ಕಿಲಾರಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ದೌರ್ಜನ್ಯ ಕಿರುಕುಳ ಆರೋಪ ಶುದ್ದ ಸುಳ್ಳು ಅಧ್ಯಕ್ಷರು ಮತ್ತು ಕೆಲವು ಸದಸ್ಯರಿಂದ ಸ್ಪಷ್ಟನೆ.
ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ ಕಿಲಾರಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಸದಸ್ಯರ ಆರೋಪ ಶುದ್ಧ ಸುಳ್ಳು ಸತ್ಯಕ್ಕೆ ದೂರವಾಗಿದೆ ಎಂದು ಇಂದು ತಾವರಗೇರಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣೇಗೌಡ ಹನಮನಗೌಡ ಪೋಲಿಸ್ ಪಾಟೀಲ ಪ್ರತಿಕ್ರಿಯೆ ನೀಡಿದರು. ದಿನಾಂಕ 6/8/2025 ರಂದು ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಬೆಯಲ್ಲಿ ಗ್ರಾಮ ಪಂಚಾಯಿತಿ ಕೆಲವು ಸದಸ್ಯರು ಮತ್ತು ಅದ್ಯಕ್ಷರ ನಡುವೆ ವಾಗ್ವಾದ ಆಗಿರುವುದು ಸತ್ಯ ಆದರೆ ನಾನು ಯಾವ ಸದಸ್ಯರ ಮೇಲೆ ದೌರ್ಜನ್ಯ ಮತ್ತು ಕಿರುಕುಳ ನಿಡಿರುವದಿಲ್ಲ, ಆರೋಪ ಮಾಡಿರುವ ಸದಸ್ಯರ ಸಹಕಾರದಿಂದ ನಾನು ಅದ್ಯಕ್ಷನಾದವನು ಹಾಗಾಗಿ ಯಾವುದೇ ಒಬ್ಬ ಸದಸ್ಯನ ಮೇಲೆಯೂ ನನಗೆ ಬಿನ್ನಭಿಪ್ರಾಯ ಇಲ್ಲ. ನನ್ನ ಗ್ರಾಮ ಪಂಚಾಯಿತಿ ಸದಸ್ಯರು ಎಲ್ಲರೂ ನನಗೆ ಆತ್ಮೀಯರು ಎಂದು ಸ್ಪಷ್ಟವಾಗಿ ತಿಳಿಸಿದರು. ಮತ್ತು ನನ್ನ ಮೇಲೆ ಕಿರುಕುಳ ದೌರ್ಜನ್ಯ ಆರೋಪ ಶುದ್ಧ ಸುಳ್ಳು ಎಂದು ಪ್ರತಿಕ್ರಿಯೆ ನೀಡಿದರು. ಜೊತೆಗೆ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ನಮ್ಮ ಮೇಲೆ ಯಾವುದೇ ರೀತಿಯಲ್ಲಿ ಕಿರಕುಳ ದೌರ್ಜನ್ಯ ಮಾಡಿರುವದಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರು ನಮ್ಮ ಪತ್ರಿಕೆಗೆ ಪ್ರತಿಕ್ರಿಯೆ ನಿಡಿದರು. ಈ ಸಂದರ್ಭದಲ್ಲಿ ಅದ್ಯಕ್ಷರಾದ ಶರಣೇಗೌಡ ಪೋಲಿಸ್ ಪಾಟೀಲ್ ಹಾಗೂ ಸದಸ್ಯರಾದ ಚಿದಾನಂದಪ್ಪ ಕಳಮಳ್ಳಿ, ಮೌಲಪ್ಪ ಕಿಡದೂರ, ಪದ್ಮಾವತಿ ಗಂ ಬಾಲರಾಜ, ನಿಂಗಪ್ಪ ಮೇರಟಗೇರಿ, ಹನುಮಂತ ಮಡ್ಡೇರ, ಹನುಮಮ್ಮ ಗಂ ಹನುಮಂತ ಉಪಸ್ಥಿತರಿದ್ದರು,
ವರದಿ :- ಸಂಪಾದಕೀಯ