ಯಲಬುರ್ಗಾ ಪಟ್ಟಣದಲ್ಲಿಂದು ಎರಡನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆ

Spread the love

ಯಲಬುರ್ಗಾ ಪಟ್ಟಣದಲ್ಲಿಂದು ಎರಡನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆ

ಯಲಬುರ್ಗಾ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಕೇಂದ್ರ ಸರಕಾರದ ಜನವಿರೋಧಿ ನೀತಿ ಹಾಗೂ ತೈಲ ಬೆಲೆ ಹೆಚ್ಚಳದ ಕ್ರಮವನ್ನು ಖಂಡಿಸಿ ಯಲಬುರ್ಗಾ ಹೋಗುವ ರಸ್ತೆಯಲ್ಲಿರುವ ಮುಧೋಳ ಪೆಟ್ರೋಲ್ ಬಂಕ್ ನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಸಪ್ಪ ಅಕ್ಕಿ ಅವರು ಹಾಗೂ ಪ.ಜಾ ಕಾಂಗ್ರೆಸ್ ಘಟಕದ ತಾಲೂಕ ಅದ್ಯಕ್ಷ ಛತ್ರಪ್ಪ ಚಲವಾದಿ ರಾಜ್ಯ ಹಾಗೂ ಕೇಂದರ ಸರಕಾರಗಳು ಜನರ ಜೀವನದ ಜೋತೆ ಆಟ ಆಡುತ್ತಿವೆ. ಪೆಟ್ರೋಲ್ ಬೆಲೆ 100ರ ಗಡಿ ದಾಟಿದ್ದು ಡಿಜೆಲ್ ಬೆಲೆಯು 90 ರೂ. ಆಗಿದೆ ಇದರಿಂದ ಜನಸಾಮಾನ್ಯರು ಮದ್ಯಮ ವರ್ಗದ ಜನರು ತುಂಬಾ ಕಷ್ಟದಲ್ಲಿದ್ದಾರೆ. ಪ್ರತಿ ದಿನ ಜನರಿಗೆ ಅತ್ಯಂತ ಅವಶ್ಯಕತೆ ಇರುವ ಅಡುಗೆ ಎಣ್ಣೆ ಹಾಗೂ ಸಿಲೆಂಡರ್ ಬೆಲೆ ಹೆಚ್ಚಾಗಿದ್ದು ಬಡವರ ಬದುಕು ಅತ್ಯಂತ ಹೀನಾಯ ಸ್ಥಿತಿಗೆ ತಲಿಪಿದೆ ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನರಪರವಾಗಿ ಇರುವ ಸರಕಾರಗಳಲ್ಲಾ ಇವುಗಳು ಕೇವಲ ಕಾರ್ಪೋರೆಟ್ ಸಂಸ್ಥೆಗಳ ಪರವಾದ ಸರಕಾರಗಳಾಗಿವೆ ಎಂದು ಮಾತನಾಡಿದರು. ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿವಿದ ಪೆಟ್ರೋಲ್ ಬಂಕ್ ಗಳಲ್ಲಿ ಯುವ ಘಟಕ ಹಾಗೂ ಮಖಂಡರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಚಂದ್ರು ದೇಸಾಯಿ ಹೇಮರೆಡ್ಡಿ ರೆಡ್ಡೇರ ಬಸವರಾಜ್ ಮಠದ ಕರಿಸಿದ್ದಪ್ಪ  ಪೂರ್ತಗೇರಿ ಖಾದರ್ ಭಾಷಾ ತೋಳಗಲ್ ಇನ್ನುಳಿದ ಹಲವಾರು ಮುಖಂಡರು ಭಾಗಿಯಾಗಿದ್ದರು.

ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *