ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ : ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಗೆ ಸೇರಿದ ದ್ವಿತಾ ಮೋಹನ್.
ಕಂಪ್ಲಿ: ಸ್ಥಳೀಯ ನಿವಾಸಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ, ಸೌಮ್ಯ ಶ್ರೀ ದಂಪತಿಯ ದ್ವೀತಿಯ ಪುತ್ರಿ ದ್ವಿತಾ ಮೋಹನ್ (6 ತಿಂಗಳು) ರು ಯಾವುದೇ ಸಹಾಯ, ಬಾಹ್ಯ ಬೆಂಬಲವಿಲ್ಲದೆ ಅತಿ ಹೆಚ್ಚು ಸಮಯ ಕುಳಿತುಕೊಳ್ಳುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಪುಸ್ತಕದಲ್ಲಿ ದಾಖಲೆ ಮಾಡಿದ್ದಾಳೆ,
ಚಿಕ್ಕ ವಯಸ್ಸಿನಲ್ಲಿಯೇ ದ್ವಿತಾ ಮೋಹನ್ ಅವರು ಜೂನ್ 28, 2025 ರಂದು ಬೆಂಗಳೂರಿನಲ್ಲಿ ಯಾವುದೇ ಬಾಹ್ಯ ಬೆಂಬಲ ಅಥವಾ ಸಹಾಯವಿಲ್ಲದೆ 44 ನಿಮಿಷ ಮತ್ತು 8 ಸೆಕೆಂಡುಗಳ ಕಾಲ ಕುಳಿತುಕೊಂಡು ಗಮನಾರ್ಹ ಸಮತೋಲನ ಮತ್ತು ಶಕ್ತಿಯನ್ನು ಪ್ರದರ್ಶಿಸಿ ಸಾಧಿಸಿದ್ದಾರೆ.
ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರ ಅಸಾಧಾರಣ ಸಾಮರ್ಥ್ಯವು ಅವರ ದೈಹಿಕ ಸಮನ್ವಯ ಮತ್ತು ಆರಂಭಿಕ ಬೆಳವಣಿಗೆಯ ಮೈಲಿಗಲ್ಲು ಸಾಧನೆಗಳನ್ನು ಎತ್ತಿ ತೋರಿಸುತ್ತದೆ.
ಈ ಅದ್ಭುತ ಸಾಧನೆಯೊಂದಿಗೆ, ಅವರು ಅಧಿಕೃತವಾಗಿ ವರ್ಲ್ಡ್‌ವೈಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ, ಅನೇಕ ಯುವ ಪೋಷಕರನ್ನು ಪ್ರೇರೇಪಿಸಿದ್ದಾರೆ ಮತ್ತು ಶಿಶು ಸಾಮರ್ಥ್ಯಗಳ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆoದು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಸಂಪಾದಕೀಯ ತಿಳಿಸಿದ್ದಾರೆ,
ಈ ಹಿಂದೆ ಮೋಹನ್ ಕುಮಾರ್ ದಾನಪ್ಪನವರು ರಾಷ್ಟ್ರಮಟ್ಟದಲ್ಲಿ ಮ್ಯಾರಥಾನ್ ಮಾಡಿ ದಾಖಲೆ ಮಾಡಿರುತ್ತಾರೆ, ಇವರ ಹಿರಿಯ ಪುತ್ರಿ ದಿಶಾ ಮೋಹನ್ ರು ಫ್ಯಾನ್ಸಿ ಡ್ರೆಸ್ ಮತ್ತು ಭರತನಾಟ್ಯದಲ್ಲಿ ದಾಖಲೆ ಮಾಡಿದ್ದು ಪ್ರಸ್ತುತ ಚಿಕ್ಕ ವಯಸ್ಸಿನಲ್ಲಿ ದ್ವಿತಾ ಮೋಹನ್ ರ ಈ ಸಾಧನೆಯನ್ನು ಕಂಡು ಅಜ್ಜ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ತಂದೆ ಮೋಹನ್ ಕುಮಾರ್ ದಾನಪ್ಪ, ತಾಯಿ ಸೌಮ್ಯಶ್ರೀ ಮೋಹನ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ!