ಶೀರ್ಷಿಕೆ: ತ್ರಿಲೋಕದ ಜಗನ್ನಾಥ ಪೋರಿ.
ತ್ರಿಲೋಕದ ಜಗನ್ನಾಥ ಪೂರಿ
ಕಣ್ಣಿಗೆ ನೋಡಲು ಸುಂದರ
ಯಾತ್ರೆಗೆ ತುಂಬಾ ಕಾತರ
ದರ್ಶನಕ್ಕೆ ಸಾಗಿದೆ ನಿರಂತರ
ಲಕ್ಷ ಲಕ್ಷ ನಿನ್ನ ಭಕ್ತರು
ಜಾತ್ರಾ ನೋಡಲು ಬರುತ್ತಿರುವ
ಬಡವ ಬಲ್ಲಿದೆಂಬಲರ
ನಿನ್ನ ಬರುವ ಭಕ್ತಿ ಭಾವಕರು
ವೈಭವ ನಿನ್ನ ಮೆರವಣಿಗೆ
ಕೃಷ್ಣ ಬಲರಾಮ ಸುಭದ್ರ ಒಟ್ಟಾಗಿ
ಕಾಣುತ್ತಿರುವ ದೇವರ ಸ್ವರೂಪದಲ್ಲಿ
ಭಕ್ತರ ದರ್ಶನಕ್ಕೆ ನಿನ್ನ ಪಾದದಲ್ಲಿ
ಹಲವಾರು ಪವಾಡದ ಮಹಿಮೆ
ಜಗ ಲೋಕದ ಉದ್ಧಾರದಲ್ಲಿ
ಆಶೀರ್ವಾದ ನಿನ್ನ ಕೃಪಾದಲ್ಲಿ
ಪವಿತ್ರ ಭಕ್ತಿಯ ಭಕ್ತರ ಮನದಲ್ಲಿ
ವೈಭವ ತ್ರೀ ರಥೋತ್ಸವದಲ್ಲಿ
ನಿನ್ನ ದರ್ಶನಕ್ಕೆ ಲಕ್ಷ ಜನ ಸಾಗರ
ಹರೇ ಜೈ ಘೋಷ ಭಕ್ತರ ಮನದಲ್ಲಿ
ಜಗನಾಥ ಪೂರಿ ದರ್ಶನದಿಂದ ಮೋಕ್ಷನಾಗುವ ಮಾನವ ಜನ್ಮ ಪಾವನದಲ್ಲಿ
ಶ್ರೀ ವಿಜಯ ಕುಮಾರ ಚಟ್ಟಿ