‘ಅದೇ ಸಿಂಧೂರ ‘
ಕಡೆಗಣಿಸಬೇಡಿ ಹಣೆಯ ಸಿಂಧೂರ
ಶಾಂತಿಯ ಮಂತ್ರವೂ
ಸಮೃದ್ಧಿಯ ಸಂಕೇತವೂ
ಅದೇ ಸಿಂಧೂರ.
ಮನಸೊಪ್ಪಿ ಮನಮೆಚ್ಚಿದವನಿಗಾಗಿ
ಮನೆಯವರ ಮಂತ್ರಾಕ್ಷತೆಯಲ್ಲಿ
ಮುಗುಳ್ನಗೆಯಿಂದ ಧರಿಸಿದೆನು ಹಣೆಗೆ
ಅದೇ ಸಿಂಧೂರ
ನೀ ರಕ್ಕಸತೆಯ ಮೆರೆದು
ಶಾಂತಿಯ ನೆಲದಿ ಅಸುರತನದಲಿ
ಎನ್ನ ಕಣ್ಣೀರಲಿ ಅಳಿಸಿದ್ದು ನೀ
ಅದೇ ಸಿಂಧೂರ
ಎನ್ನ ತಾಯಿ ಬಂಜೆಯಲ್ಲವೋ
ತನ್ನ ಕರುಳ ಬಳ್ಳಿಗಳಿಗೆ ಮತ್ತೆ ಮುತ್ತೈದೆತನದ ಸಂಕೇತವಾಗಿ ನೀಡಿದ್ದಾಳೆ
ಅದೇ ಸಿಂಧೂರ
ತನ್ನ ಶ್ರೀಮಂತಿಕೆಯ ಸಂಕೇತವಾಗಿ
ದೂತರ ಹುಟ್ಟಡಗಿಸಿದ ದ್ಯೋತಕವು
ಅದೇ ಸಿಂಧೂರ
ಗರ್ವದಲಿ ಹಚ್ಚುತ್ತಿರುವೆ ಇಂದು
ಭಾರತಾಂಬೆಯ ಗೆಲುವ ನೆನೆದು
ಧರಿಸುವೆ ಸಂತಸದಿ
ಅದೇ ಸಿಂಧೂರ
ಶ್ರೀಮತಿ ಸುಮಾ ಶಿವಕುಮಾರ್ (ಸಹ ಶಿಕ್ಷಕರು)