ಜನಸೇವೆಯೇ ನನ್ನ ವೃತ್ತಿ ಧರ್ಮ ಎಂದ್  ಹೊಸಳ್ಳಿ ಗ್ರಾಮದ ಸದ್ದಾಂ ಹುಸೇನ್ ಕಳ್ಳಿಮನಿ. 

Spread the love

ಜನಸೇವೆಯೇ ನನ್ನ ವೃತ್ತಿ ಧರ್ಮ ಎಂದ್  ಹೊಸಳ್ಳಿ ಗ್ರಾಮದ ಸದ್ದಾಂ ಹುಸೇನ್ ಕಳ್ಳಿಮನಿ.

ಕೊಪ್ಪಳ :ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಸದ್ದಿಲ್ಲದೆ ಜನಾ ಸೇವೆಗೆ ನಿಂತ ಸದ್ದಾಮ್ ಹುಸೇನ್ ಕಳ್ಳಿಮನಿ ಹಾಗೂ ಗೆಳೆಯರ ಬಳಗ ಗವಿಶ್ರೀಗಳ ಆದರ್ಶ ಹಾಗೂ ತತ್ವಗಳನ್ನು ಮೈಗೂಡಿಸಿಕೊಂಡು ಮುನಿರಾಬಾದ್ ಠಾಣೆ ಯಂಗ  ಖಡಕ್ ಅಧಿಕಾರಿ   ಸುಪ್ರೀತ್ ಪಟೇಲ್ ಅವರ  ಮಾರ್ಗದರ್ಶನದೊಂದಿಗೆ ಬಡವರ ಸಹಾಯಕ್ಕೆ ಮುಂದಾದ ತಂಡವೊಂದು ಹೊಸಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ .

ಅನ್ನದಾನ ಶ್ರೇಷ್ಠದಾನ :- ಯಾವುದೇ ಸಮಾರಂಭಗಳಲ್ಲಿ ಅನ್ನ ಉಳಿದರೆ ಅದನ್ನು ಅವರಿಂದ ಪಡೆದುಕೊಂಡು ಅನಾಥಾಶ್ರಮಗಳಿಗೆ ನಿರ್ಗತಿಕರಿಗೆ ಉಣಬಡಿಸುವ ಮೂಲಕ  ಅನ್ನದಾನ ಅದನ್ನು ಹಸಿದವರಿಗೆ ತಲುಪಿಸುವ ಜವಾಬ್ದಾರಿ ಹೊತ್ತಿದ್ದಾರೆ. ಕಡುಬಡತನದಲ್ಲಿ ಬೆಳೆದ ಸದ್ಧಾಮ್ ಹುಸೇನ್ ಕಳ್ಳಿಮನಿ ಅವರು ಇಂದು ಅಂತಹ ಎಷ್ಟೋ ಬಡವರ ಬಾಳಿನ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ತಮ್ಮ ಕೈಲಾದಷ್ಟು ಸಹಾಯ ಸಹಕಾರ ಮಾಡುವುದನ್ನು ಗಮನಿಸಿದ ಊರಿನ ಗುರುಹಿರಿಯರು ಗ್ರಾಮಸ್ಥರು ಯುವಕರು ಸದ್ದಾಮ್ ಹುಸೇನ್ ಅವರೊಂದಿಗೆ ಕೈಜೋಡಿಸಿ ಬಡವರ ಸಹಾಯಕ್ಕೆ ಮುಂದಾಗಿದ್ದಾರೆ .ತಮ್ಮ ಕುಟುಂಬದ ಉಪಯೋಗಕ್ಕೆ ತೆಗೆದುಕೊಂಡಿರುವ ಕಾರನ್ನು ಸಹ ಹೊಸಳ್ಳಿ ಗ್ರಾಮವಾಗಲಿ ಅಥವಾ ಸುತ್ತಮುತ್ತಲಿನ ಗ್ರಾಮದ  ಆರೋಗ್ಯದ ತೊಂದರೆ ಕಾಣಿಸಿಕೊಂಡರೆ  ಆಂಬ್ಯುಲೆನ್ಸ್  ಥರ   ತಮ್ಮ ಸ್ವಂತ ಕಾರಿನಲ್ಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ .

ಫ್ರೆಂಡ್ ಶಿಪ್ ಈಸ್ ನೆವರ್ ಎಂಡ್ ಬಾಂಡ್ :- ಎನ್ನುವ ಹಾಗೆ ಉತ್ತಮ ಸ್ನೇಹಿತರನ್ನು ಹೊಂದಿದ್ದ ಇವರು ಇವರ ಸಹಕಾರದಿಂದ ಪ್ರೇರಿತಗೊಂಡ ಸ್ನೇಹಿತರ ಗುಂಪು ಇವರೊಂದಿಗೆ ಕೈಜೋಡಿಸಿ ಬಡವರ ಕಣ್ಣೀರು ಒರೆಸುವ ಕೆಲಸವನ್ನು 2ವರ್ಷಗಳಿಂದ ಕಾಣದ ಕೈಗಳ ತರ ಮಾಡಿಕೊಂಡು ಬಂದಿದ್ದಾರೆ .

ಲೈಫ್ ಈಸ್ ಶಾರ್ಟ್ ಮೇಕೆ ಸ್ವೀಟ್ :-  ಎನ್ನುವ ಹಾಗೆ ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಕೊಟ್ಟಿದ್ದು ಕೆಟ್ಟಿತೆನಬೇಡ ಸರ್ವಜ್ಞ ಎಂಬಂತೆ ಬಡವರಿಗೆ, ದೀನದಲಿತರಿಗೆ, ಹಕ್ಕಿಪಿಕ್ಕಿ ಜನಾಂಗದವರಿಗೆ ಹಸಿವು ನೀಗಿಸುವ ಮೂಲಕ ಹೊಸಳ್ಳಿ ಗ್ರಾಮಕ್ಕೆ ಮಾದರಿ ಯುವಕ ತಂಡವಾಗಿ ಹೊರ ಹೊಮ್ಮಿದ್ದಾರೆ .

ಸೇವೆಗೆ ಮನಸೋತ ಮನಸ್ಸುಗಳು:- ಇವರ ಸೇವೆ ಹೀಗೆ ಮುಂದುವರೆಯಲಿ ಎಂದು ನವ ಸಮಾಜ ನಿರ್ಮಾಣದ ಯುವ ಮನಸ್ಸುಗಳು ಇವರ ಸೇವೆಗೆ ಶುಭ ಹಾರೈಸಿದ್ದಾರೆ.

  ವರದಿ – ಸಂಪಾದಕೀಯ.

Leave a Reply

Your email address will not be published. Required fields are marked *