* “ನೃತ್ಯ ಹಬ್ಬ ೨೦೨೫” ಸಾಂಸ್ಕೃತಿಕ ಕಾರ್ಯಕ್ರಮ*
ಬೆಂಗಳೂರು: “ಸರ್ವ” ಸಂಸ್ಥೆ, ವಿಐಪಿ ಸ್ಟುಡಿಯೋ- ಮಾ ಅಕಾಡೆಮಿ ಸಾಂಸ್ಕೃತಿಕ ವೇದಿಕೆ ಜಂಟಿ ಸಹಯೋಗದಲ್ಲಿ “ನೃತ್ಯ ಹಬ್ಬ ೨೦೨೫” ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ,ಕಲಾವಿದರು ಪಾಲ್ಗೊಂಡು ಪ್ರತಿಭಾ ಪ್ರದರ್ಶನೊಂದಿಗೆ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇದಿಕೆಯಲ್ಲಿ ಮೂಕ ಪ್ರಾಣಿ ಪಕ್ಷಿಗಳಿಗೆ ವೈಯಕ್ತಿಕವಾಗಿ ನೆರವಾಗುವ, ಅದರ ನೋವನ್ನು ಹಿಂಗಿಸುವ, ಸಹೃದಯಿ ಮಾನವೀಯ ಮೌಲ್ಯಗಳನ್ನು ಮೆರೆದ ವ್ಯಕ್ತಿಗಳಿಗೆ “ಸರ್ವರತ್ನ” ಪ್ರಶಸ್ತಿಯನ್ನು ಹಾಗೆಯೇ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗೈದ ಸಾಧಕರಿಗೆ ,ಸಂಸ್ಥೆಗಳಿಗೆ “ಸರ್ವಶ್ರೇಷ್ಠ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆದಿಚುಂಚನಗಿರಿಯ ವಿಜಯನಗರ ಶಾಖಾ ಮಠದ ಪೂಜ್ಯಶ್ರೀ ಸೌಮ್ಯನಾಥ ಸ್ವಾಮೀಜಿ ಅವರ ಸಾನಿಧ್ಯ ಮತ್ತು ಆಶೀರ್ವಾದದಲ್ಲಿ ಆರಂಭಗೊಂಡ ‘ನೃತ್ಯಹಬ್ಬ’ ವೇದಿಕೆಯಲ್ಲಿ ಭರತನಾಟ್ಯ, ಪಾಶ್ಚಿಮಾತ್ಯ ನೃತ್ಯ ಒಳಗೊಂಡಂತೆ ವಿವಿಧ ಪ್ರಕಾರಗಳ ನೃತ್ಯ ಸ್ಪರ್ಧೆಗಳು ಪ್ರದರ್ಶನಗೊಂಡವು. ಇದಕ್ಕೆ ಪೂರಕವಾಗಿ ರಾಜ್ಯಮಟ್ಟದ ತೀರ್ಪುಗಾರರು ಉಪಸ್ಥಿತರಿದ್ದು ಮೂರು ಪ್ರಮುಖ ಪ್ರತಿಭಾವಂತ ತಂಡಗಳಿಗೆ ಪ್ರಶಸ್ತಿ, ಬಹುಮಾನಗಳನ್ನು ವಿತರಿಸಲಾಯಿತು. “ಸರ್ವ” ಸಂಸ್ಥೆಯ ಅಧ್ಯಕ್ಷರಾದ ಡಾ. ಜಯಶ್ರೀ, ಕಾರ್ಯದರ್ಶಿ ಉಪೇಂದ್ರ ಕುಮಾರ್ ಆರ್ ಗೌಡ, ವಿಐಪಿ ಸ್ಟುಡಿಯೋ ಮಾ ಅಕಾಡೆಮಿಯ ಮುಖ್ಯಸ್ಥರಾದ ಚಲನಚಿತ್ರ ನಿರ್ದೇಶಕ ಬಿ.ಪಿ ಹರಿಹರನ್ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿದ್ದರು. ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿ ಕಲಾವಿದರಿಗೂ ವಿಜಯನಗರ ಮಾರುತಿ ಮೆಡಿಕಲ್ಸ್ ಗೋಸೆವಕ ಮಹೇಂದ್ರ ಮುಣೋತ್ ಅವರು ಬಹುಮಾನ, ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಕಲಾ ಎಲ್ -ಸರ್ವರತ್ನ ಪ್ರಶಸ್ತಿ , ಶ್ರೀಮತಿ ಚೈತನ್ಯ ಸುಬ್ರಮಣ್ಯಂ -ಸರ್ವ ರತ್ನ ಪ್ರಶಸ್ತಿ , ಶ್ರೀ ಶಿವ ಗೋ ಸೇವಾ ಮಂಡಲ್ ಚಾರಿಟಬಲ್ ಟ್ರಸ್ಟ್ -ಸರ್ವ ಶ್ರೇಷ್ಠ ಪ್ರಶಸ್ತಿ , ಇಕ್ಬಾಲ್ ಪಾಷಾ -ವಿಐಪಿ ಶಿಕ್ಷಣರತ್ನ ಪ್ರಶಸ್ತಿ , ಡಾ.ಉದಯ್ ವಸಂತ್ ಪೆಡ್ನೇಕರ್ -ಸರ್ವರತ್ನ ಪ್ರಶಸ್ತಿ , ಡಾ. ಪ್ರಭು ಗಂಜಿಹಾಳ -ಸರ್ವರತ್ನ ಪ್ರಶಸ್ತಿ , ಶ್ರೀಮತಿ ರೇಖಾದಾಸ್- ಸರ್ವರತ್ನ ಪ್ರಶಸ್ತಿ , ಶಿವಕುಮಾರ ಆರಾಧ್ಯ -ಸರ್ವರತ್ನ ಪ್ರಶಸ್ತಿ , ಶ್ರೀಮತಿ ಮಮತಾ ಜೆ ಶೆಟ್ಟಿ -ಸರ್ವರತ್ನ ಪ್ರಶಸ್ತಿ , ದಯಾನಂದ್ ಶಂಕರ್ -ಸರ್ವರತ್ನ ಪ್ರಶಸ್ತಿ , ಅರವಿಂದ್ ದ್ವಾರಕನಾಥ್ -ಸರ್ವರತ್ನ ಪ್ರಶಸ್ತಿ ,ಎಚ್.ಎಸ್.ಆರ್ ಸಿಟಿಸನ್ ಫಾರಂ – ಸರ್ವಶ್ರೇಷ್ಠ ಪ್ರಶಸ್ತಿ , ರಾಮಣ್ಣಗೌಡ-ಸರ್ವರತ್ನ ಪ್ರಶಸ್ತಿ , ಮಹೇಂದ್ರ ಸಿಂಗ್ ಬನ್ನೂರ್- ಸರ್ವರತ್ನ ಪ್ರಶಸ್ತಿ , ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ – ಸರ್ವರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಚಲನಚಿತ್ರ ನಟಿ ರೇಖಾದಾಸ, ಚಿತ್ರನಟ ಶಿವಕುಮಾರ ಆರಾಧ್ಯ ,ನಿರ್ದೇಶಕಿ ಎಸ್.ರಶ್ಮಿ ಸಿನಿ ಪಯಣದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮಕ್ಕೆ ಅನ್ನದಾಸೋಹವನ್ನ ‘ತಗ್ಗಟ್ಟಿ’ಚಲನಚಿತ್ರದ ನಿರ್ಮಾಪಕರಾದ ಚಂದ್ರಮ್ಮ ಚೆನ್ನಾಚಾರಿ , ಕುಟುಂಬಸ್ಥರು ನಿರ್ವಹಿಸಿದರು.
** ಡಾ.ಪ್ರಭು ಗಂಜಿಹಾಳ.