ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ

Spread the love

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ

ಹರಪನಹಳ್ಳಿ:ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಇಂಧನ ಬೆಲೆ ಏರಿಕೆ ನೀತಿ ಖಂಡಿಸಿ ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆದೇಶದ ಮೇರೆಗೆ ಪೆಟ್ರೋಲ್ ನಾಟ್ಔಟ್ 100 ಎಂಬ ವಿನೂತನ ಪ್ರತಿಭಟನೆಯನ್ನು ಕ್ಷೇತ್ರದ ಜನಪ್ರಿಯ ನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ.ವೀಣಾಮಹಾಂತೇಶ್ ಅವರ ನೇತೃತ್ವದಲ್ಲಿ ಇಂದು ಎತ್ತಿನಗಾಡಿ ಯಲ್ಲಿ ಸಂಚರಿಸುವ ಮೂಲಕ ಹೊಸಪೇಟೆ ರಸ್ತೆಯ ಪೆಟ್ರೋಲ್ ಪಂಪ್ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ,ಪೆಟ್ರೋಲ್ ಪಂಪ್ ನಲ್ಲಿ ಜಮಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಎಂ.ಪಿ ವೀಣಾ ಅವರ ಸಮ್ಮುಖದಲ್ಲಿ ಕ್ರಿಕೆಟ್ ಆಡುವುದರೊಂದಿಗೆ ಸೆಂಚುರಿಗೆ ಸಂಭ್ರಮಿಸಿದಂತೆ ಬ್ಯಾಟ್ ಹಿಡಿದ ಕೈಮೇಲಕ್ಕೆ ಎತ್ತಿ ಹಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ವ್ಯಂಗ್ಯವಾಡಿದರು. ಈ ವೇಳೆ  ಮಾತನಾಡಿದ ಎಂ.ಪಿ ವೀಣಾ ಮಹಾಂತೇಶ್ ಅವರು ಕೊರೋನಾ ಎಂಬ ಮಹಾಮಾರಿಯಿಂದ ಹೈರಾಣಾದ ಜನತೆಗೆ, ಲಾಕ್ಡೌನ್ ನಿಂದ ರೋಸಿಹೋದ ಜನತೆಗೆ ಮೈಮೇಲೆ ಬರೆ ಎಳೆದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಚರ್ಮ ಸುಲಿಯುವ ಧೋರಣೆಯು  ಖಂಡನೀಯ , ಇಂತಹ ಧೋರಣೆಯಿಂದ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರ ಜೀವನ ನಶಿಸಿಹೋಗುತ್ತಿದೆ. ಸರ್ಕಾರಗಳು ಇಂತಹ ಧೋರಣೆಯಿಂದ ಹಿಂದೆ ಸರಿದು ಬೆಲೆ ಏರಿಕೆಯನ್ನು ನಿಲ್ಲಿಸಿ, ಜನಸಾಮಾನ್ಯರರಿಗೆ ಕೈಗೆಟಕುವ ದರ ವಿಧಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ದೇಶಾದ್ಯಂತ ಹಾಗೂ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ವರಿಷ್ಠರು ಆದೇಶಿಸಿದಂತೆ ಇಂದು ಹರಪನಹಳ್ಳಿ ಕ್ಷೇತ್ರದಲ್ಲಿಯೂ ಪ್ರತಿಭಟನೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ  ಮಾಜಿ ಪುರಸಭೆ ಅಧ್ಯಕ್ಷರಾದ ಕವಿತಾ ವಾಗೀಶ್  ಹಾಗೂ ದುಗ್ಗಾವತಿ ಗ್ರಾಮದ ಸಿದ್ದಲಿಂಗನಗೌಡ  ದೇವರ ತಿಮ್ಲಾಪುರ ನಾಗರಾಜ್  ಶೃಂಗಾರ ತೋಟ ಗ್ರಾಮದ ಚಂದ್ರು ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಶಿವರಾಜ್ ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ದಾದಾಪೀರ್ ಮಕರಬಿ ,ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ಸಿ , ಹರಪನಹಳ್ಳಿ  ಕೋವಿಡ್  ಸ್ವಯಂ ಸೇವಕ  ಸಚಿನ್ ಕುಮಾರ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರಾದ  ಇಸ್ಮಾಯಿಲ್ ಅರುಣ್ ಕುಮಾರ್  ಪ್ರಜ್ವಲ್  ಮದ್ದಾನಸ್ವಾಮಿ  ದಾದಾ ಕಲಂದರ್ ಸಾಗರ್ ಪಾಟೀಲ್  ಲಿಂಗರಾಜ  ಮಹೇಶ ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಾದ  ಶ್ರೀಮತಿ ಕಾಳಮ್ಮ ಶ್ರೀಮತಿ ರೂಪ ಶ್ರೀಮತಿ ನಿರ್ಮಲ ಶ್ರೀಮತಿ ಗಾಯತ್ರಿ ಶ್ರೀಮತಿ ಲಕ್ಷ್ಮಿ ಶ್ರೀಮತಿ ರೇಖಾ ಶ್ರೀಮತಿ ಸೀತಾ ಶ್ರೀಮತಿ ಉಮಾ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ವರದಿ – ಮಹೇಶ ಶರ್ಮಾ ಅಥಣಿ

Leave a Reply

Your email address will not be published. Required fields are marked *