ದೇವದುರ್ಗಾ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ CITU, ಸಂಸ್ಥಾಪನಾ ದಿನಾಚರಣೆ.

Spread the love

ದೇವದುರ್ಗಾ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ CITU, ಸಂಸ್ಥಾಪನಾ ದಿನಾಚರಣೆ.

ಸಿಐಟಿಯು 51ನೇ ಸಂಸ್ಥಾನ ದಿನಾಚರಣೆಯನ್ನು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ (ಜಾಲಹಳ್ಳಿ): ಲಾಕ್ ಡೌನ್ ಪರಿಹಾರ ನೀಡಿ ಜೀವನ ರಕ್ಷಿಸಿ  ಉದ್ಯೋಗ ವೇತನ ಸಂರಕ್ಷಿಸಿ ಎಂಬ ಬೇಡಿಕೆಯೊಂದಿಗೆ ರವಿವಾರ ಸಿಐಟಿಯು 51ನೇ ಸಂಸ್ಥಾಪನಾ ದಿನಾಚರಣೆಯನ್ನು ಸಿಐಟಿಯು ಕಛೇರಿಯಲ್ಲಿ ಆಚರಿಸಲಾಯಿತು ಸಿಐಟಿಯು ಕಾಯಾ೯ಲಯದಲ್ಲಿ ಮುಖಂಡರು ಕೈಯಲ್ಲಿ ಕಾಮಿ೯ಕರ ಬೇಡಿಕೆಗಳುಳ್ಳ ಬಾವುಟ ಮತ್ತು ಭಿತ್ತಿ ಪತ್ರ ಪ್ರದಶಿ೯ಶಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಮಾತನಾಡಿ,ದುಡಿಯುವ ವಗ೯ ಸಂಘರ್ಷದ ಮೂಲಕ ಹಾಗೂ ಸಾಮೂಹಿಕ ವಗ೯ ಹೋರಾಟ ಗಳಿಂದ ಮಾತ್ರ ಶೋಷಣೆಗೆ ಮುಕ್ತಿ ಕಾಣಲು ಸಾಧ್ಯವೆಂಬ ಸ್ಪಷ್ಟವಾದ ಕಣ್ಣೋಟದೊಂದಿಗೆ ಮೇ 30 , 1970 ರಲ್ಲಿ ಸ್ಥಾಪನೆಗೊಂಡ ಸಂಘಟನೆ ದೇಶದ ಪ್ರಮುಖ ಕಾಮಿ೯ಕ ಸಂಘಟನೆಯಾಗಿ ಹೊರಹೋಮ್ಮಿದೆ‌.ಕಳೆದ 51ವಷ೯ಗಳಲ್ಲಿ ದೇಶದ ಕಾಮಿ೯ಕರನ್ನು ಸಂಘಟಿಸಿ ಅವರ ಶೋಷಣೆ ಕೊನೆಗಾಣಿಸಲು ನಿರಂತರವಾಗಿ ಹೋರಾಟ ಮಾಡುತ್ತಿರುವ ಸಂಘಟನೆಯಾಗಿದೆ ಅಲ್ಲದೆ ಸಮಾಜವಾದದ ಅಂಶಗಳನ್ನು ಎತ್ತಿ ಹಿಡಿಯುತ್ತಾ,ಎಲ್ಲಾ ಶೋಷಣೆ ಮುಕ್ತ ಸಮಾಜ ನಿರ್ಮಿಸುವುದು CITUನ ಗುರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶಕುಂತಲಾ ದೇಸಾಯಿ, ರಮಾ ದೇವಿ, ಮರಿಯಮ್ಮ,ಸುಲೋಚನ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

  ವರದಿ – ಆನಂದ್ ಸಿಂಗ್ ಕವಿತಾಳ

Leave a Reply

Your email address will not be published. Required fields are marked *