಾಬ್ತಿನ ಹಣವನ್ನು ಆಡಳಿತ ಮಂಡಳಿಯಿಂದಲೇ ವಸೂಲಿ ಮಾಡಿ ಒಕ್ಕೂಟದ ಖಾತೆಗೆ ಜಮಾ ಮಾಡಬೇಕು ಎಂದು ಸರ್ಕಾರದ ಅಧಿಕಾರಿಗಳೇ ವರದಿ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಪ್ರಸ್ತುತ ನಡೆದಿರುವ ಹಾಲಿಗೆ ನೀರು ಬೆರೆಸಿರುವ ಭಾರೀ ಮಟ್ಟದ ಹಗರಣವನ್ನು ಕಾವು ಆರುವ ಮುನ್ನವೇ ಸತ್ಯ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಾದರೆ ಸಿಬಿಐ ತನಿಖೆಯಿಂದ ಮಾತ್ರ ಸತ್ಯಾಂಶವು ಹೊರಬರಲು ಸಾಧ್ಯವಿದೆ ಎಂದು ಆಗ್ರಹಿಸಿದ ಹರೀಶ್ ಈಗಾಗಲೇ ರೈತರ ಜೀವನಾಡಿಗಳಾಗಿರುವ ಮೈಷುಗರ್ ಮತ್ತು ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗಳು ಬಾಗಿಲು ಮುಚ್ಚಿದ್ದು ರೈತರ ಬದುಕು ಮೂರಾಬಟ್ಟೆಯಾಗಿದೆ. ಮಂಡ್ಯ ಹಾಲು ಒಕ್ಕೂಟದಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಠಾಚಾರದಿಂದಾಗಿ ಒಕ್ಕೂಟವು ಬಾಗಿಲು ಮುಚ್ಚಿದರೆ ಗ್ರಾಮೀಣ ಪ್ರದೇಶದ ಬಡಜನರ ನೆಮ್ಮದಿಯ ಜೀವನಕ್ಕೆ ಭಂಗ ತರಲಿದೆ. ಆದ್ದರಿಂದ ಕೂಡಲೇ ಸತ್ಯಾಂಶವನ್ನು ಹೊರತಂದು ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಹರೀಶ್ ಒತ್ತಾಯಿಸಿದರು..

ನಾನೂ ಕೂಡ ಮಂಡ್ಯ ಜಿಲ್ಲಾ ಹಾಲು  ಒಕ್ಕೂಟದ ಅಧ್ಯಕ್ಷನಾಗಿ ಆರೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ನನ್ನಂತೆ ಶ್ರೀರಂಗಪಟ್ಟಣದ ಬೋರೇಗೌಡರು ಕೂಡ ಅಧ್ಯಕ್ಷರಾಗಿ ಹಾಲಿ ನಿರ್ದೇಶಕರಾಗಿ ಕಳೆದ 17 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಸ್ತುತ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಮಾತನಾಡದೇ ಮೌನವಾಗಿದ್ದಾರೆ.  ನನ್ನ ಕಾಲದಲ್ಲಿ ಮನ್ ಮುಲ್ ಅಭಿವೃದ್ಧಿಗೆ, ಟೆಟ್ರಾ ಪ್ಯಾಕ್ ಘಟಕದ ನಿರ್ಮಾಣಕ್ಕೆ, ಹಾಲು ಒಕ್ಕೂಟದ ಉತ್ಪನ್ನಗಳ ಬೆಂಗಳೂರು ಮಾರುಕಟ್ಟೆಯ ವಿಸ್ತರಣೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕಳೆದ ಅವಧಿಯಲ್ಲಿ ಒಕ್ಕೂಟದಲ್ಲಿ ನಡೆದಿರುವ ಹಗರಣಗಳ ತನಿಖೆ ಈವರೆಗೆ ನಡೆದಿಲ್ಲ. ಪ್ರಸ್ತುತ ನಡೆದಿರುವ ಹಾಲು ನೀರು ಹಗರಣದ ಬ್ರಹ್ಮಂಡ ಭ್ರಷ್ಟಾಚಾರಚನ್ನು ಸಿಐಡಿ ತನಿಖೆಗೆ ಒಪ್ಪಿಸಿರುವುದರಿಂದ ನಾವು ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವಾಗುವುದಿಲ್ಲ. ನನ್ನ ಆಡಳಿತಾವಧಿಯಲ್ಲಿ ಯಾವುದೇ ತಪ್ಪು ನಡೆದಿರುವುದು ಕಂಡುಬಂದರೆ ಕಳೆದ 15 ವರ್ಷಗಳ ಅವಧಿಯ ಆಡಳಿತ ಮಂಡಳಿಯ ವ್ಯವಹಾರಗಳ ಸಮಗ್ರ ತನಿಖೆ ನಡೆಯಲಿ, ನಾನು ತಪ್ಪು ಮಾಡಿದ್ದರೆ ರೈತರ ಮೆಟ್ಟಿನಲ್ಲಿ ಹೊಡೆಸಿಕೊಂಡು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಮಾನ್ಯ ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಂಡ್ಯ ಹಾಲು ಒಕ್ಕೂಟದ ಹಾಲು ನೀರು ಹಗರಣ ಸೇರಿದಂತೆ ಒಕ್ಕೂಟದ ಭದ್ರತೆಗೆ ಧಕ್ಕೆತಂದಿರುವ ಎಲ್ಲಾ ಅವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಬೇಕು ಎಂದು ಹರೀಶ್ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುರುಕನಹಳ್ಳಿ ರವಿ ಮತ್ತು ಕೊಮ್ಮೇನಹಳ್ಳಿ ಜಗಧೀಶ್ ಉಪಸ್ಥಿತರಿದ್ದರು.

  ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *