ಕುಂದಗೋಳ : ಸಿದ್ದುಕೃಷ್ಣ ಕ್ರಿಯೇಷನ್ಸ್ ಅವರ “ಬದಲಾವಣೆ ಜಗದ
ನಿಯಮ” ಎಂಬ ಉಪಶಿರ್ಷಿಕೆಯೊಂದಿಗೆ ಯುವ ನಿರ್ದೇಶಕ ಶಶಾಂಕ್
ಢೇಕಣೆಯವರ ನಿರ್ದೇಶನದ ಸಾಮಾಜಿಕ ಸಂದೇಶ ಸಾರುವ “ಚಿಟ್ಟೆ” ಕನ್ನಡ
ಕಿರುಚಿತ್ರವನ್ನು ಕಲ್ಯಾಣಪುರಮಠದ ಶ್ರೀ ಅಭಿನವ ಬಸವಣ್ಣಜ್ಜನವರು ಲ್ಯಾಪಿ
ಬಟನ್ ಒತ್ತುವ ಮೂಲಕ ಬಿಡುಗಡೆ ಮಾಡಿದರು.
ಚಿತ್ರ ವೀಕ್ಷಿಸಿದ ನಂತರ ಮಾತನಾಡಿದ ಶ್ರೀಗಳು ಯುವ ಸಮುದಾಯ
ಸಾಮಾಜಿಕ ಕಾರ್ಯಗಳಲ್ಲಿ ತಮ್ಮ ಜವಾಬ್ದಾರಿ ಅರಿತು ನಡೆಯಬೇಕು.ಈ ಚಿತ್ರ
ಯುವ ಸಮುದಾಯಕ್ಕೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ.
ಚಿತ್ರತಂಡ ಇನ್ನೂ ಹಲವಾರು ಇಂಥ ಚಿತ್ರಗಳನ್ನು ನಿರ್ಮಿಸಿ ಸಮಾಜಕ್ಕೆ ಒಳ್ಳೆಯ
ಸಂದೇಶ ನೀಡಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಕಿರುಚಿತ್ರದಲ್ಲಿ ಕಲಾವಿದರಾಗಿ ಸಾತ್ವಿಕ್ ಢೇಕಣೆ, ಸಿದ್ದುಕೃಷ್ಣ , ಡಿಂಪಲ್,
ಮಹೇಶಗೌಡ ಪಾಟೀಲ್, ರಾಧಿಕಾ ಮಹೇಶಗೌಡ, ಗೋವಿಂದ್ ಮಾಂಡ್ರೆ,
ಬಸವಂತಪ್ಪ ಹರಕುಣಿ, ಮಾಣಿಕ್ಯ ಚಿಲ್ಲೂರ, ಭೂಪಾಲ್ ಘೋಂಗಡಿ, ಯಲ್ಲಪ್ಪ
ಮೇಗುಂಡಿ,ಮಹ್ಮದ್ ಯಾಸೀನ್, ವಿಕ್ರಮ್ ಕುಮಾರ್, ಶಕ್ತಿ ಪ್ರಸಾದ್, ಖಾದರ್ ಸಾಬ್
ಮೊದಲಾದವರು ಇದ್ದಾರೆ, ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ವೀರು ಪಾಟೀಲ್
ಪುಣೆ , ಕಥೆ-ಸಂಭಾಷಣೆ: ಗೋವಿಂದ್ ಮಾಂಡ್ರೆ. ವಿದ್ಯಾ ಮಾಂಡ್ರೆ. ಪ್ರಸಾಧನ,
ಶಿಖಾ. ಕೇಶವಿನ್ಯಾಸ , ಅಶೋಕ ಕಾಳಭೈರವ, ಗಾಯತ್ರಿ. ವಸ್ತ್ರವಿನ್ಯಾಸ,
ಗುರು ಪಾಟೀಲ್ ಕುಂದಾಪುರ ಸಂಕಲನ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ
ಹಂಡಿಗಿ ಪತ್ರಿಕಾ ಸಂಪರ್ಕ, ಮಹೇಶಗೌಡ ಪಾಟೀಲ್ ಸಹ ನಿರ್ದೇಶನ ಅವರದಿದ್ದು
ಹುಬ್ಬಳ್ಳಿ, ಧಾರವಾಡ, ಲಕ್ಷ್ಮೇಶ್ವರ, ಸಂಶಿ, ಕುಂದಗೋಳ ಮುಂತಾದ ಕಡೆ
ಚಿತ್ರೀಕರಣ ನಡೆಸಲಾಗಿದೆ. ಮತ್ತು ಇಲ್ಲಿನ ಕಲಾವಿದರೆ ಮನೋಜ್ಞವಾಗಿ
ಅಭಿನಯಿಸಿದ್ದಾರೆ ಎಂದು ಚಿತ್ರದ ನಿರ್ದೇಶಕರಾದ ಶಶಾಂಕ್ , ನಿರ್ಮಾಪಕಿ ಶ್ರೀಮತಿ
ರೇಖಾ ಸಿದ್ದುಕೃಷ್ಣ ತಿಳಿಸಿದರು.
ಈ ಸಂದರ್ಭದಲ್ಲಿ ಗುರುಸಿದ್ದಪ್ಪ ಉಪ್ಪಿನ ,ಗೋವಿಂದ ಮಾಂಡ್ರೆ, ಗುರು
ಪಾಟೀಲ, ವೀರೂ ಪಾಟೀಲ, ಸಾತ್ವಿಕ್ ಢೇಕಣಿ, ಮಹೇಶಗೌಡ ಪಾಟೀಲ, ಸಿದ್ದುಕೃಷ್ಣ,
ಭೂಪಾಲ ಘೋಂಗಡಿ, ಶಕ್ತಿಪ್ರಸಾದ, ವಿಕ್ರಮಕುಮಾರ ,ಶ್ರೀಪಾದಗೌಡ
ಪಾಟೀಲ ಮತ್ತು “ಚಿಟ್ಟೆ” ಚಿತ್ರತಂಡದ ಕಲಾವಿದರು ಉಪಸ್ಥಿತರಿದ್ದರು.
**
-ಡಾ.ಪ್ರಭು ಗಂಜಿಹಾಳ.
ಮೊ:9448775346