ಯೋಧರ ಸೇವೆಯಿಂದ ದೇಶದಲ್ಲಿ ನೆಮ್ಮದಿ: ಮುಧೋಳ ಗ್ರಾಮದಲ್ಲಿ ನಿವೃತ್ತ ಸೈನಿಕನಿಗೆ ಗ್ರಾಮಸ್ಥರ ಅದ್ದೂರಿ ಸ್ವಾಗತ.

Spread the love

ಯೋಧರ ಸೇವೆಯಿಂದ ದೇಶದಲ್ಲಿ ನೆಮ್ಮದಿ: ಮುಧೋಳ ಗ್ರಾಮದಲ್ಲಿ ನಿವೃತ್ತ ಸೈನಿಕನಿಗೆ ಗ್ರಾಮಸ್ಥರ ಅದ್ದೂರಿ ಸ್ವಾಗತ.

ಯಲಬುರ್ಗಾ : ಯುವಕರು ತಮ್ಮ ಯೌವ್ವನದ ವೇಳೆಯಲ್ಲಿ ದೇಶದ ರಕ್ಷಣೆಗೆ ಸೈನ್ಯವನ್ನು ಸೇರುತ್ತಾರೆ. ತಮ್ಮ ಜೀವನವನ್ನು ಒತ್ತೆಯಿಟ್ಟು ತಾಯಿ ಭಾರತಾಂಬೆಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನಮ್ಮ ಗ್ರಾಮದ ಹೆಮ್ಮೆಯ ಯೋಧ ಈಶ್ವರ ಆಯಟ್ಟಿ ಬಡತನದಲ್ಲಿ ಸೈನ್ಯವನ್ನು ಸೇರಿ ದೇಶ ಸೇವೆ ಸಲ್ಲಿಸಿ ಸ್ವ ಗ್ರಾಮಕ್ಕೆ ಮರಳಿ ಬಂದು ಗ್ರಾಮದ ಹೆಸರನ್ನು ಇಮ್ಮಡಿ ಗೊಳಿಸಿದ್ದಾರೆ. ಅವರ ಮುಂದಿನ ಜೀವನವು ಸುಖಕರವಾಗಲಿ ಎಂದು ಶ್ರೀಧರ ಮುರಡಿ ಹಿರೇಮಠ ಯಲಬುರ್ಗಾ ಬಸವಲಿಂಗ ಶಿವಚಾರ್ಯ ಮಹಾಸ್ವಾಮಿಗಳು ಆಶೀರ್ವಾಚನ ನೀಡಿದರು.ತಾಲೂಕಿನ ಮುಧೋಳ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಿಂದ 22 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿರು ಸೈನಿಕ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಹೂಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ಹೂಮಳೆಗೈಯುತ್ತಾ, ಪಟಾಕಿ ಸಿಡಿಸುತ್ತಾ, ಹವಾಲ್ದಾರ್ ಸಿದ್ದಪ್ಪ ಎಲ್ಲಪ್ಪ ಅಡುಗುಡಿ ಅವರನ್ನು ಗ್ರಾಮಸ್ಥರು ಮೆರವಣಿಗೆ ಮೂಲಕ ಸ್ವಾಗತಿಸಿದರು.ನಂತರ ಮಾತನಾಡಿದ ಶ್ರೀ ಚನ್ನಬಸವ ಮಹಾಸ್ವಾಮಿಗಳು ಶಾಖಾ ಶಿವಯೋಗ ಮಂದಿರ ನಿಡುಗುಂದಿ ಕೊಪ್ಪ ಅವರು ಮಾತನಾಡಿ ದೇಶಕ್ಕಾಗಿಯೇ ತಮ್ಮ ಜೀನವನವನ್ನು ಮುಡುಪಾಗಿಟ್ಟು ಗಡಿಯಲ್ಲಿ ಹಗಲಿರುಳು ಸೇವೆಗೈದು ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ನಿವೃತ್ತ ಸೈನಿಕ  ಅವರನ್ನು ಮೆರವಣಿಗೆ ಮೂಲಕ ಮುಧೋಳ ಗ್ರಾಮದ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದರು.ಗ್ರಾಮದ ಯೋಧನಿಗೆ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ಸೈನಿಕ ಹವಾಲ್ದಾರ್ ಸಿದ್ದಪ್ಪ ಎಲ್ಲಪ್ಪ ಅಡುಗುಡಿ ಅವರನ್ನು ಗ್ರಾಮಸ್ಥರು ಮೆರವಣಿಗೆ ಮೂಲಕ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಯಲಬುರ್ಗಾ ತಾಲೂಕ ಸೈನಿಕರ ಸಂಘದ ಅಧ್ಯಕ್ಷರು  ಮಲ್ಲಪ್ಪ ಸರ್ವೇ,ಹಾಗೂ ಸರ್ವ ಸದಸ್ಯರು ಸನ್ಮಾನ ಮಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರು ಮಮತಾಜಾಬಿ ಎಚ್ ಹಿರೇಮನಿ ಹಾಗೂ ಸರ್ವ ಸದಸ್ಯರ ವತಿಯಿಂದ ಸನ್ಮಾನ ಮಾಡಿದರು. ಯಲಬುರ್ಗಾ ಪೊಲೀಸ್ ಇಲಾಖೆ ಯಿಂದ ಪಿ ಎಸ್ ಐ ಗುಲಾಮ್ ಹಮ್ಮದ್ ಅವರಿಂದ ಸನ್ಮಾನ ನಡೆಯಿತು. ಗೆಳೆಯರ ಬಳಗದ ವತಿಯಿಂದ ಸನ್ಮಾನ ಹಾಗೂ ಸ್ನೇಹ ಲೋಕ ಗೆಳೆಯರ ಬಳಗದ ವತಿಯಿಂದ ಸನ್ಮಾನ ನಂತರ ಸಮರಸ ಗೆಳೆಯರ ಬಳಗದ ವತಿಯಿಂದ ಸನ್ಮಾನ, ಶ್ರೀ ಹುಲಿಗೆಮ್ಮ ದೇವಿ ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನ ಮಾಡಿದರು. ಹಾಗೂ ಗ್ರಾಮದ ಮುಖಂಡರು ಸನ್ಮಾನ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಮುಖರಾದ  ಪರಸಪ್ಪ ಹುಂಬಿ, ಕಳಕಪ್ಪ ಅಡಗುಡಿ, ಯಲ್ಲಪ್ಪ ಹುನಗುಂದ, ದೇವಪ್ಪ ಕುರಿ, ಖಾದಿರಾಸಾಬ ನೂರುಬಾಷಾ ಶಿಕ್ಷಕರು, ಪರಸ್ಪರ ಸೂಡಿ ಪಿ ಎಸ್ ಐ ಬೆಂಗಳೂರು, ಕನಕಪ್ಪ ಕುಂಬಾರ್ ಶಿಕ್ಷಕರು, ಗಾಂಧೀಜಿ ಅಡಗುಡಿ ,ಹನುಮಪ್ಪ ಕುರಿ, ಮಾರುತಿ ಇಳಗೇರ್, ದೇವಪ್ಪ ಕುರಿ, ಖಾದಿರ್ ಭಾಷ ತೋಳಗಲ್, ಹನುಮಗೌಡ ಇಳಿಗೇರ, ಮಂಜುನಾಥ್ ಮುರುಡಿ, ಶಿವಶರಣಪ್ಪ ಬಳಿಗಾರ್, ಚತ್ರೇಪ್ಪ ಛಲವಾದಿ, ಬಸವರಾಜ್ ಹರಿಜನ ಮಾಜಿ ಸೈನಿಕರು, ಯಲಬುರ್ಗಾ ಮಾಜಿ ಸೈನಿಕರಾದ ಎಸ್ ತೋಟದ, ಗವಿಸಿದ್ದಪ್ಪ ಬನ್ನಿಗೋಳ,  ಸಮರಸ ಗೆಳೆಯರ ಬಳಗದವರು, ಹಾಗೂ ಮುಧೋಳ ಗ್ರಾಮದವರೆಲ್ಲರೂ ಇನ್ನು ಹಲವಾರು ಉಪಸ್ಥಿತರಿದ್ದರು,ದೇಶ ಕಾಯುವ ಸೈನಿಕ, ಅನ್ನ ನೀಡುವ ರೈತ, ವಿದ್ಯೆ ಕಲಿಸಿದ ಗುರುವನ್ನು ಎಂದಿಗೂ ಮರೆಯಬಾರದು. ಬಡತನದ ಕುಟುಂಬದಲ್ಲಿ ಜನಿಸಿ ದೇಶ ಸೇವೆಗೆ ಸೈನ್ನವನ್ನು ಸೇರಿ ದೇಶ ಸೇವೆಗೈದು ಬಂದಿರುವುದು ನನಗೆ ಹೆಮ್ಮೆ ಎನ್ನಿಸುತ್ತಿದೆ ಎಂದರು. ಯೋಧ ಹವಾಲ್ದಾರ್ ಸಿದ್ದಪ್ಪ ಎಲ್ಲಪ್ಪ ಅಡುಗುಡಿ. ವರದಿ : ಹುಸೇನ್ ಮೊತೇಖಾನ್.

Leave a Reply

Your email address will not be published. Required fields are marked *