ಕೊಪ್ಪಳ ಜಿಲ್ಲೆಯಲ್ಲಿ ಪರಿಸರ ಬೆಳೆಸೋಣ ಜೀವ ಸಂಕುಲ ಉಳಿಸೋಣ

Spread the love

ಕೊಪ್ಪಳ ಜಿಲ್ಲೆಯಲ್ಲಿ ಪರಿಸರ ಬೆಳೆಸೋಣ ಜೀವ ಸಂಕುಲ ಉಳಿಸೋಣ

ಕೊಪ್ಪಳ;- ಭೂಮಿಯ ಮೇಲೆ ಪ್ರತಿಯೊಂದು ಪ್ರತಿಯೊಂದು ಜೀವಿಯೂ ಆರೋಗ್ಯದಿಂದಿರಲು ಶುದ್ಧ ಗಾಳಿ ತುಂಬಾ ಅವಶ್ಯವಾಗಿದೆ ನಾವೆಲ್ಲರೂ ಆರೋಗ್ಯದಿಂದಿರಲು ಪ್ರತಿಯೊಬ್ಬರು ಮನೆಗೊಂದು ಮರ ಊರಿಗೊಂದು ವನ ಎನ್ನುವ ಘೋಷವಾಕ್ಯ ದಂತೆ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ನಾವೆಲ್ಲರೂ ಕಂಕಣಬದ್ಧರಾಗಿ ಕೆಲಸ ಮಾಡಬೇಕು ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಹೇಳಿದರು. ಭಾನುವಾರ ತಾಲೂಕಿನ ಹೊಸ ಗೊಂಡಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ನೇಹ ಸಮೃದ್ಧಿ ಹಾಗೂ ಶ್ರೀರಕ್ಷ ಟ್ರಸ್ಟ್ ಮತ್ತು ಅಗಸ್ತ್ಯ ಫೌಂಡೇಶನ್ ಹಾಗೂ ಗ್ರಾಮ ಪಂಚಾಯತ್ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪರಿಸರ ದಿನಾಚರಣೆಯ ನಿಮಿತ್ಯ ಕಾರ್ಯಕ್ರಮವನ್ನು  ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.‌ ಮುಂದಿನ ದಿನಗಳಲ್ಲಿ  ತಾಲೂಕಿನ ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಹಸಿರು ಶಾಲೆಯನ್ನಾಗಿ ಮಾಡಲು ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದರು. ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಹನುಮಂತಪ್ಪ ಕುರಿ ಮಾತನಾಡಿ, ಆಧುನೀಕರಣ ನೆಪದಲ್ಲಿ ನಾವೆಲ್ಲರೂ ಪರಿಸರ ಮಾಲಿನ್ಯ ಮಾಡಿದ್ದರ ಫಲವಾಗಿ ಇಂದು ನಾವೆಲ್ಲರೂ ಮುಖ ಗವಸ ಹಾಕಿಕೊಂಡು ಜೀವನ ನಡೆಸುವ ಅನಿವಾರ್ಯತೆ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.ಸ್ನೇಹಬಳಗದ ಕಾರ್ಯದಲ್ಲಿ ಗ್ರಾಮದ ಯುವಕರೆಲ್ಲರೂ ಕೈಜೋಡಿಸಲು ವಿನಂತಿ ಮಾಡಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರಯ್ಯಸ್ವಾಮಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಟ್ರಸ್ಟ್ ನ ಅಧ್ಯಕ್ಷ ಬಸವರಾಜ್ ಸಿರಗುಂಪಿ, ಆನಂದ ಹಳ್ಳಿಗುಡಿ, ಬಿಆರ್ಪಿ ಶರಣಪ್ಪ ರೆಡ್ಡಿ, ಸುರೇಶ್ ಕಂಬಳಿ, ಮಂಜುನಾಥ್ ಹಳ್ಳಿಕೇರಿ, ಭೀಮಪ್ಪ ಹೂಗಾರ್, ವೆಂಕಟೇಶ್ ಟ್ರಸ್ಟ್ನ ಸರ್ವ ಸದಸ್ಯರು, ಗ್ರಾಮದ ಯುವಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾರದಾ.ಡಿ, ನಿರೂಪಿಸಿ, ಶರಣಪ್ಪ ರೆಡ್ಡೇರ ವಂದಿಸಿದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *