ಮನೆಗಳರ ಬಂಧನ, ಕವಿತಾಳ ಪೊಲೀಸರ ಯಶಸ್ವಿ ಕಾರ್ಯಾಚರಣೆ,

Spread the love

ಮನೆಗಳರ ಬಂಧನ, ಕವಿತಾಳ ಪೊಲೀಸರ ಯಶಸ್ವಿ ಕಾರ್ಯಾಚರಣೆ,

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣ ಸಮೀಪದ ಹಿರೇ ಬಾದರದಿನ್ನಿ ಮತ್ತು ಬಾಗಲವಾಡ ಗ್ರಾಮದಲ್ಲಿ ದಿನಾಂಕ : 13-04-2021 ರಂದು ಮಧ್ಯರಾತ್ರಿಯಲ್ಲಿ ,, ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಬಾದರದಿನ್ನಿ ಗ್ರಾಮದ ಅಯ್ಯಣ್ಣ , ಇವರ ಮನೆಯಲ್ಲಿ ಸುಮಾರು 3 ತೊಲ ಬಂಗಾರ & ನಗದು ಹಣ 39,000/- ರೂ ಗಳನ್ನು ಹಾಗೂ ದಿನಾಂಕ 03-05-2021 ರಂದು ಮಧ್ಯ ರಾತ್ರಿಯಲ್ಲಿ ಬಾಗಲವಾಡ ಗ್ರಾಮದ ಅಮರೇಗೌಡ ಇವರ ಮನೆ ಕಳ್ಳತನವಾಗಿ ಸುಮಾರು 3,1/2 ತೊಲ ಬಂಗಾರ ಹಾಗೂ ನಗದು ಹಣ 45,000/- ರೂ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಕವಿತಾಳ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ. ಸದರಿ ಪ್ರಕರಣ ಬೇದಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರುರವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರುರವರ, ಪೊಲೀಸ್ ಉಪಾಧೀಕ್ಷಕರು ಸಿಂಧನೂರುರವರ ಮಾರ್ಗದರ್ಶನದಲ್ಲಿ, ಶ್ರೀ ಗುರುರಾಜ ಆರ್ ಕಟ್ಟಿಮನಿ ಸಿ.ಪಿ.ಐ ಸಿರವಾರ ಹಾಗೂ ಶ್ರೀ ವೆಂಕಟೇಶ್ ಎಂ. ಪಿ.ಎಸ್.ಐ ಕವಿತಾಳ ಹಾಗೂ ಸಿಬ್ಬಂಧಿಯವರಾದ ಮಲ್ಲಿಕಾರ್ಜುನ , ವೀರೇಶ್, ಅಶೋಕ, ರಾಜಮಹ್ಮದ್, ಸುರೇಶ್ ಜೆಲ್ಲಿ , ಬರಮನಗೌಡ, ಶಂಕರಗೌಡ, ಸುರೇಶ,ಶಿವಕುಮಾರ್ ರಾಠೋಡ್ ಸಿರವಾರ ಪೊಲೀಸ್ ಠಾಣೆಯ ಗೋಪಿ ಹಾಗೂ ಮಾನವಿ ಠಾಣೆಯ ಗೋವಿಂದರಾಜ, ಚಾಂದಪಾಶ ಮತ್ತು ಡೇವಿಡ್ ರವರ 2 ವಿಶೇಷ ತಂಡಗಳನ್ನು ರಚಿಸಿದ್ದು ಇತ್ತು. ಈ ಅಧಿಕಾರಿಗಳ ಮತ್ತು ಸಿಬ್ಬಂಧಿಯವರ ತಂಡವು ಈ ಪ್ರಕರಣವನ್ನು ಭೇದಿಸಿ 3 ಜನ ಆರೋಪಿತರನ್ನು ದಿನಾಂಕ 05-06-2021 ರಂದು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿ ವಿವರ:  1] ರಮೇಶ ತಂದೆ ದುರಗಪ್ಪ. 26 ವರ್ಷ 2] ಅಯ್ಯಪ್ಪ ತಂದೆ ದೇವಪ್ಪ 23 ವರ್ಷ 3] ದುನಿಯಾ @ ಮುದಿಯಾ @ ನಾಗರಾಜ ತಂದೆ ಹುಲಿಗೆಪ್ಪ 25 ವರ್ಷ ಸಾ: ಎಲ್ಲಾರು ಬಾಗಲವಾಡ, ಇವರನ್ನು ಖಚಿತ ಮಾಹಿತಿಯ ಮೇರೆಗೆ ವಶಕ್ಕೆ ಪಡೆದು ವಿಚಾರಿಸಿದ್ದು, ಇವರುಗಳು ತಮ್ಮ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಇರುತ್ತದೆ, ಬಂಧಿತರಿಂದ 5,1/2 ತೊಲ ಬಂಗಾರದ ಆಭರಣಗಳು ಹಾಗೂ ನಗದು ಹಣ 4370/- ಒಟ್ಟ ಅಂದಾಜು 2,79,370/- ಬೆಲೆಬಾಳುವುದನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಅತ್ಯಂತ ಚುರುಕಿನಿಂದ ಈ ಸೂಕ್ಷ್ಮ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂಧಿಯವರ ತಂಡದ ಕೆಲಸವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು ಶ್ಲಾಂಘನಿಯ ತಿಳಿಸಿದ್ದಾರೆ.

ವರದಿಆನಂದ್ ಸಿಂಗ್ ಕವಿತಾಳ

Leave a Reply

Your email address will not be published. Required fields are marked *