ಪತ್ರಿಕೋದ್ಯಮದವರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿ

Spread the love

ಪತ್ರಿಕೋದ್ಯಮದವರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿ

ಪತ್ರಕರ್ತರು ಕೊರೋನ ಸೊಂಕಿನ ನಡುವೆ ತಮ್ಮ ಪ್ರಾಣವನ್ನೇ ಬದಿಗಿಟ್ಟು  ರಾಜ್ಯದ ಜನರಿಗೆ ಸುದ್ದಿ ಕೊಡುವಲ್ಲಿ ಮುನ್ನಡೆ ಇರುತ್ತಾರೆ ಇದು ಕರ್ನಾಟಕದ ಜನರಿಗೆ ಗೊತ್ತಿರುವ ಸತ್ಯ ಘಟನೆ ಪ್ರತಿಯೊಬ್ಬ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವವರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿ ಎಂದು ಕರ್ನಾಟಕ ರಾಜ್ಯದ ಹಲೋ ಪತ್ರಕರ್ತರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದರು. “ಪತ್ರಕರ್ತರನ್ನು ಕೇವಲ ಲಸಿಕೆಗೆ ಮಾತ್ರ ಪ್ರಂಟ್ ಲೈನ್ ವರ್ಕರ್ಸ್” ಎಂದು ಸೀಮಿತಗೊಳಿಸಿರುವುದಕ್ಕೆ ಇಂದು ಘೋಷಿಷಿರುವ ಪ್ಯಾಕೇಜ್’ನಿಂದ ಸರ್ಕಾರ ಸಾಬೀತು ಪಡಿಸಿದೆ. ಪತ್ರಕರ್ತರ ತಮ್ಮ ಪ್ರಾಣದ ಹಂಗನ್ನು ತೊರೆದು ಕೋವಿಡ್ ಹೆಮ್ಮಾರಿ ರೋಗ ಇರುವಂತ ಪರಿಸ್ಥಿತಿಯಲ್ಲೂ ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರಿಗೆ ಸರಿಯಾದ ತನ್ನ ನಿಲುವನ್ನು ಇಂದು ವ್ಯಕ್ತಪಡಿಸಬೇಕಿದೆ. ಪತ್ರಕರ್ತರಿಗೆ ಅವರದೇ ಆದ ಆರ್ಥಿಕ ಸಮಸ್ಯೆಗಳು ಇವೆ. ಆ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಈಗಾಗಲೇ ಪತ್ರಕರ್ತರು ಮನವರಿಕೆ ಮಾಡಿ ಕೊಟ್ಟರು ಪತ್ರಕರ್ತರ ಮನವಿಯನ್ನು ತಿರಸ್ಕಾರ ಮಾಡಿರುವುದನ್ನು ನೋಡಿದರೆ ಪತ್ರಕರ್ತರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ ಎನ್ನುವಂತೆ ಗೋಚರಿಸುತ್ತಿದೆ.  ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುವ ಸರ್ಕಾರ ಪತ್ರಕರ್ತರ ನೆರವಿಗೆ ಬಾರದೆ ಇರುವುದು ದುರಂತವೇ ಹೌದು. ಮುಖ್ಯಮಂತ್ರಿ ಗಳು ಪತ್ರಕರ್ತರ ಮನವಿಯನ್ನು ಪುನರ್ ಪರಿಶೀಲನೆ ಮಾಡಬೇಕು ಮತ್ತು ಪ್ಯಾಕೇಜ್ ಘೋಷಣೆ ಮಾಡುವ ಕೆಲಸವನ್ನು ಮಾಡಲಿ ಎನ್ನುವುದು ನಮ್ಮ ಒತ್ತಾಯ…. ರಾಜ್ಯದ ಬಹುತೇಕ ಜನರಿಗೆ ಪತ್ರಕರ್ತರ ಸಂಕಷ್ಟಗಳ ಬಗ್ಗೆ ಗೊತ್ತಿಲ್ಲ. ಅನೇಕ ದಿನ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಗೆ ಸಂಬಳವೇ ಇಲ್ಲ, ಪತ್ರಿಕೆಗಳ ಪ್ರತಿಗಳ ಮಾರಾಟದಿಂದ ಬಂದ ಕಮೀಷನ್’ನಿಂದ ಜೀವನ ಸಾಗಿಸಬೇಕಾದ ಅನಿವಾರ್ಯತೆ. ಇತ್ತ ಉಗುಳುವುದಕ್ಕೂ, ನುಂಗುವುದಕ್ಕೂ ಆಗದಂತೆ ಇದೆ ಪತ್ರಕರ್ತರ ನೈಜ ಜೀವನ. ಸರ್ಕಾರ ಬಹುಶಃ ಪ್ರತಿನಿತ್ಯ ತಮ್ಮ ಸುತ್ತಾಮುತ್ತಾ ಓಡಾಡುವಂಥ ಸಿರಿವಂತ ಪತ್ರಕರ್ತರನ್ನು, ಕಾರಿನಲ್ಲಿ ಓಡಾಡುವಂಥವರನ್ನು ನೋಡಿ ಪತ್ರಕರ್ತರಿಗೆ ಏನು ಕಮ್ಮಿಯಾಗಿದೆ ಎಂಬ ಆಲೋಚನೆಯಲ್ಲಿ ರಾಜ್ಯಾಧ್ಯಂತವಿರುವ ನಗರ ಹಾಗೂ ಗ್ರಾಮಾಂತರ ನೈಜ ಪತ್ರಕರ್ತರ ಸ್ಥಿತಿಯನ್ನು ಮರೆತಿರುವುದು ಬಹಳ ದುಃಖದಾಯಕ ಎಂದು ಹುಸೇನ್ ಮೊತೇಕಾನ ರವರು ಆಗ್ರಹಿಸಿದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *