ಶೌಚ ಸಿಂಚನದಲ್ಲಿ ಕೋವಿಡ್ ಕೇರ್ ಸೆಂಟರ್.!? ಕೋಮದಲ್ಲಿ-ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು.

Spread the love

ಶೌಚ ಸಿಂಚನದಲ್ಲಿ ಕೋವಿಡ್ ಕೇರ್ ಸೆಂಟರ್.!? ಕೋಮದಲ್ಲಿಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು.

ವಿಜಯನಗರ ಜಿಲ್ಲೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ಹಿಂಭಾದಲ್ಲಿರುವ ಕೋವಿಡ್ ಕೇರ್ ಸೆಂಟರ್,ಶೌಚಾಲಯದ ದುರ್ನಾಥದಲ್ಲಿದ್ದು ಸೋಂಕಿತರು ಹಾಗೂ ಚಿಕಿತ್ಸೆ ನೀಡುವವರು ಈ ದುರ್ನಾಥದಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ.ಇದು ತೀರಾ ಅಚ್ಚರಿ ಎನಿಸಿದರೂ ಅಷ್ಟೇ ನಿಜವಾಗಿದೆ ಕಹಿ ಸತ್ಯವಾಗಿದೆ,ಕೋವಿಡ್ ಕೇರ್ ಸೆಂಟರ್ ಗೆ ತೆರಳುವವರು ರಸ್ತೆಯಲ್ಲಿ ಹರಿಯುತ್ತಿರುವ ಮಲ ಮೂತ್ರಾದಿಗಳಲ್ಲಿ ಕಾಲಿಟ್ಟು ತೆರಳಬೇಕಿದೆ. ಆಸ್ಪತ್ರೆಯ ಶೌಚಗುಂಡಿಗಳು ತುಂಬಿ  ಮಲ ಮೂತ್ರ ರಸ್ಥೆಯಲ್ಲಿ ಹರಿದಾಡುತ್ತಿದೆ, ಕಾಲುವೆಗಳು ತ್ಯಾಜ್ಯ ನೀರು ಕಸ ತುಂಬಿ ಕೊಳೆತು ದುರ್ನಾಥ ಬೀರುತ್ತಿವೆ. ಆಸ್ಪತ್ರೆಯ ಅಂಗಳ ಅನುಪಯುಕ್ತ ಗಿಡಗಂಟೆಗಳಿಂದ ತುಂಬಿದ್ದು, ಆಸ್ಪತ್ರೆ ಹಿಂಭಾಗದಲ್ಲಿ ಕಸದ ರಾಶಿ ಹರಡಿಕೊಂಡಿದೆ.ತ್ಯಾಜ್ಯ ವಸ್ಥುಗಳು ತುಂಬಿಕೊಂಡಿವೆ ಹಾಗೂ ಶೌಚ ನೀರು ರಸ್ಥೆಯಲ್ಲಿ ನಿಂತು ಕೆಸರು ಗದ್ದೆಯಾಗಿದೆ,ಹಂದಿಗಳ ಮತ್ತು ಸೊಳ್ಳೆ ಕ್ರಿಮಿ ಕೀಟಗಳ ತಾಣವಾಗಿದೆ ಕೋವಿಡ್ ಕೇರ್ ಸೆಂಟರ್,ಆಸ್ಪತ್ರೆ ಆವರಣದ ಬಹುಭಾಗವೆಲ್ಲಾ ಶೌಚದ ದುರ್ನಾಥ ಹರಡಿದೆ.ಈ ದುಸ್ಥಿತಿ ಹಲವು ತಿಂಗಳುಗಳಿಂದ ಇದ್ದು ಸಂಬಂಧಿಸಿದಂತೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ,ಆದರೆ ಯಾವುದೇ ಅಧಿಕಾರಿಗಳು ಈ ವರೆಗೂ ಸ್ಥಳಕ್ಕೆ ಆಗಮಿಸಿಲ್ಲ ಕ್ರಮ ಜರುಗಿಸಿಲ್ಲ. ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ದುರ್ಗತಿ ಇದಾಗಿದ್ದು,ಕೋವಿಡ್ ರೋಗಿಗಳು ಹಾಗೂ ಅವರೊಂದಿಗೆ ನೆರವಿಗೆ ಬರುವವರು ಮತ್ತು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವವರು. ನಿಜಕ್ಕೂ ನಿತ್ಯ ಅಕ್ಷರಸಹಃ ನರಕ ದರ್ಶನ ಪಡೆಯುತ್ತಿದ್ದಾರೆ, ಜನಪ್ರೀಯ ಶಾಸಕರು ಹಾಗೂ ತಾಲೂಕಿನ ಪ್ರಭಾವಿ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಶೀಘ್ರವೇ ತಹಶಿಲ್ದಾರರು ಖುದ್ದು ಪರಿಶೀಲಿಸಬೇಕಿದೆ. ಆಸ್ಪತ್ರೆಯ ಹಿಂಭಾಗದಲ್ಲಿ ನೈರ್ಮಲ್ಯತೆ ಮರೀಚಿಕೆಯಾಗಿದ್ದು, ಶೌಚಾಲಯ ಗುಂಡಿಗಳು ತುಂಬಿ ಶೌಚ ರಸ್ಥೆಯಲ್ಲಿ ಹರಡಿದ್ದು ಮಲ ಮೂತ್ರ ರಸ್ಥೆಯಲ್ಲಿ ತುಂಬಿ ಹೋಗಿದೆ. ನೂರು ಹಾಸಿಗೆಯ ಆಸ್ಪತ್ರೆಯ ಮುನ್ನೋಟ ಎಷ್ಟು  ಸುಂದರವಾಗಿದೆಯೋ ಹಿನ್ನೋಟ ಅಷ್ಟೇ ಹಾಗೂ ಭಯಾನಕ  ಭೀಬತ್ಸವಾಗಿದೆ.ಪಟ್ಟಣ ಸೇರಿದಂತೆ ತಾಲೂಕಿನ ಹತ್ತು ಹಲವು ಸಂಘಟನೆಗಳ ಪದಾಧಿಕಾರಿಗಳು,ಸಂಬಂಧಿಸಿದ ಉನ್ನತಾಧಿಕಾರಿಗಳ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *