ಪುಟಾಣಿ ಮಕ್ಕಳ ಪ್ರತಿಭೆಗೆ ಬೆನ್ನೆಲುಬಾಗಿ ನಿಂತ ರಂಗಪ್ರಹರಿಯ ಪುಟಾಣಿ ಪಂಟರ್ಸ್

Spread the love

ಪುಟಾಣಿ ಮಕ್ಕಳ ಪ್ರತಿಭೆಗೆ ಬೆನ್ನೆಲುಬಾಗಿ ನಿಂತ ರಂಗಪ್ರಹರಿಯ ಪುಟಾಣಿ ಪಂಟರ್ಸ್

ಭೂಮಿಯ ಮೇಲೆ ಸಾವಿರಾರು ರೀತಿಯ ಕಲಾ ಪ್ರಕಾರಗಳಿವೆ , ಅದರಲ್ಲಿ ಅಭಿನಯ ಬಹು ಮುಖ್ಯವಾದ ಕಲೆ  . ನಟಿಸುವುದು, ಪಾತ್ರಗಳಿಗೆ ಜೀವ ತುಂಬುವುದು ಎಂದರೆ ಅದು ಸುಲಭದ ಮಾತಲ್ಲ. ಅದಕ್ಕೆ ಸೂಕ್ತ ರೀತಿಯಲ್ಲಿ ಶಾಸ್ತ್ರೀಯವಾಗಿ ಮತ್ತು ತಾಂತ್ರಿಕ ರೀತಿಯ  ತರಬೇತಿಯ ಅಗತ್ಯದೊಂದಿಗೆ, ಮಾರ್ಗದರ್ಶನವೂ ಕೂಡ ಮುಖ್ಯ . ರಂಗಭೂಮಿಯಲ್ಲಿ  ಹಲವಾರು ಹೆಸರಾಂತ ತಂಡಗಳಿವೆ . ಇಂತಹ  ತಂಡಗಳು ಸ್ವಾರ್ಥ ಪರವಿಲ್ಲದೇ  ರಂಗದ ಶಿಸ್ತು ಮತ್ತು  ಶಿಕ್ಷಣವನ್ನು ಕುರಿತು ಪಾಠಗಳ ಜೊತೆಯಲ್ಲಿ ನಾಟಕದ  ಅಭ್ಯಾಸ  , ಮಕ್ಕಳ  ಮನೋವಿಕಾಸದ  ಕುರಿತು  ಆಲೋಚನೆ  , ಪರಿಸರ  ಪ್ರಜ್ಞೆ, ಸಾಮಾಜಿಕ  ಕಳಕಳಿ  ಹೀಗೆ  ಕೇವಲ  ಮನೋರಂಜನೆಯಿಂದ  ಮಾತ್ರ  ನಾಟಕ ಅಲ್ಲ  ಈ ಎಲ್ಲಾ  ಅಂಶಗಳನ್ನು ಪಾಲಿಸತಕ್ಕದ್ದು  ಎಂಬ ಪ್ರಜ್ಞೆಯೊಂದಿಗೆ ಕಾರ್ಯ ನಿರ್ವಹಿಸುತ್ತವೆ… ರಂಗಭೂಮಿಯಲ್ಲಿ  ಎಂದಿಗೂ  ನಾಟಕದ ಮುಖಾಂತರ  ಪ್ರಹಾರಗಳಾಗಬೇಕು… ಅವು  ಆರೋಗ್ಯಕರ  ವಿಚಾರಧಾರೆಯಲ್ಲಿರಬೇಕು… ಚಿಂತಿಸುವ,  ಪ್ರಶ್ನಿಸುವ, ಮತ್ತು  ಪ್ರೇಕ್ಷಕರ ನಡುವೆ ಆಲೋಚಿಸಿವ  ವಿಷಯಗಳಾಗಬೇಕು  ಎನ್ನುವ  ಉದ್ದೇಶದೊಂದಿಗೆ ಹುಟ್ಟಿದ  ಸಂಸ್ಥೆಯೇ ” ರಂಗಪ್ರಹರಿ “. ಹಲವಾರು  ರಂಗ ತಂಡದಲ್ಲಿ  ನಟಿಯಾಗಿ, ನಿರೂಪಕಿಯಾಗಿ  ಗುರುತಿಸಿಕೊಂಡ   , ನಿರ್ಮಲ ನಾದನ್ ಅವರು ರಂಗ ರಂಗಪ್ರಹರಿ ಸಂಸ್ಥೆಯನ್ನು  ಸುಮಾರು ವರ್ಷಗಳಿಂದ , ಮಕ್ಕಳ  ಮತ್ತು ಯುವಕರ  ನಾಟಕ,  ಶಿಬಿರಗಳು,  ರಂಗದ ಕುರಿತು ಬೇರೆ ಬೇರೆ  ತರಬೇತಿಗಳನ್ನು ನಡೆಸಿಕೊಂಡು  ಬಂದಿದ್ದು,  ಸಂಸ್ಥೆಯ ಕೇಂದ್ರಬಿಂದು ಎಂದರೆ ಅಲ್ಲಿ ತರಬೇತಿ ಪಡೆಯುತ್ತಿರುವ “ಪುಟಾಣಿ  ಮಕ್ಕಳು  ” ಎಂದು   ಹೆಮ್ಮೆ  ಪಡುತ್ತಾರೆ .  ಅವರಲ್ಲಿರುವ ಕಲಿಕೆಯ ಆಸಕ್ತಿ ಎಂತಹವರನ್ನೂ ಅಚ್ಚರಿ ಪಡುವಂತೆ ಮಾಡುತ್ತದೆ. ಸುಮಾರು  ಮಕ್ಕಳಿಗೆ ಭೋಧಕಿಯಾಗಿದರೂ  ,, ಹೆಚ್ಚಿನ ವಿದ್ಯಾರ್ಥಿಗಳು ನನ್ನ ತಂಡ  ಹಾಗೂ  ಬೇರೆ  ಬೇರೆ  ಇನ್ಸ್ಟಿಟ್ಯೂಟ್ ನಲ್ಲಿ   ರಂಗ  ಶಿಕ್ಷಣ ಪಡೆದಿದ್ದರೂ ಈ ಪುಟ್ಟ ಮಕ್ಕಳು ಸ್ವಲ್ಪ ವಿಭಿನ್ನವಾಗಿ ನಿಲ್ಲುತ್ತಾರೆ.  ಎನ್ನುವುದು   ನಿರ್ಮಲಾ ನಾದನ್ ಅವರ ಅಭಿಪ್ರಾಯ… ನಾನೊಬ್ಬಳೇ  ಅಲ್ಲ  ನನ್ನ  ತಂಡದಲ್ಲಿ  ರಜಿನಿಕಾಂತ್, ಜಲಜಾ, ಕಾರ್ತಿಕ್, ತಿಲಕ್, ಮಹೇಶ್ ಭೂಪತಿ, ರಾಜದೀಪ್, ಚೇತನ್  ಗೌಡ   ರಂಗ ಶಿಕ್ಷಣವನ್ನ    ಪ್ರತಿಷ್ಠಿತ  ರಂಗಶಾಲೆಯಲ್ಲಿ  ಅಭ್ಯಾಸ ಮುಗಿಸಿ ಬಂದವರು, ನನ್ನೊಂದಿಗೆ  ಅವರು  ಬೆನ್ನೆಲುಬಾಗಿ  ನಿಂತು  ನನ್ನ  ಈ ಪುಟಾಣಿ ಮಕ್ಕಳಿಗಾಗಿ  ನನ್ನೊಂದಿಗೆ  ಶ್ರಮಿಸುತ್ತಾರೆ  .. ನನ್ನ  ತಂಡದ  ಹಲವಾರು  ನಾಟಕದ ನಿರ್ದೇಶಕ  ಪ್ರಶಾಂತ್ ಸಿದ್ಧಿ  ಈ ವರೆಗೂ  ನಿರ್ದೇಶಿಸಿದ್ದೂ   ಸುಮಂತ್  ಹಾಗೂ  ಪೃಥ್ವಿ,  ಮಹೇಶ್,  ಪ್ರೀತಂ, ಅರವಿಂದ್, ರಾಜವರ್ಧನ   ರಂಗ ವಿನ್ಯಾಸದ ಮತ್ತು  ಪ್ರಚಾರಕ್ಕೆ  ಸಹಾಯಕರಾಗಿ  ನಿಲ್ಲುತ್ತಾರೆ….    ತಮಗೆ ಎಷ್ಟೇ ಕೆಲಸವಿದ್ದರೂ ಪ್ರತಿ  ಭಾನುವಾರ ಬಿಡುವು ಮಾಡಿಕೊಂಡು ಮಕ್ಕಳಿಗೆ ರಂಗ ಶಿಕ್ಷಣದ ಜವಾಬ್ದಾರಿ ತಂಡದ  ಜವಾಬ್ದಾರಿ …ಕೊರೋನಾ ಸಮಸ್ಯೆಯಿಂದ ಲಾಕ್  ಡೌನ್ ಶುರುವಾಗಿ ಭಾನುವಾರದ ತರಗತಿಗಳು ಮತ್ತು  ನಾಟಕಗಳ ಪ್ರದರ್ಶನ ಇಲ್ಲದೆ  ಇರುವುದು  ಬೇಸರದ ಸಂಗತಿ… ರಂಗ ಶಿಕ್ಷಣ ಆನ್ಲೈನ್ ಮುಖಾಂತರ  ಸಾಧ್ಯ  ಇಲ್ಲ… ಅದು  ಸರಿಯಾದ  ತರಬೇತಿ  ಅಲ್ಲ  .. ರಂಗಭೂಮಿಗೇ  ಅತೀ ದೊಡ್ಡ ಇತಿಹಾಸವೇ  ಇದೆ  … ಆದರೂ ಇಂತಹ  ಸಂದರ್ಭದಲ್ಲಿ  ಬೇಸಿಗೆ ರಜೆ  ನನ್ನ  ಪುಟಾಣಿ  ಮಕ್ಕಳ  ರಂಗಶಿಕ್ಷಣ   ಅರ್ಧದಲ್ಲೇ  ನಿಂತದ್ದು  ಬೇಸರದ ಸಂಗತಿ , ಪ್ರತಿಬಾರಿ  ನಡೆಯುವಂತೆ  ಬೇಸಿಗೆ ಶಿಬಿರಗಳು  ಈ ಎರಡು  ವರ್ಷಗಳಲ್ಲಿ  ನಡೆಯಲಿಲ್ಲ  ಇದು  ನಿಜಕ್ಕೂ  ಹಲವಾರು ತಂಡಗಳಿಗೆ  ಬೇಸರದ  ಸಂಗತಿ…..  ಈ   ನಿಟ್ಟಿನಲ್ಲಿ  ಮಕ್ಕಳ ಆಸಕ್ತಿ ಮತ್ತು  ಹಲವಾರು  ಚಟುವಟಿಕೆಗಳ  ಮುಖಾಂತರ  ಮಕ್ಕಳು  ಕರೋನಾ  ಎಂಬ  ಈ ಮಹಾಮಾರಿಯ  ವಿಷಯವನ್ನು  ಮುಂದಿಟ್ಟುಕೊಂಡು,  ಅದೇ  ವಿಷಯದ  ಕುರಿತು   ಪುಟಾಣಿ  ಮಕ್ಕಳಾದ ಜಾನು,  ಗ್ರೀಷ್ಮ, ಗೌತಮ್, ರೂಪಶ್ರೀ, ನಾದಲಹರಿ, ಡಯಾನ, ತನ್ಮಯ್  ….   ತಾವೇ  ಸ್ವತಃ ಕಥೆಗಳನ್ನು  ರಚಿಸಿ  ಫೋನ್ ನ ಮುಖಾಂತರ  ನಿರ್ದೇಶಿಸುವ  ಪುಟಾಣಿ  ಮಕ್ಕಳ  ಅಭಿನಯ   ನಿಜಕ್ಕೂ  ನೋಡಲು  ಚಂದ  ಈ  ಲಾಕ್ ಡೌನ್ ಸಮಯದಲ್ಲಿ  ಮಕ್ಕಳು  ಕರೋನಾ  ನಿವಾರಣಾ ಜಾಗೃತಿ ಮೂಡಿಸುವ  ಕಿರುಚಿತ್ರ, ಸಂಬಂಧಗಳ ಮೌಲ್ಯ, ಮನೆಯಲ್ಲಿಯೇ  ಬಂಧಿಯಾಗಿರುವ ಅವರ  ನೋವುಗಳು, ಶಾಲಾ ದಿನಗಳು  , ಪ್ರಕೃತಿ ನಾಶ, ಕರೋನಾ  ಸಂಬಂಧಿಸಿದ  ಕಷಾಯ  ಅಡುಗೆ ಹೀಗೆ  ಬೇರೆ ಬೇರೆ  ರೀತಿಯಲ್ಲಿ  ಸಾಮಾಜಿಕ  ಜಾಲತಾಣಗಳಲ್ಲಿ  ತಮ್ಮ  ಈ ಬೇಸಿಗೆಯ ಶಿಬಿರದ ಸಮಯವನ್ನ  ಸದುಪಯೋಗ ಪಡಿಸಿಕೊಂಡು  ಮೆಚ್ಚುಗೆಗೆ  ಪಾತ್ರರಾಗಿದ್ದಾರೆ….   ಬೇಸಿಗೆಯ  ರಂಗ ಶಿಬಿರಗಳು ನಡೆಯದೇ  ಇರುವುದು  ಎಲ್ಲಾ  ರಂಗತಂಡದವರಿಗೂ  ಬೇಸರದ  ಸಂಗತಿ.

ಪುಟ್ಟ ವಿದ್ಯಾರ್ಥಿಗಳ ಮಾತುಗಳು :-

ಆನ್ ಲೈನ್ ಮೂಲಕ ರಂಗ  ಶಿಕ್ಷಣ ನಿಜಕ್ಕೂ ಬೇಸರ ನಾವು ನಮ್ಮ  ತಂಡದವರನ್ನ  ನಮ್ಮ ಸ್ನೇಹಿತರನ್ನ  ಸಂಗೀತ  ನೃತ್ಯ  ಅಭಿನಯ ಎಲ್ಲಾ  ಸದ್ಯಕ್ಕೆ  ಆನ್ ಲೈನ್ ಮೂಲಕ ಶಿಕ್ಷಣ ಪಡೆಯುತ್ತಿದ್ದೇವೆ …ಈ ಲಾಕ್ ಡೌನ್ ಸಮಯವನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಬಳಸಿಕೊಂಡು  ತಾವೇ ಸ್ವತಃ ಪುಟ್ಟ ಪುಟ್ಟ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿದ್ದಾರೆ. ಕೊರೋನಾ ಜಾಗೃತಿ, ಪ್ರಕೃತಿಯ ಸಂರಕ್ಷಣೆ, ಮಾತೃ ವಾತ್ಸಲ್ಯ, ಅಣ್ಣ ತಂಗಿ ಬಾಂಧವ್ಯ, ಸ್ನೇಹದ ಮಹತ್ವ ಹೀಗೆ  ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಸಾರುವ ಹಲವಾರು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ ಹಾಗೂ ಆ ಎಲ್ಲಾ ವಿಡಿಯೋ ಗಳಿಗೆ ಉತ್ತಮ ಪ್ರತಿಕ್ರಿಯೆ ಮತ್ತು ಮಕ್ಕಳಿಗೆ ಆಶೀರ್ವಾದ ಸಿಕ್ಕಿದೆ.  – ರೂಪಶ್ರೀ ( 15 ವರ್ಷ ) ನಾನು ರಂಗಶಾಲೆಯನ್ನ  ತುಂಬಾ ಮಿಸ್ ಮಾಡ್ಕೋತಾ ಇದ್ದೇನೆ… ಹಲವಾರು ಸಂಗೀತ ನೃತ್ಯ ಅಭಿನಯ ಎಲ್ಲಾ ಸದ್ಯಕ್ಕೆ  ಮರೆತೇ ಹೋಗಿದೆ… ರಂಗಕಲಿಕೆ  ಆನ್ಲೈನ್  ಮುಖಾಂತರ  ಸಾಧ್ಯ ಇಲ್ಲ   –  ಜಾಹ್ನವಿ ( 10 ವರ್ಷ ) ನಾನು ನನ್ನ ಮ್ಯಾಮ್ ನ ಮಿಸ್ ಮಾಡ್ಕೋತಾ ಇದ್ದೇನೆ….ನನ್ನ ಮುದ್ದು ಮಾಡ್ತಾ  ತಪ್ಪುಗಳನ್ನು  ಎತ್ತಿ  ತೋರಿಸಿ  ಸದಾ ನನ್ನನ್ನು  ಹುರಿದುಂಬಿಸ್ತಾ  ಇದ್ರು… ಬೇಗ ನಾಟಕ ಮಾಡಬೇಕು – ನಾದ ಲಹರಿ (8 ವರ್ಷ ) ನಾಗತಿಹಳ್ಳಿ ರಮೇಶ್ ಸರ್  ಅವರ  ನೃತ್ಯ ರೂಪಕ  ಹಾಗೂ  ಬೇಲೂರು ರಘುನಂದನ್ ಸರ್ ಅವರ  ನಾಟಕದ  ತಯಾರಿ  ಮಧ್ಯದಲ್ಲಿ  ನಿಂತಿದೆ  ಬೇಸರವಾಯಿತು….  ತುಂಬಾ  ಕಲಿಯಬಹುದ್ದಿತ್ತು… – ತನ್ಮಯ್ (11 ವರ್ಷ)  ಲಾಕ್ ಡೌನ್ ನಿಂದ  ನಾನು, ಲಕ್ಷ್ಯ, ಅದಿತಿ, ಧನು  ದೂರ  ಇದ್ದೇವೆ  ನೆಟ್ವರ್ಕ್ ಸಮಸ್ಯೆ ಯಿಂದಾಗಿ  ನಾವು  ತರಗತಿಗಳನ್ನು  ಮಿಸ್ ಮಾಡ್ಕೋತಾ ಇದ್ದೇನೆ … – ನಮನ್ (8 ವರ್ಷ) ರಂಗ ಶಿಕ್ಷಣ ಅತೀ ಮುಖ್ಯ  … ರಂಗ ಶಿಬಿರಗಳ ಮುಖಾಂತರ  ವ್ಯಕ್ತಿತ್ವ  ವಿಕಾಸ…ನಾನು  ನನ್ನ  ತಂಗಿ  ಮನೆಯಲ್ಲಿಯೇ  ಕಲಿತ ರಂಗ ಪಾಠಗಳನ್ನು  ಸ್ನೇಹಿತರ ಜೊತೆ ಆಟವಾಡುತ್ತಾ  ಕಲಿಯುವುದು  ಇನ್ನೂ  ಹೆಚ್ಚಿನ ಜವಾಬ್ದಾರಿ…. ಈ ವರುಷ  ನಾಟಕ ಪ್ರದರ್ಶನ  ಇಲ್ಲ – ಗೌತಮ್ (12 ವರ್ಷ) ……ಸುದ್ದಿ ಸಂಗ್ರಹಗಾರರು  ಮುರಳೀ ಮೋಹನ್.

ವರದಿ –ಅಮಾಜಪ್ಪ ಹೆಚ್.ಜುಮಾಲಾಪೂರ

Leave a Reply

Your email address will not be published. Required fields are marked *