ಕಷ್ಟದಲ್ಲಿರುವ ಪತ್ರಕರ್ತರಿಗೆ ಕರುಣೆ ತೋರಿದ ಕರುಣಾಮಯಿ ನೀತಿನ್ ಡೆವೆಲಪರ್ಸ್ ಹಾಗೂ ಶ್ರೀ ಶರಣ ವೀರೇಶ್ವರ ಬ್ಯಾಂಕ್

Spread the love

ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದಲ್ಲಿ ಕಷ್ಟದಲ್ಲಿರುವ ಪತ್ರಕರ್ತರಿಗೆ ಕರುಣೆ ತೋರಿದ ಕರುಣಾಮಯಿ ನೀತಿನ್ ಡೆವೆಲಪರ್ಸ್ ಹಾಗೂ ಶ್ರೀ ಶರಣ ವೀರೇಶ್ವರ ಬ್ಯಾಂಕ್ ಆಡಳಿತ ಲಿಂಗಸುಗೂರ ಇವರ ವತಿಯಿಂದ,

ತಾವರಗೇರಾ ಭಾಗದ ಪತ್ರಕರ್ತರಿಗ ಆಹಾರ ದಿನಸಿ ಕಿಟ್ ಮತ್ತು ಮಾಸ್ಕ್ ಕೊಡುವದರ ಮೂಲಕ ಪತ್ರಕರ್ತರ ಕಷ್ಟಕ್ಕೆ ನೇರವಾಗಿದ್ದಾರೆ. ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಅಧ್ಯಕ್ಷ ರು ಚನ್ನಕುಮಾರ ವಿ ಸಿ ಯವರು ಈಗಾಗಲೇ ಲಿಂಗಸುಗೂರ ತಾಲ್ಲೂಕಿನಾದ್ಯಂತ ಎಲ್ಲ ಪತ್ರಕರ್ತರಿಗೆ ಕಿಟ್ ನೀಡಿ ಸತತವಾಗಿ ಅನ್ನಸಂತರ್ಪಣೆ ಸೇವೆ ಮಾಡುತ್ತಾ ಬಂದಿದ್ದಾರೆ. ಮಾಧ್ಯಮದ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು ಪತ್ರಕರ್ತರಗಿಲ್ಲ ಜನಪ್ರತಿನಿಧಿಗಳ ಸರ್ಕಾರದ ಪ್ಯಾಕೇಜ್ ರಾಜ್ಯದಲ್ಲಿ ಕೊರೊನಾ ಮೊದಲ ಅಲೆ ಮತ್ತು ಎರಡನೆಯ ಅಲೆಯ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಜೀವದ ಹಂಗನ್ನು ತೊರೆದು ನಗರ,ಪಟ್ಟಣ.ಹಳ್ಳಿ ಹಳ್ಳಿ,ಗಲ್ಲಿ ಗಲ್ಲಿ ತಿರುಗಿ ಕೊರೊನಾ ವಾಸ್ತವ ಸ್ಥಿತಿಯ ಸುದ್ದಿಯನ್ನು ಪ್ರಕಟಿಸಿ ಸರ್ಕಾರದ ಕಣ್ಣು ತೆರಸುವ ಪ್ರಾಮಾಣಿಕ ಕೆಲಸ ಮಾಡುವುದಲ್ಲದೇ ಸೋಂಕಿತರಿವ ಸ್ಥಳಗಳಿಗೆ ತೆರಳಿ ಅವರಿಗೆ ಆಗುವ ಅನೂಕೂಲ ಮತ್ತು ಅನಾನೂಕೂಲ ಬಗ್ಗೆ ತಿಳಿಸುವ ಪತ್ರಕರ್ತರ ಯಾವಾಗ ಸೋಂಕು ಹರಡುತ್ತೇ ಎನ್ನುವ ಆತಂಕದಲ್ಲಿ ನಿತ್ಯ ಸಾರ್ವಜನಿಕರ ಬಗ್ಗೆ ಕಳಿಕಳಿಯುಳ್ಳ ಒಬ್ಬ ಪತ್ರಕರ್ತರು ಯಾವದೇ ಫಲಾಪೇಕ್ಷವಿಲ್ಲದೇ ಸಾರ್ವಜನಿಕರ ರಂಗದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬಗಳು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದು ಸರ್ಕಾರ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ಯಾಕೆ ಬರುತ್ತಿಲ್ಲ ? ನಿತ್ಯ ಸುದ್ದಿ ಮಾಡಲು ತೆರಳಿ ಮಹಾಮಾರಿಯನ್ನು ತಗೆದುಕೊಂಡು ಬಂದು ಅದೆಷ್ಟೋ ಪತ್ರಕರ್ತರು ಅಸುನೀಗುತ್ತಿದ್ದರೂ ಅವರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ. ಪತ್ರಕರ್ತರು ಮತ್ತು ಅವರ ಕುಟುಂಬಗಳು ಅಭದ್ರತೆಯಲ್ಲಿದ್ದರೂ ಅವರ ಕಡೆಗೆ ಯಾಕೆ ಸರ್ಕಾರ ಗಮನ ಹರಿಸುತ್ತಿಲ್ಲ ಅವರು ಯಾವ ಪಾಪ ಮಾಡಿದ್ದಾರೆ..? ವಿವಿಧ ವಲಯದ ಕೆಲಸ ಮಾಡುತ್ತಿರುವ ಬಗ್ಗೆ ತಿಳಿಸುವ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಕೊಡಬೇಕು ಅಂತಾ ಯಾಕೆ ಮನಸ್ಸು ಮಾಡಿಲ್ಲ, ವರದಿಗಾರರು…ಅಭದ್ರತೆಯಲ್ಲಿ ಕೆಲಸ ಮಾಡುತ್ತಿರುವ ಮಾಧ್ಯಮದ ಸ್ನೇಹಿತರು ಕೊರೊನಾ ಸೋಂಕಿಗೆ ಬಲಿಯಾಗಿ ಅದೆಷ್ಟೋ ಜನ ಪತ್ರಕರ್ತರು ಮರಣ ಹೊಂದಿ ಅವರನ್ನೇ ನಂಬಿಕೊಂಡ ಸಾವಿರಾರು ಕುಟುಂಬಗಳು ಕುಟುಂಬದ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಅನಾಥವಾಗಿ ಬೀದಿ ಪಾಲಾದ ಕುಟುಂಬಗಳ ನೋವಿನ ಧ್ವನಿ ಆಯಾ ಜಿಲ್ಲೆಯ ಮತ್ತು ಕ್ಷೇತ್ರದ ಜನಪ್ರತಿ ನಿಧಿಗಳಿಗೆ  ಹಾಗೂ ಸರ್ಕಾರಕ್ಕೆ ಕೇಳಿಲ್ವಾ? ವಿವಿಧ ರಂಗದಲ್ಲಿ ಅಸಂಘಟಿತವಾಗಿ ಕಾರ್ಯ ನಿರ್ವಹಿಸುವರ ಜೊತೆ ಪತ್ರಕರ್ತರಿಗೂ ಪ್ಯಾಕೇಜ ನೀಡದಿರುವುದು ಪತ್ರಿಕಾ ರಂಗದಲ್ಲಿರುವ ಸ್ನೇಹಿತರಿಗೆ ನಿರಾಶೆಯಾಗಿದೆ ಸರ್ಕಾರ ತಕ್ಷಣವೇ ಪತ್ರಕರ್ತರ ನೋವನ್ನು ತಿಳಿದುಕೊಂಡು ಅವರಿಗೂ ಪ್ಯಾಕೇಜ ಬಿಡುಗಡೆ ಮಾಡಲಿ ಎಂದು ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ನಾಚಿಸುವಂತೆ  ಚನ್ನು ಕುಮಾರ್ ವಿ.ಸಿ ಮಾತನಾಡಿದರು. ಇಂತಹ ಸಂದರ್ಭದಲ್ಲಿ ವರದಿಗಾರರ ನೆರವಿಗೆ ಬಂದವರೆಂದರೆ ಲಿಂಗಸುಗೂರಿನ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಶ್ರೀ ಚನ್ನು ಕುಮಾರ್ ವಿ,ಸಿ,ಯವರು ಮತ್ತು ಅವರ ಬ್ಯಾಂಕಿನ ಆಡಳಿತಮಂಡಳಿ. ನಾಲ್ಕುದಿನಗಳಿಂದ ಸಾಗಿರುವ ವಿಶೇಷಚೇತನರು, ದಾದಿಯರು, ಆರಕ್ಷಕರು, ಬೀದಿ ವ್ಯಾಪಾರಿಗಳು,ಅನಾಥರಿಗೆ ಮಾಸ್ಕ್, ಹಣ್ಣು, ದಿನಸಿ, ಕಿಟ್ ನೀಡುವ ಅಭಿಯಾನ ವರದಿಗಾರರನ್ನೂ ಗುರುತಿಸಿ ಆಹಾರಧಾನ್ಯಗಳ ಕಿಟ್ ನೀಡುವಮೂಲಕ, ವರದಿಗಾರರೆಂದರೆ ನಮ್ಮ ಕೆಲಸದ ಸುದ್ದಿ ಮಾಡುವವರು ಅಷ್ಟೇ ಅಂದುಕೊಂಡ ಜನರ ಮಧ್ಯ ಸುದ್ದಿಗಾರರಿಗೂ ನೆರವಾಗಬೇಕೆಂಬ ಮನಸು ಹುಟ್ಟಿರುವದು ನಿಜಕ್ಕೂ ಸ್ವಾಗತಾರ್ಹ. ಇವರು ಕಳೆದ ನಾಲ್ಕುದಿನಗಳಿಂದ ಮೂರು ಸಾವಿರ ಮಾಸ್ಕ್ ,ದಿನಾಲು 800. ಕ್ಕೂ ಹೆಚ್ಚು ಆಹಾರಧಾನ್ಯಗಳ ಕಿಟ್ ವಿತರಿಸುತ್ತಾಬಂದಿದ್ದಾರೆ. ಚುನಾವಣೆಗಳು ಬಂದಾಗ ರಾಜಕಾರಣಿಗಳು, ಜನಪ್ರತಿನಿಧಿಗಳು ಒಂದು ಓಣಿಯ ಒಂದು ಮನೆಯನ್ನೂ ಬಿಡದೆ ಓಟುಗಳ ಲೆಕ್ಕಹಾಕಿ ನೋಟು, ನೈಂಟಿ, ಮತ್ತೇನೆನೋ ನೀಡಿ ಕೈಮುಗಿದು ಕಾಲಿಗೆ ಬೀಳುವ ರಾಜಕೀಯ ಸಮಾಜಸೇವಕರು ಇಂದೇಕೋ ಕಾಣುತ್ತಿಲ್ಲ. ಕೆಲವರು ಕಿಟ್ ನೀಡುವದು, ಮತ್ತಿನ್ಯಾವುದೋ ರೀತಿಯಲ್ಲಿ ಸಮಾಜಸೇವೆ ಮಾಡುತ್ತಿದ್ದಾರೆ, ಆದರೆ ಇನ್ನೂ ಹಲವು ನಾಯಕರು ಪತ್ತೇನೇ ಇಲ್ಲ. ಅವರಿಗೆ ತಮ್ಮ ಮತದಾರಪ್ರಭುಗಳು ನೆನಪಾಗುವದು ಮತ್ತೆ ಚುನಾವಣೆಗಳು ಬಂದಾಗ, ವರದಿಗಾರರು ನೆನಪಾಗುವದು ಗಂಜಿ ಅಂಗಿ ಹಾಕಿಕೊಂಡು ಹಲ್ಲು ಗಿಂಜುವಾಗ. ಪತ್ರಕರ್ತರ ಕಷ್ಟ ಅವರಿಗ್ಯಾಕೆ ? ಇರಲಿ ಅಂತವರ ಮಧ್ಯ ಚನ್ನುಕುಮಾರರಂತಹ ದಾನಿಗಳಿದ್ದಾರಲ್ಲ ಎಂಬ ಸಂತೋಷ ಇದೆ. ಈ ಸಂದರ್ಭದಲ್ಲಿ  ತಾವರಗೇರಾ ಪಟ್ಟಣ ಅಧ್ಯಕ್ಷರಾದ ಶ್ರೀ ವಿಕ್ರಮ್ ರಾಯ್ಕರ್,  ಪಟ್ಟಣ ಪಂ ಮುಖ್ಯಾಧಿಕಾರಿ ಶ್ರೀ ಶಂಕರ್ ಕಾಳೆ,  ಹಾಗೂ ಸ್ಥಳಿಯ ಪೋಲೀಸ್ ಇಲಾಖೆ ಹಾಗೂ ಪತ್ರಕರ್ತರಾದ  ಗಿರೀಶ್ ದಿವಾಣಜೀ,  ಶರಣಪ್ಪ ಗುಮಗೇರಾ, ನರಸಿಂಹ  ಜೋಷಿ, ಎನ್,ಅಮೀತ್  ಆರ್.ಬಿ.ಅಲಿ ಆದಿಲ್, ಅಮಾಜಪ್ಪ ಹೆಚ್.ಜೆ. ಮಂಜುನಾಥ ಎಸ್.ಕೆ, ಚಂದ್ರು ಕುಂಭಾರ, ಶರಣಪ್ಪ ಕುಂಬಾರ, ನೀತಿನ್ ಡೆವೆಲಪರ್ಸ್ ಹಾಗೂ ಶ್ರೀ ಶರಣ ವೀರೇಶ್ವರ ಬ್ಯಾಂಕ್ ರವರ ನೇತೃತ್ವದಲ್ಲಿ ಜರುಗಿತು.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *