ಕುಷ್ಟಗಿ ತಾಲೂಕಿನ ಕಿಲ್ಲಾರಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಶರಣಗೌಡ ಹನಮಗೌಡ ಪೋಲಿಸ್ ಪಾಟೀಲ ಇವರ ನಡೆ ಗ್ರಾಮ ಪಂಚಾಯತ ಸದಸ್ಯರ ಮೇಲೆ ದೌರ್ಜನ್ಯವನ್ನು ಎಸುಗುತ್ತಿದ್ದಾರೆ ಇವರ ದೌರ್ಜನ್ಯದ ನಡೆಯಿಂದ ನಮಗೆ ಸಾಕಾಗಿದೆ ಇವರ ವರ್ತನೆಯಿಂದ ಎಲ್ಲಾ ಗ್ರಾಮ ಪಂಚಾಯತ ಸದಸ್ಯರಿಗೆ ಬಹಳ ಬೇಜಾರು ತಂದಿದ್ದು ಇವರನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ಕಿಲ್ಲಾರಟ್ಟಿ ಗ್ರಾಮ ಪಂಚಾಯತ ಸದಸ್ಯ ಕಳಮಳ್ಳಿ ಗ್ರಾಮದ ಭೀಮಣ್ಣ ಹಾಗೂ ಎಲ್ಲಾ ಸದಸ್ಯರು ಆಗ್ರಹಿಸಿದ್ದಾರೆ. ಶರಣಗೌಡ ಪಾಟೀಲ ಇವರು ಅಧ್ಯಕ್ಷ ಸ್ಥಾನಕ್ಕೆ ಕುಳಿತಾಗಿನಿಂದಲು ಅಧಿಕಾರವನ್ನು ದುರುಪಯೋಗ ಪಡೆದುಕೊಂಡು ಗ್ರಾಮ ಪಂಚಾಯತ ಸದಸ್ಯರ ಮೇಲೆ ದೌರ್ಜನ್ಯ ಮಾಡಿ ಅಧಿಕಾರದ ಆಮಿಷದಿಂದ ದರ್ಪ ತೋರುತ್ತಾ ಬೋಗಸ್ ಬಿಲ್ ಎತ್ತುಳಿ ಮಾಡುತ್ತಿದ್ದಾರೆ ಮತ್ತು ಪಿಡಿಓಗಳಿಗೆ ಹಾಗೂ ಸಿಬ್ಬಂದಿಗಳಿಗೆ ಬೆದರಿಕೆ ಹಾಕುತ್ತಾರೆ ಎಂದು ಸದಸ್ಯ ಬಿಮಣ್ಣ ದೂರಿದ್ದಾರೆ. ಮತ್ತು ಸುಮಾರು 4 ತಿಂಗಳಗಳ ಹಿಂದೆ 15 ನೇ ಹಣಕಾಸಿನ ಮಾಹಿತಿ ಕೊಡಲು ಅರ್ಜಿ ನೀಡಿದ್ದರೂ ಇಲ್ಲಿಯವರೆಗೆ ಮಾಹಿತಿ ನಿಡಿರುವದಿಲ್ಲದಿರುವದು ಭ್ರಷ್ಟಾಚಾರ ನಡೆದಿರಬಹುದು ಎಂದು ಆರೋಪಿಸಿದರು. ಗ್ರಾಮ ಪಂಚಾಯತ ಕಡತಗಳ ಬಗ್ಗೆ ನಾನು ಹೇಳಿದಂತೆ ಮಾಡಬೇಕು ಮತ್ತು ನಾನು ಹೇಳಿದ್ದೆ ಆಗಬೇಕು ಎಂದು ಹೇಳುತ್ತಾರೆ ಅಧಿಕಾರದ ಆಮಿಷದಿಂದ ಗ್ರಾಮ ಪಂಚಾಯತ ಸದಸ್ಯರಿಗೆ ಆದೇಶ ಮಾಡುತ್ತಾರೆ. ಇವರ ಈ ವರ್ತನೆಯುಂದ ಗ್ರಾಂ ಪಂಚಾಯತ್ ಸದಸ್ಯರಿಗೆ ಸಾಕು ಸಾಕಾಗಿದೆ ಆದ್ದರಿಂದ ತಾಲೂಕು ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ *ಪಂಚಾಯತಿಗೆ ಬೇಟಿ ನೀಡಿ ಪರಿಶೀಲನೆ ನೆಡೆಸಿ ಇವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೆಳಗೆ ಇಳಿಸಬೇಕು. ಮತ್ತು ಗ್ರಾಮ ಪಂಚಾಯತ ವ್ಯವಹಾರಗಳನ್ನು ನಿಲ್ಲಿಸಬೇಕು ಎಂದು ಗ್ರಾಮ ಪಂಚಾಯತ ಸದಸ್ಯರಾದ ಅನಂತಮ್ಮ. ರಾಘವೇಂದ್ರ ತೆಮ್ಮಿನಾಳ.ನಿಂಗಪ್ಪ ಮಟ್ಟಗೇರಿ. ಲಕ್ಕಪ್ಪ ಕಳಮಳ್ಳಿ ತಾಂಡಾ. ಶರಣಮ್ಮ ಚವ್ಹಾಣ. ಪಾರ್ವತೇಮ್ಮ ನಾರಿನಾಳ. ಚತ್ರಮ್ಮ. ಹುಲಿಗೆಮ್ಮ. ಪದ್ಮಾವತಿ,ಬಸವರಾಜ, ದುರಗಪ್ಪ. ಹನುಮಂತಪ್ಪ. ರವಿಕುಮಾರ. ಚಿದಾನಂದಪ್ಪ. ಮೌಲಪ್ಪ ಹರಿಜನ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.