ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಮಂಗಳ ಮುಖಿಯರಿಗೆ ಆಹಾರ ಕಿಟ್-

Spread the love

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಮಂಗಳ ಮುಖಿಯರಿಗೆ ಆಹಾರ ಕಿಟ್

ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕು ಮಂಗಳಮುಖಿಯರಿಗೆ ಆಹಾರದ ಕಿಟ್ಟು ವಿತರಣೆ. ಕೊರೋನ ಮಹಾಮಾರಿಯ ಎರಡನೇ ಅಲೆಯ ಹೊಡೆತಕ್ಕೆ ಸಿಕ್ಕಿ ಅನೇಕ ಜನರು ಬದುಕು ಚಿಂತಾಜನಕವಾಗಿದ್ದು  ಅದರಲ್ಲೂ ಮಂಗಳಮುಖಿಯರ ಬದುಕು ತೀರ ಶೋಚನೀಯ ವಾಗಿದ್ದು  ಸರ್ಕಾರ  ಮಂಗಳಮುಖಿಯರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಹೆಲ್ಪಿಂಗ್ ಹ್ಯಾಂಡ್ಸ್ ಸಂಘದ ಅಧ್ಯಕ್ಷ ಬಸವರಾಜ್ ಮೇಲುಗಿರಿ ಆಗ್ರಹಿಸಿದರು . ಅವರು ಕುರುಗೋಡು ಪಟ್ಟಣದ ಕ್ರೀಡಾಂಗಣ ದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಂಗಳಮುಖಿಯರಿಗೆ ದಿನನಿತ್ಯ ಬಳಕೆಗೆ ಅಗತ್ಯವಿರುವ ಅಕ್ಕಿ ,ಎಣ್ಣಿ, ಸೋಪು ,ಸಾಂಬಾರು, ಪದಾರ್ಥಗಳು ,ಮಾಸ್ಕ್ , ಸಾನಿಟೈಸರ್ ಹಾಗೂ ಇನ್ನಿತರ ಪರಿಕರಗಳನ್ನು ನೀಡಿ ಮಾತನಾಡಿದರು . ಇದೇ ಸಂದರ್ಭದಲ್ಲಿ ಮಾತನಾಡಿದ ಮಂಗಳಮುಖಿಯರ ಅಧ್ಯಕ್ಷೆ ಶಶಿಕಲಾ ಈ ಲಾಕ್ ಡೌನ್ ಸಂಧರ್ಭದಲ್ಲಿ ಸರ್ಕಾರ ನಮ್ಮನ್ನು ಕಡೆಗಣಿಸಿದ್ದು ಜೀವನ ದುಸ್ತರವಾಗಿದೆ. ಆದರೆ ಈ ಹೆಲ್ಪಿಂಗ್ ಹ್ಯಾಂಡ್ಸ್ ಸಂಘದ ಸದಸ್ಯರು ನಮ್ಮ ಕಷ್ಟ ಕ್ಕೆ ನೆರವು ನೀಡಿದ್ದು ಇವರಿಗೆ ದೇವರು ಒಳ್ಳೆಯದು ಮಾಡಲೆಂದು ಹಾರೈಸಿದರು. ಈ ಸಂಧರ್ಭದಲ್ಲಿ ಸಂಘದ ಸದಸ್ಯರಾದ ಮಂಜುನಾಥ ಪಂಪಾಪತಿ .V ಪಂಪಾಪತಿ . ರಾಘವೇಂದ್ರ ಬಸವರಾಜ್ ಬಲ್ಲೂರು ಶಿಕ್ಷಕರು ಶಿವು ಉಪ್ಪಾರ ಕುಮಾರಮಲ್ಲಿಕಾರ್ಜುನ.ಯು. ರಾಮಾಂಜಿನಿ.ಜೆ ಇನ್ನಿತರರು ಉಪಸ್ಥಿತರಿದ್ದರು.

  ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *